ನೀಲೇಶ್ವರದಲ್ಲಿ ನಿಯಂತ್ರಣ ತಪ್ಪಿದ ಲಾರಿ ಮಗುಚಿ ಅಪಘಾತ

ಹೊಸದುರ್ಗ: ನೀಲೇಶ್ವರ ಕರುವಾಚ್ಚೇರಿಯಲ್ಲಿ ಲಾರಿ ನಿಯಂತ್ರಣ ತಪ್ಪಿ ಮಗುಚಿದೆ. ಆದರೆ ಯಾರಿಗೂ ಅಪಾಯ ಉಂಟಾಗಿಲ್ಲ. ಮಂಗಳೂರಿನಿಂದ ಹಳೆಯ ಪೇಪರ್‌ಗಳ ಸಹಿತ ಎರ್ನಾಕುಳಂಗೆ ತೆರಳುತ್ತಿದ್ದ ಲಾರಿ ಇಂದು ಬೆಳಿಗ್ಗೆ ಮಗುಚಿದೆ. ಸರ್ವಿಸ್ ರಸ್ತೆಯಿಂದ ಪ್ರಧಾನ ರಸ್ತೆಗೆ ಸಂಚರಿಸುವ ವೇಳೆ ನಿಯಂತ್ರಣ ತಪ್ಪಿ ಮಗುಚಿದೆ. ಪೊಲೀಸರು ಸ್ಥಳಕ್ಕೆ ತಲುಪಿದ್ದಾರೆ.

ಮಧೂರು ಪಂ.ನ ಸಾರ್ವಜನಿಕ ಸ್ಮಶಾನ ತೆರೆದುಕೊಡಲು ಕಾಂಗ್ರೆಸ್ ಆಗ್ರಹ

ಮಧೂರು: ಪಂಚಾಯತ್‌ನಲ್ಲಿ ಒಂದೂವರೆ ಕೋಟಿ ರೂ.ಗಳಷ್ಟು ವೆಚ್ಚಮಾಡಿ ನಿರ್ಮಿಸಿದ ಗ್ಯಾಸ್‌ನಿಂದ ಕಾರ್ಯಾಚರಿಸುವ ಸಾರ್ವಜನಿಕ ಸ್ಮಶಾನವನ್ನು ಇದುವರೆಗೆ ತೆರೆದುಕೊಡ ದಿರುವುದರಲ್ಲಿ ಪಂಚಾಯತ್ ಉದಾಸೀನತೆ ತೋರುತ್ತಿದೆಯೆಂದು ಮಧೂರು ಮಂಡಲ ಕಾಂಗ್ರೆಸ್ ಸಮಿತಿ ಆರೋಪಿಸಿದೆ. ಜನರ ತೆರಿಗೆ ಹಣ ಉಪಯೋಗಿಸಿ ಸ್ಥಾಪಿಸಿದ ಸ್ಮಶಾನದ ಉಪಕರಣಗಳು ತುಕ್ಕುಹಿಡಿದು ನಾಶವಾಗುತ್ತಿದೆಯೆಂದೂ ಕಾಂಗ್ರೆಸ್ ದೂರಿದ್ದು, ಶೀಘ್ರ ತೆರೆದು ಜನರಿಗೆ ಲಭ್ಯಗೊಳಿಸುವಂತೆ ಮಾಡಬೇಕೆಂದು ಸಮಿತಿ ಆಗ್ರಹಿಸಿದೆ.ತ್ರಿಸ್ತರ ಚುನಾವಣೆಗೆ ಪಕ್ಷವನ್ನು ಸಿದ್ಧಗೊಳಿಸುವುದರ ಹಿನ್ನೆಲೆಯಲ್ಲಿ ಮಧೂರು ಮಂಡಲದ ೩ನೇ ವಾರ್ಡ್ ಸಮಿತಿ ರೂಪೀಕರಣ ಸಭೆಯನ್ನು ಮತ್ಸ್ಯ ತೊಯಿಲಾಳಿ ಕಾಂಗ್ರೆಸ್ ಅಖಿಲ …

