ಅಂಗಡಿ ಕೆಲಸದ ಮಧ್ಯೆ ಔಷಧಿ ಖರೀದಿಗೆಂದು ತೆರಳಿದ ಯುವಕ ನಾಪತ್ತೆ

ಮಂಜೇಶ್ವರ: ಉಪ್ಪಳದ ಸೂಪರ್ ಮಾರ್ಟ್‌ನಲ್ಲಿ ಕಾರ್ಮಿಕನಾಗಿದ್ದ ಯುವಕ ನಾಪತ್ತೆಯಾದ ಬಗ್ಗೆ ದೂರಲಾಗಿದೆ. ಮಂಗಲ್ಪಾಡಿ ಸೋಂಕಾಲು ನಿವಾಸಿ ಕೃಪೇಶ್ (22) ನಿನ್ನೆ ಬೆಳಿಗ್ಗೆಯಿಂದ ನಾಪತ್ತೆಯಾಗಿರುವುದಾಗಿ ತಂದೆ ಶಿವಾನಂದ ಮಂಜೇಶ್ವರ ಪೊಲೀಸರಿಗೆ ದೂರು ನೀಡಿದ್ದಾರೆ. ನಿನ್ನೆ ಬೆಳಿಗ್ಗೆ 10.30ಕ್ಕೆ ಸೂಪರ್ ಮಾರ್ಟ್‌ನಿಂದ ಔಷಧಿ ಅಂಗಡಿಗೆ ತೆರಳುವುದಾಗಿ ಹೇಳಿ ಹೋದ ಕೃಪೇಶ್ ಮತ್ತೆ ಮರಳಲಿಲ್ಲವೆಂದು ದೂರಿನಲ್ಲಿ ತಿಳಿಸಲಾಗಿದೆ.   ಮೊಬೈಲ್ ಫೋನ್ ಸ್ವಿಚ್‌ಆಫ್ ಆಗಿದೆ. ಮನೆಗೂ ಅಂಗಡಿಗೂ ಹಾಗೂ ಸಂಬಂಧಿಕರ ಮನೆಗೂ ತೆರಳದ ಹಿನ್ನೆಲೆಯಲ್ಲಿ ಮಂಜೇಶ್ವರ ಠಾಣೆಗೆ ದೂರು ನೀಡಲಾಗಿದ್ದು, ಪೊಲೀಸರು ಕೇಸು …

ಬದುಕಿನ ಪರ್ವ ಮುಗಿಸಿ ಗೃಹಭಂಗದ ಮೂಲಕ ಕಡಿದುಕೊಂಡ ವಂಶವೃಕ್ಷ: ಸಾಹಿತ್ಯ ದಿಗ್ಗಜ ಭೈರಪ್ಪರಿಗೆ ಚಾಮುಂಡಿ ತಪ್ಪಲಲ್ಲಿ ಚಿರನಿದ್ರೆ

ಬೆಂಗಳೂರು: ನಿನ್ನೆ ನಿಧನ ಹೊಂದಿದ ಪದ್ಮಭೂಷಣ, ಸರಸ್ವತಿ ಸಮ್ಮಾನ್ ಪುರಸ್ಕೃತ ದಿಗ್ಗಜ ಎಸ್.ಎಲ್. ಭೈರಪ್ಪ (94)ರಿಗೆ ಚಾಮುಂಡಿ ತಪ್ಪಲಲ್ಲಿ ನಾಳೆ ಅಂತ್ಯಕ್ರಿಯೆ ನಡೆಯಲಿದೆ. ಸರಕಾರಿ ಗೌರವ ಸಲ್ಲಿಕೆಯೊಂದಿಗೆ ಅಂತ್ಯಕ್ರಿಯೆ ನಡೆಯಲಿದ್ದು, ನಿಧನಕ್ಕೆ ರಾಷ್ಟ್ರಪತಿ, ಪ್ರಧಾನಿ, ಕರ್ನಾಟಕ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಸಹಿತ ಹಲವು ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ. ಇಂದು ಮಧ್ಯಾಹ್ನದವರೆಗೆ ಬೆಂಗಳೂರಿನಲ್ಲಿ ಅಂತಿಮ ದರ್ಶನಕ್ಕೆ ಇರಿಸಲಾಗಿದ್ದು, ಆ ಬಳಿಕ ಮೈಸೂರಿನಲ್ಲಿ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುವುದು. ಆರೋಗ್ಯ ಸಮಸ್ಯೆಯನ್ನು ಎದುರಿಸುತ್ತಿದ್ದ ಸಾಹಿತಿ ಭೈರಪ್ಪರವರು ನಿನ್ನೆ ಮಧ್ಯಾಹ್ನ ಬೆಂಗಳೂರಿನ …

