ಪತ್ನಿ ಮೇಲಿನ ಕೋಪದಿಂದ ಇಬ್ಬರು ಮಕ್ಕಳನ್ನು ಕಡಿದು ಕೊಂದ ತಂದೆ: ಓರ್ವ ಪುತ್ರನಿಗೆ  ಗಂಭೀರ

ಬೆಂಗಳೂರು: ಪತ್ನಿ ಮೇಲಿನ ಕೋಪದಿಂದ ವ್ಯಕ್ತಿಯೋರ್ವ ತನ್ನ ಮೂವರು ಮಕ್ಕಳ ಮೇಲೆ ಕೊಡಲಿಯಿಂದ ಕಡಿದಿದ್ದು, ಈಪೈಕಿ ಇಬ್ಬರು ಮಕ್ಕಳು ಸ್ಥಳದಲ್ಲೇ ಸಾವಿಗೀಡಾಗಿ ಓರ್ವ ಪುತ್ರ ಗಂಭೀರಗಾಯಗೊಂಡ ಭೀಬತ್ಸ ಘಟನೆ ಯಾದಗಿರಿ ಸಮೀಪದ  ಹತ್ತಿಕುಣಿ ಗ್ರಾಮದಲ್ಲಿ ನಡೆದಿದೆ. ಹತ್ತಿಕುಣಿ ನಿವಾಸಿ ಶರಣಪ್ಪ ದುಗನೂರ ಎಂಬಾತ ಈ ಕೃತ್ಯವೆಗಿದ್ದಾನೆಂದು ಹೇಳಲಾಗುತ್ತಿದೆ. ನಾಲ್ಕು ವರ್ಷ ಪ್ರಾಯದ ಸ್ಟಾನಿ, ಮೂರು ವರ್ಷದ ಭಾರ್ಗವ ಎಂಬಿಬ್ಬರು ಮಕ್ಕಳು ಕೊಲೆಗೀಡಾಗಿದ್ದಾರೆ. ಎಂಟು ವರ್ಷದ ಹೇಮಂತ ಗಂಭೀರ ಗಾಯಗೊಂಡಿದ್ದು, ಈತನನ್ನು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ನಿನ್ನೆ ಬೆಳಿಗ್ಗೆ ಶರಣಪ್ಪನ …

ಬಿಜೆಪಿ ಗೃಹ ಸಂಪರ್ಕಕ್ಕೆ ಎಂ.ಟಿ. ರಮೇಶ್‌ರಿಂದ ಚಾಲನೆ

ಕಾಸರಗೋಡು: ಸ್ಥಳೀಯಾಡಳಿತ ಚುನಾವಣೆ ಪ್ರಚಾರಾರ್ಥ ಬಿಜೆಪಿ ಆಯೋಜಿಸುವ ಗೃಹ ಸಂಪರ್ಕದ ಜಿಲ್ಲಾ ಮಟ್ಟದ ಉದ್ಘಾಟನೆ ಮೊಗ್ರಾಲ್ ಪುತ್ತೂರು ಪಂಚಾಯತ್‌ನ ಹತ್ತನೇ ವಾರ್ಡ್ ಕೇಳುಗುಡ್ಡೆಯಲ್ಲಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಟಿ. ರಮೇಶ್ ನಿರ್ವಹಿಸಿದರು. ಬಿಜೆಪಿ ಜಿಲ್ಲಾ ಅಧ್ಯಕ್ಷೆ ಅಶ್ವಿನಿ ಎಂ.ಎಲ್, ರಾಜ್ಯ ಸಮಿತಿ ಸದಸ್ಯ ವಿ. ರವೀಂದ್ರನ್, ವಲಯ ಪ್ರಧಾನ ಕಾರ್ಯದರ್ಶಿ ಸುಧಾಮ ಗೋಸಾಡ, ಪ್ರಧಾನ ಕಾರ್ಯದರ್ಶಿಗಳಾದ ಪಿ.ಆರ್. ಸುನಿಲ್, ಮನುಲಾಲ್ ಮೇಲತ್ತ್, ಎನ್. ಬಾಬುರಾಜ್, ಜಿಲ್ಲಾ ಉಪಾಧ್ಯಕ್ಷ ಪಿ. ರಮೇಶ್, ಮಂಡಲ ಅಧ್ಯಕ್ಷ ಗುರುಪ್ರಸಾದ್ ಪ್ರಭು, …