ಮಂಜೇಶ್ವರ ಉಪಜಿಲ್ಲಾ ಕಲೋತ್ಸವ ಅವಲೋಕನ ಸಭೆ, ಲಾಂಛನ ಬಿಡುಗಡೆ

ಪೈವಳಿಕೆ : ಪೈವಳಿಕೆ ನಗರ ಸರಕಾರಿ ಉನ್ನತ ಪ್ರೌಢಶಾಲೆಯ ಮಂಜೇಶ್ವರ ಉಪಜಿಲ್ಲಾ ಶಾಲಾ ಕಲೋತ್ಸವದ ಅವಲೋಕನ ಸಭೆ ಜರಗಿತು. ಪೈವಳಿಕೆ ನಗರ ಶಾಲೆಯ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಅಬ್ದುಲ್ ರಝಾಕ್ ಚಿಪ್ಪಾರು ಉದ್ಘಾಟಿಸಿದರು. ವಾರ್ಡು ಪ್ರತಿನಿದಿs ಸುನೀತಾ ವಲ್ಟಿ ಡಿಸೋಜ ಅಧ್ಯಕ್ಷತೆ ವಹಿಸಿದರು. ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿ ಜೋರ್ಜ್ ಕ್ರಾಸ್ತಾ ಪ್ರಾಸ್ತಾವಿಕ ಮಾತುಗಳನ್ನಾಡಿ ಕಲೋತ್ಸವದ ಲಾಂಛsನ ಅನಾವರಣಗೊಳಿಸಿದರು. ಮುಖ್ಯ ಶಿಕ್ಷಕರ ವೇದಿಕೆಯ ಕಾರ್ಯ ದರ್ಶಿ ಶ್ಯಾಮ್ ಭಟ್ ವಿವಿಧ ಸಮಿತಿ ಗಳ ಜವಾಬ್ದಾರಿಗಳ ಕುರಿತು ಮಾಹಿತಿ …

ಮಾನ್ಯ ಅಯ್ಯಪ್ಪ ಸೇವಾ ಸಂಘ ಮಹಾಸಭೆ ಪದಾಧಿಕಾರಿಗಳ ಆಯ್ಕೆ

ಮಾನ್ಯ: ಮಾನ್ಯ ಶ್ರೀ ಅಯ್ಯಪ್ಪ ಸೇವಾ ಸಂಘದ ಮಹಾಸಭೆ ಇಲ್ಲಿನ ಅಯ್ಯಪ್ಪ ಭಜನಾ ಮಂದಿರದ ಸಭಾ ಭವನದಲ್ಲಿ ಜರಗಿತು. ಮಂದಿರ ಸಮಿತಿ ಅಧ್ಯಕ್ಷ ನಾರಾಯಣ ಮಣಿಯಾಣಿ ಮಾನ್ಯ ಅಧ್ಯಕ್ಷತೆ ವಹಿಸಿದರು. ಮಂದಿರದ ಗೌರವಾಧ್ಯಕ್ಷ ಮಾನ ಮಾಸ್ತರ್ ಮಾನ್ಯ ಉದ್ಘಾಟಿಸಿದರು.  ಮಂದಿರದ ಗುರು ಸ್ವಾಮಿ ಕುಂಞಪ್ಪು, ರಾಮ ಗುರುಸ್ವಾಮಿ, ವೆಂಕಪ್ಪು ಗುರುಸ್ವಾಮಿ, ರವಿಶಂಕರ ಎಂ.ವಿ, ಮಂದಿರದ ಮಾಜಿ ಅಧ್ಯಕ್ಷ ಸಂತೋಷ್ ಕುಮಾರ್ ಮಾನ್ಯ, ಮಾಜಿ ಕಾರ್ಯದರ್ಶಿ ನಿತ್ಯಾನಂದ ಮಾನ್ಯ ಮೊದಲಾದವರು ಮಾತನಾಡಿದರು. ಕೋಶಾಧಿಕಾರಿ ಸುಂದರ ಶೆಟ್ಟಿ ವರದಿ ವಾಚಿಸಿದರು. …