ಮಾರಾಟಕ್ಕೆ ತಂದ ಅಫೀಮು ಕೈವಶವಿರಿಸಿದ ಪ್ರಕರಣದ ಆರೋಪಿಗೆ 2 ವರ್ಷ ಕಠಿಣ ಸಜೆ

ಕಾಸರಗೋಡು: 79.3 ಗ್ರಾಂ ಅಫೀಮು ಮಾರಾಟಕ್ಕೆಂದು ಕೈ ವಶವಿರಿಸಿದ್ದ ಪ್ರಕರಣದ ಆರೋಪಿಗೆ ಎರಡು ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು 20,000 ರೂ. ದಂಡ ವಿಧಿಸಲಾಗಿದೆ. ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಕ್ಷನ್ ನ್ಯಾಯಾಲಯ (2) ಇದರ ನ್ಯಾಯಾಧೀಶೆ ಕೆ. ಪ್ರಿಯಾ ಅವರು ಮುಟ್ಟತ್ತೋಡಿ ಎರುಂದುಕಡವು ನಿವಾಸಿ ಸೈಯದ್ ಫ್ಯಾಸಿಸ್‌ಗೆ ಶಿಕ್ಷೆ ವಿಧಿಸಿದ್ದಾರೆ. ವಿದ್ಯಾನಗರ ಪೊಲೀಸ್ ಸಬ್-ಇನ್ಸ್ಪೆಕ್ಟರ್ ಎ. ಸಂತೋಷ್ ಕುಮಾರ್ ಆರೋ ಪಿಯನ್ನು ಮಾದಕ ದ್ರವ್ಯಗಳ ಜೊತೆಗೆ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಕಾಸರ ಗೋಡು ಠಾಣೆ ಇನ್ಸ್ಪೆಕ್ಟರ್ …

ಲೈಂಗಿಕ ಚೇಷ್ಠೆ ತೋರಿಸಿದ ಪ್ರಕರಣ: ಆರೋಪಿಗೆ ಸಜೆ, ಜುಲ್ಮಾನೆ

ಕಾಸರಗೋಡು:  ಒಂಭತ್ತು ಮತ್ತು ಆರು ವರ್ಷದ ಬಾಲಕಿ ಯರ ಮುಂದೆ ಲೈಂಗಿಕ ಚೇಷ್ಠೆ ತೋರಿದ ಪ್ರಕರಣದ ಆರೋಪಿಗೆ ಹೊಸದುರ್ಗ ಕ್ಷಿಪ್ರ ವಿಶೇಷ ಪೋಕ್ಸೋ ನ್ಯಾಯಾಲಯ ಒಂದು ವರ್ಷ ಸಜೆ ಮತ್ತು ಮೂರು ತಿಂಗಳ ಸಜೆ ಹಾಗೂ 10,500 ರೂ. ಜುಲ್ಮಾನೆ ವಿಧಿಸಿ ತೀರ್ಪು ನೀಡಿದೆ.ಚಿತ್ತಾರಿಕ್ಕಲ್ ಪಾರಕಡವಿನ ಕುದಿರುಮ್ಮಲ್ ಹೌಸ್‌ನ ಸಂದೀಪ್ (40) ಎಂಬಾತನಿಗೆ ಈ ಶಿಕ್ಷೆ ವಿಧಿಸಲಾಗಿದೆ. ಜುಲ್ಮಾನೆ ಪಾವತಿಸದಿದ್ದಲ್ಲಿ ಆರೋಪಿ ಆರು ತಿಂಗಳು ಮತ್ತು ಒಂದು ವಾರ ಹೆಚ್ಚುವರಿ ಸಜೆ ಅನುಭವಿಸಬೇಕಾಗಿದೆ ಯೆಂದೂ ತೀರ್ಪಿನಲ್ಲಿ ತಿಳಿಸಲಾಗಿದೆ. …

