ರಾಷ್ಟ್ರೀಯ ಹೆದ್ದಾರಿ ಬದಿ ಗಾಂಜಾ ಗಿಡ ಪತ್ತೆ
ಕುಂಬಳೆ: ಒಂದು ಮೀಟರ್‌ನಷ್ಟು ಎತ್ತರವುಳ್ಳ ಗಾಂಜಾ ಗಿಡ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಬೆಳೆಸಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮಂಜೇಶ್ವರ ರಾಷ್ಟ್ರೀಯ ಹೆದ್ದಾರಿಯ ಸರ್ವೀಸ್ ರಸ್ತೆ ಸಮೀಪದ ಟ್ರಕ್ ಪಾರ್ಕಿಂಗ್ ಏರಿಯಾದಲ್ಲಿ ಮೂರು ಅಡಿ ಎತ್ತರದ ಗಾಂಜಾ ಗಿಡ ಬೆಳೆದು ನಿಂತಿರುವುದು ಕಂಡುಬಂದಿದೆ. ಈ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಕುಂಬಳೆ ಅಬಕಾರಿ ಅಧಿಕಾರಿಗಳು ಸ್ಥಳಕ್ಕೆ ತಲುಪಿ ಪರಿಶೀಲನೆ ನಡೆಸಿದರು. ಅಬಕಾರಿ ಇನ್‌ಸ್ಪೆಕ್ಟರ್ ಕೆ.ವಿ. ಶ್ರಾವಣ್ ಹಾಗೂ ತಂಡ ಗಾಂಜಾ ಗಿಡವನ್ನು ಕಸ್ಟಡಿಗೆ ತೆಗೆದುಕೊಂಡಿದೆ. ಈ ಸಂಬಂಧ ಎನ್‌ಡಿಪಿಎಸ್ ಪ್ರಕರಣವನ್ನು ಅಬಕಾರಿ …