ಅಮ್ಲೆಟ್, ಬಾಳೆಹಣ್ಣು ಗಂಟಲಲ್ಲಿ ಸಿಲುಕಿ ವೆಲ್ಡಿಂಗ್ ಕಾರ್ಮಿಕ ಮೃತ್ಯು

ಬದಿಯಡ್ಕ: ಅಮ್ಲೆಟ್ ಹಾಗೂ ಬಾಳೆಹಣ್ಣು ಗಂಟಲಲ್ಲಿ ಸಿಲುಕಿ ವೆಲ್ಡಿಂಗ್ ಕಾರ್ಮಿಕ ಮೃತಪಟ್ಟ ದಾರುಣ ಘಟನೆ ಸಂಭವಿಸಿದೆ. ಬದಿಯಡ್ಕ ಬಳಿಯ ಬಾರಡ್ಕ ಚುಳ್ಳಿಕ್ಕಾನ ನಿವಾಸಿ ದಿ| ಪೊಕ್ರಯಿಲ್ ಡಿ’ಸೋಜಾ ಎಂಬವರ ಪುತ್ರ ವಿಸಾಂತಿ ಡಿ’ಸೋಜಾ (52) ಮೃತಪಟ್ಟ  ದುರ್ದೈವಿಯಾಗಿದ್ದಾರೆ. ನಿನ್ನೆ ಸಂಜೆ 4.30ರ ವೇಳೆ ಘಟನೆ ಸಂಭವಿಸಿದೆ. ಬಾರಡ್ಕದ  ಗೂಡಂಗಡಿಯಿಂದ ಇವರು ಅಮ್ಲೆಟ್ ಹಾಗೂ ಬಾಳೆಹಣ್ಣು   ಖರೀದಿಸಿ ಸೇವಿಸುತ್ತಿದ್ದಾಗ ಗಂಟಲಲ್ಲಿ ಸಿಲುಕಿದೆಯೆನ್ನಲಾಗುತ್ತಿದೆ. ಉಸಿರಾಟ ತೊಂದರೆ ಎದುರಿಸುತ್ತಿದ್ದ ಇವರನ್ನು ಕಂಡ ಇತರರು ಕೂಡಲೇ ಆಸ್ಪತ್ರೆಗೆ ತಲುಪಿಸಿ ದರೂ ಜೀವ ರಕ್ಷಿಸಲಾಗಲಿಲ್ಲ. …

ಸ್ಕೂಟರ್‌ನ ಹಿಂಬದಿಗೆ ಕೆಎಸ್‌ಆರ್‌ಟಿಸಿ ಬಸ್ ಢಿಕ್ಕಿ ಹೊಡೆದು ವ್ಯಕ್ತಿ ಮೃತ್ಯು

ಕಾಸರಗೋಡು: ಸ್ಕೂಟರ್‌ನ ಹಿಂಬದಿಗೆ  ಕೆಎಸ್‌ಆರ್‌ಟಿಸಿ ಬಸ್ ಢಿಕ್ಕಿ ಹೊಡೆದು  ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ನಡೆದಿದೆ. ಕಳನಾಡು ರೈಲ್ವೇ ನಿಲ್ದಾಣ ಸಮೀಪದ ಪಯೋಟ ಹೌಸ್‌ನ ಮುಹಮ್ಮದ್ ಅಶ್ರಫ್ ಪಯೋಟ (64) ಮೃತಪಟ್ಟ ವ್ಯಕ್ತಿ. ಇಂದು ಬೆಳಿಗ್ಗೆ 8ಗಂಟೆ ವೇಳೆ ಕೆಎಸ್‌ಟಿಪಿ ರಸ್ತೆಯ ಕಳನಾಡಿನಲ್ಲಿ ಅಪಘಾತ ಉಂಟಾಗಿದೆ. ಮುಹಮ್ಮದ್ ಅಶ್ರಫ್ ಉದುಮ ಭಾಗಕ್ಕೆ ಸ್ಕೂಟರ್‌ನಲ್ಲಿ ತೆರಳುತ್ತಿದ್ದರು. ಕಳನಾಡಿಗೆ ತಲುಪಿದಾಗ ಬಂದ ಕೆಎಸ್‌ಆರ್‌ಟಿಸಿ ಬಸ್ ಸ್ಕೂಟರ್‌ಗೆ ಢಿಕ್ಕಿ ಹೊಡೆದಿದೆ.  ಗಂಭೀರ ಗಾಯಗೊಂಡ ಮುಹಮ್ಮದ್ ಅಶ್ರಫ್‌ರನ್ನು ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ಗಲ್ಫ್ …