ರಾಜ್ಯದಲ್ಲಿ ಮತ್ತೆ ಮಳೆ: ಐದು ಜಿಲ್ಲೆಗಳಲ್ಲಿ ಜಾಗ್ರತಾ ನಿರ್ದೇಶ

ಕಾಸರಗೋಡು: ರಾಜ್ಯದಲ್ಲಿ ಅಲ್ಪ ವಿರಾಮದ ಬಳಿಕ ಮತ್ತೆ ಮಳೆ ತೀವ್ರ ಗೊಳ್ಳಲಿದೆ ಎಂದು ಕೇಂದ್ರ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಮುಂದಿನ ಐದು ದಿನ ರಾಜ್ಯದಲ್ಲಿ ವಿವಿಧ ಜಿಲ್ಲೆಗಳಲ್ಲಿ ಸಾಮಾನ್ಯ ಮಳೆ ಹಾಗೂ ಇಂದು, ನಾಳೆ, ಶನಿವಾರಗ ಳಂದು ಕೆಲವು ಕಡೆ ತೀವ್ರ ಮಳೆಗೆ ಸಾಧ್ಯತೆ ಇದೆ ಎಂದು ಕೇಂದ್ರ ಹವಾಮಾನ ಇಲಾಖೆ ತಿಳಿಸಿದೆ. ತೀವ್ರ ಮಳೆಯನ್ನು ಗಣನೆಗೆ ತೆಗೆದು ಕೇಂದ್ರ ಹವಾಮಾನ ಇಲಾಖೆ ವಿವಿಧ ಜಿಲ್ಲೆಗಳಲ್ಲಿ ಅಲರ್ಟ್ ಘೋಷಿಸಿದೆ. ಇಂದು ಆಲಪ್ಪುಳ, ಕೋಟಯಂ, ಇಡುಕ್ಕಿ, ಎರ್ನಾಕುಳಂ, …

ಅಸೌಖ್ಯ: ಚಿಕಿತ್ಸೆಯಲ್ಲಿದ್ದ ಮಹಿಳೆ ನಿಧನ

ಕುಂಬಳೆ: ಕೊಡ್ಯಮ್ಮೆ ಊಜರ್‌ನ ದಿವಂಗತ ಮುಹ ಮ್ಮದ್ ಕುಂಞಯವರ ಪತ್ನಿ ಬೀಫಾತಿಮಾ (67) ನಿಧನರಾದರು. ಅಸೌಖ್ಯ ನಿಮಿತ್ತ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಮೃತರು ಮಕ್ಕಳಾದ ಹಮೀದ್ ದುಬೈ, ಇಬ್ರಾಹಿಂ, ಸಿದ್ದಿಕ್, ಜೈನಬಾ, ಜಮೀಲಾ, ಮಿಸ್ರಿಯಾ. ಅಳಿಯಂದಿರಾದ ಮುಹಮ್ಮದ್ ಕುಂಞ ಪೆರಿಂಗಡಿ, ಅಬ್ದುಲ್ಲಾ ಕುಂಬಳೆ (ಕಾರವಲ್), ಮುಹಮ್ಮದ್, ಸೊಸೆಯಂದಿರಾದ ನಸೀಮ, ಆಸೀನಾ, ಮುರ್ಷಿತಾ. ಒಡಹುಟ್ಟಿದವರಾದ ಬಾಪಿಂಞÂ, ಅಸ್ಯುಮ್ಮ, ಮುಹಮ್ಮದ್ ಕುಂಞ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