ಆಸ್ಟರ್ ಡಿ.ಎಂ. ಹೆಲ್ತ್‌ಕೇರ್‌ನ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಮುಖ್ಯಮಂತ್ರಿಯಿಂದ ಅ.2ರಂದು ಉದ್ಘಾಟನೆ

ಕಾಸರಗೋಡು: ದೇಶದ ಮುಂಚೂಣಿ ಆರೋಗ್ಯ ಸೇವಾದಾತರಾದ ಆಸ್ಟರ್ ಡಿ.ಎಂ. ಹೆಲ್ತ್ ಕೇರ್, ಕೇರಳದಲ್ಲಿ ಅದರ 8ನೇ ಆಸ್ಪತ್ರೆಯಾದ ಆಸ್ಟರ್ ಮಿಮ್ಸ್ ಕಾಸರಗೋಡು ಇದರ ಚಟುವಟಿಕೆ ಆರಂಭಕ್ಕೆ ಸಿದ್ಧತೆ ನಡೆಸಲಾಗಿದೆ. ವಿಶ್ವೋತ್ತರ ದರ್ಜೆಯ ಆರೋಗ್ಯ ಪರಿಪಾಲನೆ, ರಾಜ್ಯದಲ್ಲಿ  ಇನ್ನಷ್ಟು ಕಡೆಗಳಿಗೆ ತಲುಪಿಸುವುದು ಎಂಬ ಆಸ್ಟರ್‌ನ ಉದ್ದೇಶಕ್ಕೆ ಬಲ ನೀಡಲಿದೆ ಹೊಸ ಆಸ್ಪತ್ರೆ. ಅಕ್ಟೋಬರ್ 2ರಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಆಸ್ಪತ್ರೆಯನ್ನು ಉದ್ಘಾಟಿಸುವರು. ಕರ್ನಾಟಕ ಆರೋಗ್ಯ ಕುಟುಂಬ ಕ್ಷೇಮ ಸಚಿವ ದಿನೇಶ್ ಗುಂಡೂರಾವ್ ಕಾರ್ಯಕ್ರಮದಲ್ಲಿ ಭಾಗವಹಿಸುವರು. 2.1 ಲಕ್ಷ ಚದರ …

ಶಾಲಾ ಅಧ್ಯಾಪಕರಿಗೂ ಗೌಪ್ಯ ವರದಿ ಪರಿಗಣನೆಯಲ್ಲಿ

ತಿರುವನಂತಪುರ: ರಾಜ್ಯದ ಸಾರ್ವತ್ರಿಕ ಶಿಕ್ಷಣ ಇಲಾಖೆ ವ್ಯಾಪ್ತಿಗೊಳಪಟ್ಟ ಎಲ್ಲಾ ಶಾಲಾ ಅಧ್ಯಾಪಕರಿಗೂ ಗೌಪ್ಯ ವರದಿ ಏರ್ಪಡಿಸುವ ವಿಷಯ ಸರಕಾರದ ಪರಿಗಣನೆಯಲ್ಲಿದೆಯೆಂದು ಶಿಕ್ಷಣ ಸಚಿವ ವಿ.ಶಿವನ್ ಕುಟ್ಟಿ ತಿಳಿಸಿದ್ದಾರ. ಶಾಲೆಯಲ್ಲಿ ಪ್ರಾಂಶುಪಾಲರಿಗೆ ಮಾತ್ರವೇ ಅವರ ಸೇವನಾಗುಣಮಟ್ಟ ಹಾಗೂ ಅವರ ವೈಫಲ್ಯಗಳ ಕುರಿತಾದ ಮಾಹಿತಿಗಳನ್ನು ಉನ್ನತಾಧಿಕಾರಿಗಳಿಗೆ ಕಾನ್ಫಡೆನ್ಶಿ ಯಲ್(ಗೌಪ್ಯ) ರಿಪೋರ್ಟ್ ಸಲ್ಲಿಸಲಾಗುತ್ತಿದೆ. ಇಂತಹ ಕ್ರಮವನ್ನು ಇನ್ನು ಶಾಲಾ ಅಧ್ಯಾಪಕರಿ ಗೂ ಅನ್ವಯಗೊಳಿಸುವ ವಿಷಯ ಸರಕಾರದ ಪರಿಶೀಲನೆಯಲ್ಲಿದೆ. ಅಧ್ಯಾಪಕರಿಗಾಗಿರುವ ತರಬೇತಿ ಗಳು, ಮೌಲ್ಯ ನಿರ್ಣಯ ಇತ್ಯಾದಿ ಗಳಲ್ಲಿ ಉದ್ದೇಶಪೂರ್ವಕವಾಗಿ ಭಾಗವಹಿಸದೇ ಇರುವಿಕೆ, …