ಪತ್ನಿಯ ಮನೆಗೆ ಬಂದ ಯುವಕ ತೊಟ್ಟಿಲಿನ ಹಗ್ಗದಲ್ಲಿ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಉಪ್ಪಳ: ಪತ್ನಿಯ ಮನೆಗೆ ಬಂದ ಯುವಕ ತೊಟ್ಟಿಲಿನ ಹಗ್ಗದಲ್ಲಿ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ ಯಾಗಿದ್ದಾನೆ. ಕರ್ನಾಟಕದ ಬೆಳ್ತಂಗಡಿ ದಿಡುಪೆ ಸಿಂಗನಾರ್ ಎಂಬಲ್ಲಿನ  ದಿ| ಎಲ್ಯಣ್ಣ ಎಂಬವರ ಪುತ್ರ ಎಸ್.ಎ. ಸುರೇಶ್ (34) ಮೃತಪಟ್ಟ ವ್ಯಕ್ತಿ. ಎರಡು ದಿನಗಳ ಹಿಂದೆ ಸುರೇಶ್ ಬಾಯಾರು ಬಳಿ ಬಲಿಪಗುರಿ ಮೇಗಿನಪಂಜದಲ್ಲಿರುವ ಪತ್ನಿ ಮನೆಗೆ ಬಂದಿದ್ದರು. ನಿನ್ನೆ ಮಧ್ಯಾಹ್ನ   ಮನೆ ಕೊಠಡಿಗೆ ಹೋದ ಇವರು ದೀರ್ಘ ಹೊತ್ತಾದರೂ ಹೊರಗೆ ಬಾರದ ಹಿನ್ನೆಲೆಯಲ್ಲಿ ಮನೆಯವರು ನೋಡಿದಾಗ ಬಾಗಿಲು ಒಳಗಿನಿಂದ ಚಿಲಕ ಹಾಕಿದ …

ಜಿಎಸ್‌ಟಿ ಸುಧಾರಣೆ ವಿದ್ಯುಕ್ತವಾಗಿ ಜ್ಯಾರಿಗೆ: 36 ಜೀವ ಉಳಿಸುವ ಔಷಧಗಳಿಗೆ ತೆರಿಗೆ ಇಲ್ಲ; ಹಲವು ಸಾಮಗ್ರಿಗಳು ಇನ್ನು ಅಗ್ಗ

ನವದೆಹಲಿ: ನವರಾತ್ರಿಯ ಕೊಡುಗೆ ಎಂಬಂತೆ ಕೇಂದ್ರ ಸರಕಾರ ಕೈಗೊಂಡ ಅತೀ ಮಹತ್ತರ ತೀರ್ಮಾನವಾದ ಜಿಎಸ್‌ಟಿ (ಸರಕು ಸೇವಾ ತೆರಿಗೆ) ಸುಧಾ ರಣೆ (ಜಿಎಸ್‌ಟಿ -2.0) ದೇಶದಲ್ಲಿ ಇಂದಿನಿಂದ ವಿದ್ಯುಕ್ತವಾಗಿ ಜ್ಯಾರಿಗೆ ಬಂದಿದೆ. ಇದು ಮುಂದಿನ ಪೀಳಿಗೆಯ ಜಿಎಸ್‌ಟಿ ಸುಧಾರಣೆಗಳಾಗಿದೆ.  ಜಿಎಸ್‌ಟಿ ಬಚಾತ್ ಉತ್ಸವ (ಉಳಿತಾಯ ಹಬ್ಬ) ಎಂಬ ಇನ್ನೊಂದು ಹೆಸರಲ್ಲೂ ಇದನ್ನು ಜ್ಯಾರಿಗೊಳಿಸಲಾಗುತ್ತಿದೆ. ಇದರಂತೆ ಕ್ಯಾನ್ಸರ್, ಜೆನಿಟಿಕ್ ಮತ್ತು ಅಪರೂಪದ ಖಾಯಿಲೆಗಳು ಹಾಗೂ ಹೃದಯ ಸಂಬಂಧಿ ಖಾಯಿಲೆಗಳಿಗೆ ಸಂಬಂಧಿಸಿದ 36ನಿರ್ಣಾಯಕ ಜೀವ ಉಳಿಸುವ ಔಷಧಿಗಳ ಮೇಲೆ ಇನ್ನು …