ನಿರ್ಮಾಣಪೂರ್ತಿಗೊಳ್ಳುತ್ತಿರುವ ಉಪ್ಪಳ ಅಗ್ನಿಶಾಮಕದಳ ಕಟ್ಟಡ

ಉಪ್ಪಳ: ಕಳೆದ 15 ವರ್ಷಗಳಿಂದ ಚೆರುಗೋಳಿ ರಸ್ತೆಯ ಪಂಚಾಯತ್ ಕಟ್ಟಡದಲ್ಲಿ ಕಾರ್ಯಚರಿಸುತ್ತಿರುವ ಉಪ್ಪಳ ಅಗ್ನಿಶಾಮಕ ದಳಕ್ಕೆ ಮಂಗಲ್ಪಾಡಿ ಪಂಚಾಯತ್‌ನ ಪ್ರತಾಪನಗರ 7ನೇ ವಾರ್ಡ್ ಗುಳಿಗ ಬನದ ಪರಿಸರದಲ್ಲಿ ನೂತನ ಕಟ್ಟಡ ನಿರ್ಮಾಣಗೊಳ್ಳುತ್ತಿದೆ. ಕಳೆದ ಏಳು ತಿಂಗಳಿAದ ಕಾಮಗಾರಿ ನಡೆಯುತ್ತಿದೆ. ಕಟ್ಟಡ ನಿರ್ಮಾಣಗೊಂಡು ಸಾರಣೆ ಕೆಲಸಗಳು ನಡೆಯುತ್ತಿದ್ದು, ಶ್ರೀಘ್ರದಲ್ಲಿ ಕಟ್ಟಡ ನಿರ್ಮಾಣ ಕೆಲಸಗಳು ಪೂರ್ತಿಗೊಳ್ಳಲಿದೆ. ಈಗ ಕಾರ್ಯಚರಿಸುತ್ತಿ ರುವ ಕೇಂದ್ರ 2010 ಎಪ್ರಿಲ್‌ನಲ್ಲಿ ಆರಂ ಭಗೊಂಡಿತ್ತು. ಇಲ್ಲಿ ಸೌಕರ್ಯದ ಕೊರತೆ ಉಂಟಾಗಿದ್ದು, ಇದರಿಂದ ಅಧಿಕಾರಿಗಳು ಸಂಕಷ್ಟಕ್ಕೀಡಾಗಿದ್ದಾರೆ. ಈಗ ನಿರ್ಮಾಣಗೊಳ್ಳುತ್ತಿರುವ …

ತಲೆಮರೆಸಿಕೊಂಡಿದ್ದ ಕಾಪಾ ಪ್ರಕರಣದ ಆರೋಪಿ ಸೆರೆ

ಹೊಸದುರ್ಗ: ತಲೆಮರೆಸಿ ಕೊಂಡಿದ್ದ ಕಾಪಾ ಪ್ರಕರಣ ಸಹಿತ ಕುಖ್ಯಾತ ಅಪರಾಧಿ, ಮಾದಕ ಪದಾರ್ಥ ವ್ಯಾಪಾರಿಯಾಗಿದ್ದ ಆರೋಪಿಯನ್ನು ಅಂಬಲತ್ತರ ಪೊಲೀಸರು ಸೆರೆ ಹಿಡಿದು ಜೈಲಿಗಟ್ಟಿದರು. ೭ನೇ ಮೈಲು ಕಾಯಲಡ್ಕಂ ನಿವಾಸಿ ರಂಶೀದ್ ಅಲಿಯಾಸ್ ಕಿಚ್ಚು 33)ನನ್ನು ಸೆರೆ ಹಿಡಿಯಲಾಗಿದೆ. ಕಾಪಾ ಹೇರಿದ ಹಿನ್ನೆಲೆಯಲ್ಲಿ ಈತ ಪರಾರಿಯಾಗಿ ವಿದೇಶದಲ್ಲಿದ್ದನು. ಆ ಬಳಿಕ ಬೆಂಗಳೂರಿಗೆ ತಲುಪಿ ರೈಲು ಮೂಲಕ ಕಾಞಂಗಾಡ್ ರೈಲ್ವೇ ನಿಲ್ದಾಣಕ್ಕೆ ತಲುಪಿದಾಗ ಈತನನ್ನು ಸೆರೆ ಹಿಡಿಯಲಾಗಿದೆ. ಕಾಸರಗೋಡು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ವಿ. ವಿಜಯಭರತ್ ರೆಡ್ಡಿಯವರಿಗೆ ಲಭಿಸಿದ ರಹಸ್ಯ …