ಬದಿಯಡ್ಕ ಮಂಡಲ ಕಾಂಗ್ರೆಸ್‌ನಿಂದ ಮಾಜಿ ಶಾಸಕ ಕೆ.ಪಿ.ಕುಂಞಿಕಣ್ಣನ್ ಸಂಸ್ಮರಣೆ

ಬದಿಯಡ್ಕ: ಮಾಜಿ ಶಾಸಕ, ಮಾಜಿ ಕೆಪಿಸಿಸಿ ಕಾರ್ಯದರ್ಶಿ, ಜಿಲ್ಲಾ ಕಾಂಗ್ರೆಸ್ ಸಮಿತಿ ಮಾಜಿ ಅಧ್ಯಕ್ಷರೂ ಆಗಿದ್ದ ಕೆ.ಪಿ. ಕುಂಞಿಕಣ್ಣನ್ ಅವರ ಪ್ರಥಮ ಸಂಸ್ಮರಣಾ ವಾರ್ಷಿಕ ದಿನ ಕಾರ್ಯಕ್ರಮವನ್ನು ಇಂದು ಬದಿಯಡ್ಕ ಈಮಂಡಲ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ನಡೆಸಲಾಯಿತು. ಕಾಂಗ್ರೆಸ್ ಬದಿಯಡ್ಕ ಮಂಡಲ ಕಚೇರಿಯಲ್ಲಿ ನಡೆದ  ಕಾರ್ಯಕ್ರಮದಲ್ಲಿ ಮಂಡಲ ಅಧ್ಯಕ್ಷ ಶ್ಯಾಮ್ ಪ್ರಸಾದ್ ಮಾನ್ಯ ಅಧ್ಯಕ್ಷತೆ ವಹಿಸಿದರು.  ಕರ್ಷಕ ಕಾಂಗ್ರೆಸ್ ಬ್ಲಾಕ್ ಸಮಿತಿ ಅಧ್ಯಕ್ಷ ತಿರುಪತಿ ಕುಮಾರ್ ಭಟ್ ಅವರು ಭಾವಚಿತ್ರಕ್ಕೆ ಪುಷ್ಪಾರ್ಚನೆ ನಡೆಸಿದರು. ನೇತಾರರಾದ ಗಂಗಾಧರ ಗೋಳಿಯಡ್ಕ, …

ಮಾನ್ಯ ಶ್ರೀ ಅಯ್ಯಪ್ಪ ಭಜನಾ ಮಂದಿರದ ಬೆಳ್ಳಿ ಅಭಿಯಾನ ಉದ್ಘಾಟನೆ 28ರಂದು

ಮಾನ್ಯ:  ಮಾನ್ಯ ಶ್ರೀ ಅಯ್ಯಪ್ಪ ಭಜನಾ ಮಂದಿರದ ಬೆಳ್ಳಿ ಅಭಿಯಾನದ ಉದ್ಘಾಟನಾ ಸಮಾರಂಭ ಸೆ. 29ರಂದು ಬೆಳಿಗ್ಗೆ 10 ಗಂಟೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ. ಮಾನ್ಯಶ್ರೀ ಅಯ್ಯಪ್ಪ ಸೇವಾ ಸಂಘದ ಅಧ್ಯಕ್ಷ ನಾರಾಯಣ ಮಣಿಯಾಣಿ ಅಧ್ಯಕ್ಷತೆ ವಹಿಸುವರು. ಧಾರ್ಮಿಕ ಮುಂದಾಳು ಗೋಪಾಲಕೃಷ್ಣ ಪೈ ಬದಿಯಡ್ಕ ಪ್ರಥಮ ಬೆಳ್ಳಿ ಸಮರ್ಪಣೆ ಮಾಡಿ ಉದ್ಘಾಟಿಸುವರು. ಕೊಲ್ಯ ಶ್ರೀದೇವಿ ಮೂಕಾಂಬಿಕಾ ದೇವಸ್ಥಾನದ ಆಡಳಿತ ಮೊಕ್ತೇಸರ ಮಧುಸೂದನ ಅಯ್ಯರ್ ಮುಖ್ಯ ಅತಿಥಿಯಾಗಿರುವರು. ಭಜನಾ ಮಂದಿರದ ಪ್ರತಿಷ್ಠಾ ಗುರುಸ್ವಾಮಿ ಶಂಕರ ದೇವಾಂಗ ಸಹಿತ …

