ವಾಹನ ಅಪಘಾತದಲ್ಲಿ ಗಾಯಗೊಂಡ ಯುವಕನ ಕೈಯಲ್ಲಿ ಸಿಲುಕಿಕೊಂಡ ಸ್ಟೀಲ್ ಬಳೆಯನ್ನು ತುಂಡರಿಸಿ ತೆಗೆದ ಅಗ್ನಿಶಾಮಕದಳ
ಕಾಸರಗೋಡು: ವಾಹನ ಅಪ ಘಾತದಲ್ಲಿ ಗಾಯಗೊಂಡ ಯುವಕನ ಕೈಯಲ್ಲಿ ಸಿಲುಕಿಕೊಂಡ ಸ್ಟೀಲ್ ಬಳೆಯನ್ನು ಅಗ್ನಿಶಾಮಕದಳ ಮುರಿದು ತೆಗೆದು ಆತನನ್ನು ನೋವಿನಿಂದ ರಕ್ಷಿಸಿದ ಘಟನೆ ನಡೆದಿದೆ. ಬೈಕ್ ಸವಾರ ಗಣೇಶ್ (38) ಎಂಬವರ ಕೈಗೆ ಸಿಲುಕಿದ್ದ ಸ್ಟೀಲ್ ಬಳೆಯನ್ನು ಮುರಿದು ತೆಗೆಯಲಾಗಿದೆ. ಇವರು ನಿನ್ನೆ ಬೈಕ್‌ನಲ್ಲಿ ಮೊಗ್ರಾಲ್ ಪುತ್ತೂರಿನಿಂದ ಕಾಸರಗೋಡಿಗೆ ಬರುತ್ತಿದ್ದ ದಾರಿ ಮಧ್ಯೆ ಚೌಕಿಯಲ್ಲಿ ಬೈಕ್ ಮತ್ತು ಆಟೋ ರಿಕ್ಷಾ ಪರಸ್ಪರ ಢಿಕ್ಕಿ ಹೊಡೆದಿತ್ತು. ಇದರಿಂದ ಗಣೇಶ್‌ರ ಕೈಯ ಎಲುಬು ಮುರಿದು ಹೋಗಿತ್ತು. ಮಾತ್ರವಲ್ಲ ಕೈಯಲ್ಲಿ ಅವರು …