ಬಿಜೆಪಿ ಬದಿಯಡ್ಕ ಪಂಚಾಯತ್ ಕಾರ್ಯಕರ್ತರ ಸಮಾವೇಶ, ರಜತ ಶಂಕರ ಗೌರವಾಭಿನಂದನೆ

ಬದಿಯಡ್ಕ: ಬಿಜೆಪಿ ಬದಿಯಡ್ಕ ಪಂಚಾಯತ್ ಕಾರ್ಯಕರ್ತರ ಸಮಾವೇಶ ಹಾಗೂ ರಜತ ಶಂಕರ ಗೌರವಾಭಿನಂದನೆ ಕಾರ್ಯಕ್ರಮ ಅಕ್ಟೋಬರ್ 5 ರಂದು ಬೆಳಗ್ಗೆ 9.30 ರಿಂದ ಬೇಳ ವಿಷ್ಣುಮೂರ್ತಿ ನಗರದ ವಿ.ಎಂ ಸಭಾಂಗಣದಲ್ಲಿ ನಡೆಯಲಿದೆ. 25 ವರ್ಷಗಳ ಕಾಲ ಜನಪ್ರತಿನಿಧಿಯಾಗಿ, ಶಂಕರ ಮೆಂಬರ್ ಎಂದೇ ಪರಿಚಿತರಾಗಿರುವ ಡಿ.ಶಂಕರ ಅವರಿಗೆ ಬಿಜೆಪಿ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಗೌರವಾಭಿನಂದನೆ ಸಲ್ಲಿಸುವರು. ಕಾರ್ಯಕ್ರಮವನ್ನು ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಶೋಭಾ ಸುರೇಂದ್ರನ್ ಉದ್ಘಾಟಿಸುವರು. ವಿಶ್ವ ಹಿಂದೂ ಪರಿಷತ್ ಜಿಲ್ಲಾ ಅಧ್ಯಕ್ಷ ಜಯದೇವ ಖಂಡಿಗೆ ಅಧ್ಯಕ್ಷತೆ …

ಪ್ರೆಸ್‌ಕ್ಲಬ್ ಜಂಕ್ಷನ್‌ನಲ್ಲಿ ಸಂಚಾರ ನಿಯಂತ್ರಣ

ಕಾಸರಗೋಡು: ಕಾಸರಗೋಡು ಪ್ರಸ್‌ಕ್ಲಬ್ ಜಂಕ್ಷನ್‌ನಲ್ಲಿ ಇಂದಿನಿಂದ ಅ.15ರವರೆಗೆ ಸಂಚಾರ ನಿಯಂತ್ರಣ ಏರ್ಪಡಿಸಲಾಗಿದೆ. ರಸ್ತೆ ಕಾಮಗಾರಿ ಯಂಗವಾಗಿ ಫ್ರೀಲೆಫ್ಟ್ ಭಾಗವನ್ನು ಪೂರ್ಣವಾಗಿ ಮುಚ್ಚುಗಡೆಗೊಳಿಸಿ ಸಂಚಾರ ನಿಯಂತ್ರಣ ಏರ್ಪಡಿಸಲಾಗುತ್ತಿದೆ. ಕಾಸರಗೋಡು ಎಚ್‌ಪಿ ಗ್ಯಾಸ್ ಅಂಗಡಿಯಿಂದ ಕಿಡ್ಸ್ ಗೋಲ್ಡ್ ಜ್ಯುವೆಲ್ಲರಿವರೆಗಿರುವ ಎಡಭಾಗದ ರಸ್ತೆಯಲ್ಲಿ ಹಾನಿಗೊಂಡ ಭಾಗವನ್ನು ದುರಸ್ತಿ ನಡೆಸಲಾಗುವುದು. ಸಂಚಾರ ನಿಯಂತ್ರಣವನ್ನು ಪಾಲಿಸಬೇಕೆಂದು ಲೋಕೋಪಯೋಗಿ ವಿಭಾಗ ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ ತಿಳಿಸಿದ್ದಾರೆ.