ಪೆರ್ಲ ಎಸ್‌ಎನ್‌ಎಎಲ್‌ಪಿ ಶಾಲಾ ಶೌಚಾಲಯ ಉದ್ಘಾಟನೆ

ಪೆರ್ಲ: ಎಣ್ಮಕಜೆ ಪಂ.ನ ವಾರ್ಷಿಕ ಯೋಜನೆಯಂತೆ ಪೆರ್ಲ ಶ್ರೀ ಸತ್ಯನಾರಾಯಣ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಿರ್ಮಿಸಿದ ಶೌಚಗೃಹದ ಉದ್ಘಾಟನೆಯನ್ನು ಪಂ. ಅಧ್ಯಕ್ಷ ಸೋಮಶೇಖರ ಜೆ.ಎಸ್. ನೆರವೇರಿಸಿದರು. ಈ ಸಂದರ್ಭ ಮಾತನಾಡಿದ ಅವರು, ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿ ನಾಡಿನ ಪ್ರಗತಿಗೆ ಸಹಾಯಕವಾಗಿದ್ದು, ‘ಶಾಲೆ ಸಮಾಜದ ಎಲ್ಲರನ್ನು ಒಂದಾಗಿಸುವ ಪವಿತ್ರ ಆಲಯವಾಗಿದೆ. ಶೈಕ್ಷಣಿಕ ಸಂಸ್ಥೆಗಳು ಸಮಾಜದ ಮುಖ್ಯ ಭೂಮಿಕೆಯಾಗಿದ್ದು, ಅವುಗಳ ಅಭಿವೃದ್ಧಿ ನಮ್ಮೆಲ್ಲರ ಕರ್ತವ್ಯವಾಗಬೇಕು. ಪಂಚಾಯತ್‌ಗೆ ಒಳಪಟ್ಟ ಶಿಕ್ಷಣ ಸಂಸ್ಥೆಗಳ ಮೂಲಭೂತ ಸೌಕರ್ಯಗಳನ್ನು ಪೂರೈಸುವಲ್ಲಿ ನಾವು ಕೆಲಸವನ್ನು ಮಾಡಿದ್ದೇವೆ ಎಂಬ …

ರುದ್ರಭೂಮಿ ಸ್ವಚ್ಛತಾ ಕಾರ್ಯದ ಮೂಲಕ ಪ್ರಧಾನಿ ಜನ್ಮದಿನಾಚರಣೆ

ಬದಿಯಡ್ಕ: ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನಾಚರಣೆಯ ಪ್ರಯುಕ್ತ ಅಗ್ನಿ ಫ್ರೆಂಡ್ಸ್ ಬದಿಯಡ್ಕ ಇವರ ನೇತೃತ್ವದಲ್ಲಿ ಬದಿಯಡ್ಕ ಮೂಕಂಪಾರೆಯ ಹಿಂದೂ ರುದ್ರ ಭೂಮಿಯನ್ನು ಸ್ವಚ್ಛಗೊಳಿಸಲಾಯಿತು. ಕಾಡು ಪೊದೆಗಳನ್ನು ತೆರವುಗೊಳಿಸಿದ ಕಾರ್ಯಕರ್ತರು ಪ್ಲಾಸ್ಟಿಕ್ ಹಾಗೂ ಇನ್ನಿತರ ವಸ್ತುಗಳನ್ನು ಸಂಗ್ರಹಿಸಿದರು. ಅಗ್ನಿ ಫ್ರೆಂಡ್ಸ್ನ ಅಧ್ಯಕ್ಷ ರತೀಶ್, ಅನಿಲ್ ಕುಮಾರ್, ಅವಿನಾಶ್ ರೈ, ಭರತ್, ರಾಜೇಶ್ ಹಾಗೂ ಸದಸ್ಯರು ಪಾಲ್ಗೊಂಡಿದ್ದರು.