ಯುವಕ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಮಂಜೇಶ್ವರ: ಯುವಕನೋರ್ವ ಮನೆಯೊಳಗೆ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿ ದ್ದಾನೆ. ಮಂಜೇಶ್ವರ ಪಾವೂರು ಚೌಕಿಯ ದಿ| ಡ್ಯಾನಿಯಲ್ ಗೋವಿಯಸ್‌ರ ಪುತ್ರ ಪ್ರವೀಣ್ ಗೋವಿಯಸ್ (41) ಮೃತಪಟ್ಟ ವ್ಯಕ್ತಿ. ಶನಿವಾರ ಸಂಜೆ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಫ್ಯಾನ್‌ಗೆ ಇವರು ಸೀರೆ ಉಪಯೋಗಿಸಿ ನೇಣು ಹಾಕಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಅದನ್ನು ಕಂಡ ಮನೆಯವರು ಅವರನ್ನು ತೂಮಿನಾಡಿನ ಖಾಸಗಿ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ.  ಮೃತರು ತಾಯಿ ಸ್ಟೆಲ್ಲಾ, ಪತ್ನಿ ಪ್ರಮಿಳಾ, ಪುತ್ರ ಪ್ರವೀಶ್, ಸಹೋದರಿ ಪ್ಲೇವಿ ಹಾಗೂ …

ಶಬರಿಮಲೆ ಸಂರಕ್ಷಣಾ ಸಂಗಮಕ್ಕೆ ಚಾಲನೆ

ಪಂದಳಂ: ಪಂಪಾದಲ್ಲಿ ತಿರುವಿದಾಂಕೂರ್ ಮುಜರಾಯಿ ಮಂಡಳಿ ನೇತೃತ್ವದಲ್ಲಿ ಮೊನ್ನೆ ನಡೆದ ಜಾಗತಿಕ ಅಯ್ಯಪ್ಪ ಸಂಗಮ ಕಾರ್ಯಕ್ರಮದ ಬೆನ್ನಲ್ಲೇ, ಶಬರಿಮಲೆ ಕ್ರಿಯಾ ಸಮಿತಿಯ ನೇತೃತ್ವದಲ್ಲಿ ಆಯೋಜಿಸಲಾದ ಶಬರಿಮಲೆ ಸಂರಕ್ಷಣಾ ಸಂಗಮ ಪಂದಳಂನಲ್ಲಿ ಇಂದು ಬೆಳಿಗ್ಗೆ ವಿದ್ಯುಕ್ತವಾಗಿ ಆರಂಭಗೊಂಡಿದೆ. ಸಹಸ್ರಾರು ಮಂದಿ ಇದರಲ್ಲಿ ಭಾಗವಹಿಸುತ್ತಿದ್ದಾರೆ. ಪಂದಳಂ ನಾನಾಕ್ ಕನ್ವೆನ್ಶನ್ ಸೆಂಟರ್‌ನಲ್ಲಿ ಇಂದು ಬೆಳಿಗ್ಗೆ ಆರಂಭಗೊಂಡ ಶಬರಿಮಲೆ ಸಂರಕ್ಷಣಾ ಕಾರ್ಯಕ್ರಮವನ್ನು ವಾಳೂರು ತೀರ್ಥಪಾದಾಶ್ರಮದ ಸ್ವಾಮೀಜಿ ಪ್ರಜ್ಞಾನಂದ ತೀರ್ಥಪಾದರು ಉದ್ಘಾಟಿಸಿದರು. ಶಬರಿಮಲೆ ಸಂರಕ್ಷಣಾ ಕ್ರಿಯಾ ಸಮಿತಿ ಅಧ್ಯಕ್ಷೆ ಕೆ.ಪಿ. ಶಶಿಕಲ ಟೀಚರ್ ಅಧ್ಯಕ್ಷತೆ …