ರಸ್ತೆಗೆ ಬಾಗಿಕೊಂಡಿರುವ ಬೃಹತ್ ಮರಗಳು ಗಾಳಿ, ಮಳೆಗೆ ಅಪಾಯ ಭೀತಿ

ಉಪ್ಪಳ: ಹೊಸಂಗಡಿ ರೈಲ್ವೇ ಗೇಟ್ ಮೂಲಕ ಹಾದುಹೋಗುವ ಮಂಜೇಶ್ವರ ಒಳರಸ್ತೆಯಲ್ಲಿ ಬೃಹತ್ ಮರಗಳು ರಸ್ತೆಗೆ ಭಾಗಿಕೊಂಡಿದ್ದು ವಾಹನ ಸವಾರಲ್ಲಿ ಆತಂಕ ಉಂಟುಮಾಡುತ್ತಿದೆ. ಮಂಜೇಶ್ವರ ಚರ್ಚ್ ಬಳಿಯಿಂದ ಬ್ಲೋಕ್ ಪಂಚಾ ಯತ್ ಜಂಕ್ಷನ್ ತನಕದ ಎರಡು ಬದಿಯಲ್ಲಿ ಬೃಹತ್ ಗಾತ್ರದ ಸುಮಾರು 20ರಷ್ಟು ಮರಗಳ ರೆಂಬೆಗಳು ಅಲ್ಲಲ್ಲಿ ರಸ್ತೆಗೆ ಭಾಗಿಕೊಂಡಿರುದರಿAದ ವಾಹನ ಸಂಚಾರಕ್ಕೆ ಆತಂಕ ಉಂಟಾಗಿದೆ. ಮಳೆ, ಗಾಳಿಗೆ ಮುರಿದು ಬೀಳುವ ಸಾಧ್ಯತೆ ಇದೆ ಎಂದು ಸಾರ್ವಜನಿಕರು ಆತಂಕವ್ಯಕ್ತಪಡಿಸಿ ದ್ದಾರೆ. ಅಲ್ಲದೆ ಇದೇ ಪರಿಸರದಿಂದ ವಿದ್ಯುತ್ ತಂತಿಗಳು ಹಾದುಹೋಗಿದ್ದು, ಮರದ ರೆಂಭೆ ಮುರಿದು ಬಿದ್ದಲ್ಲಿ ಹಲವಾರು ವಿದ್ಯುತ್ ಕಂಬ ಸಹಿತ ತಂತಿ ಹಾನಿಗೀಡಾಗಿ ಅನಾಹುತ ಸಂಭವಿಸಬಹುದಾಗಿದೆ. ವಿವಿಧ ಸರಕಾರಿ ಕಚೇರಿಗಳು, ಶಾಲೆಗಳು, ಆರಾಧಾನಾ ಲಯಗಳು ,ರೈಲ್ವೇ ನಿಲ್ದಾಣ ಹಾಗೂ ಉದ್ಯಾವರ, ಹೊಸಂಗಡಿ ಮೊದಲಾದ ಪ್ರದೇಶಗಳಿಗೆ ತೆರಳಬಹುದಾದ ಈ ರಸ್ತೆಯಲ್ಲಿ ದಿನನಿತ್ಯ ನೂರಾರು ವಾಹನಗಳು ಸಂಚಾರ ನಡೆಸುತ್ತಿವೆೆ. ಸಂಬಂಧಪಟ್ಟ ಅಧಿಕಾರಿಗಳು ಅಪಾಯ ಆಹ್ವಾನಿಸುವ ಮರದ ರೆಂಬೆಗಳನ್ನು ಕಡಿದು ಸಂಭವಿಸಬಹುದಾದ ಅಪಾಯವನ್ನು ತಪ್ಪಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

RELATED NEWS

You cannot copy contents of this page