ವಿವಾಹ ಭರವಸೆ ನೀಡಿ ಲೈಂಗಿಕ ದೌರ್ಜನ್ಯ: ಕೇರಳೀಯ ಕ್ರಿಕೆಟ್ ಕೋಚ್ ವಿರುದ್ಧ ಕೇಸು

ಬೆಂಗಳೂರು: ವಿವಾಹ ಭರವಸೆ ನೀಡಿ ಯುವತಿಗೆ ದೌರ್ಜನ್ಯಗೈದ ಕೇರಳೀಯ ಕ್ರಿಕೆಟ್ ಕೋಚ್ ವಿರುದ್ಧ ಕೇಸು ದಾಖಲಿಸಲಾಗಿದೆ. ಬೆಂಗಳೂರು ಗೋಟಿಗೆರೆಯ ಖಾಸಗಿ ಶಾಲೆಯ ಕೋಚ್ ಆದ ಅಭಯ್ ಮ್ಯಾಥ್ಯು(40) ವಿರುದ್ಧ  ಕೋಣನಕುಂಟೆ ಪೊಲೀಸರು ದೌರ್ಜನ್ಯ ಪ್ರಕರಣ ಕೇಸು ದಾಖಲಿಸಿದ್ದಾರೆ.  ಪ್ರಕರಣ ದಾಖಲಿಸಿದ ಹಿನ್ನೆಲೆಯಲ್ಲಿ ಆರೋಪಿ ತಲೆಮರೆಸಿಕೊಂ ಡಿದ್ದು ಈತನಿಗಾಗಿ  ಹುಡುಕಾಟ ನಡೆಸಿದ್ದಾರೆ. ಬನ್ನೇರುಘಟ್ಟ ರಸ್ತೆ ಬಡಾವಣೆಯ ಸಂತ್ರಸ್ತೆ  ರಾಜ್ಯ ಮಹಿಳಾ ಆಯೋಗಕ್ಕೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ತನಿಖೆಗೆ ಸೂಚನೆ ನೀಡಲಾಗಿದ್ದು, ಈಗ ಕೇಸು ದಾಖಲಿಸಿ ತನಿಖೆ ನಡೆಸಲಾಗುತ್ತಿದೆ. …

ನಾಪತ್ತೆಯಾದ ವಿದ್ಯಾರ್ಥಿನಿ ತಮಿಳುನಾಡು ಮೂಲಕ ಆಂಧ್ರಕ್ಕೆ ಪರಾರಿಯಾಗಿರುವುದಾಗಿ ಶಂಕೆ: ಬೆನ್ನಟ್ಟಿದ ಪೊಲೀಸರು

ಕಾಸರಗೋಡು: ಚೆಮ್ಮಟ್ಟಂವ ಯಲ್ ನಿವಾಸಿ ಹಾಗೂ ಕಾಞಂಗಾಡ್ ಕಾಲೇಜೊಂದರ ಪ್ರಥಮ ವರ್ಷ ವಿದ್ಯಾರ್ಥಿನಿಯಾದ 19ರ ಹರೆಯದ ಯುವತಿಯನ್ನು ಪತ್ತೆಹಚ್ಚಲು ಪೊಲೀಸರು ತನಿಖೆ ತೀವ್ರಗೊಳಿಸಿದರು. ಕಾಸರಗೋಡು, ಕೊಲ್ಲಂಗಾನ ನಿವಾಸಿಯಾದ ರಶೀದ್‌ನ ಜೊತೆ ತೆರಳಿರುವುದಾಗಿ ಶಂಕಿಸುತ್ತಿರುವುದಾಗಿ ತಾಯಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದರು. ಪ್ರಸ್ತುತ ವ್ಯಕ್ತಿಯನ್ನು ಕೇಂದ್ರೀಕರಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಯುವತಿಯನ್ನು ಕಾರಿನಲ್ಲಿ ಹತ್ತಿಸಿಕೊಂಡು ವಯನಾಡ್ ಮೂಲಕ ತಮಿಳುನಾಡಿಗೆ ತೆರಳಿದ್ದಾರೆ ಎಂಬ ಬಗ್ಗೆ ಪೊಲೀಸರಿಗೆ ಪ್ರಥಮ ಮಾಹಿತಿ ಲಭಿಸಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ತಮಿಳುನಾಡಿಗೆ ತೆರಳಿದ್ದರು. ಆದರೆ ಪೊಲೀಸರ …