ಹುತಾತ್ಮರಾದ ಶೆಟ್ಟಿ ಸಹೋದರರ ಸ್ಮಾರಕ ಮಂದಿರ ಉದ್ಘಾಟನೆ

ಪೈವಳಿಕೆ: ಹುತಾತ್ಮ ಶೆಟ್ಟಿ ಸಹೋದರರಾದ ಸುಂದರ, ಮಹಾಬಲ, ಚೆನ್ನಪ್ಪರ ಸ್ಮಾರಕವಾಗಿ ಬೋಳಂಗಳದಲ್ಲಿ ನಿರ್ಮಿಸಿದ ಮಂದಿರವನ್ನು ಸಿಪಿಎಂ ಜಿಲ್ಲಾ ಕಾರ್ಯದರ್ಶಿ, ಶಾಸಕ ಎಂ. ರಾಜಗೋಪಾಲ್ ಉದ್ಘಾಟಿಸಿದರು. ಏರಿಯಾ ಸಮಿತಿ ಸದಸ್ಯ ಅಬ್ದುಲ್ ರಜಾಕ್ ಚಿಪ್ಪಾರು ಅಧ್ಯಕ್ಷತೆ ವಹಿಸಿದರು. ಪಕ್ಷದ ಜಿಲ್ಲಾ ಸೆಕ್ರೆಟರಿಯೇಟ್ ಸದಸ್ಯ ಕೆ.ಆರ್. ಜಯಾನಂದ, ಏರಿಯಾ ಕಾರ್ಯದರ್ಶಿ ವಿ.ವಿ. ರಮೇಶ್ ಮಾತನಾಡಿದರು. ಪಕ್ಷದ ಕಾರ್ಯಕರ್ತರು, ವಿವಿಧ ಸಮಿತಿ ಪದಾಧಿಕಾರಿಗಳು ಭಾಗವಹಿಸಿದರು. ಹಿರಿಯರಾದ ನಾರಾಯಣ ಶೆಟ್ಟಿ ಧ್ವಜಾರೋಹಣಗೈದರು. ಶ್ರೀನಿವಾಸ  ಭಂಡಾರಿ ಉಪಸ್ಥಿತರಿದ್ದರು. ಲೋಕಲ್ ಕಾರ್ಯದರ್ಶಿ ಚಂದ್ರ ನಾಕ್ ಮಾನಿಪ್ಪಾಡಿ …

ಬಿಜೆಪಿ ನಗರಸಭಾ ವಾರ್ಡ್ ಸಮಾಲೋಚನೆ

ಕಾಸರಗೋಡು: ಭಾರತೀಯ ಜನತಾ ಪಕ್ಷ ಕಾಸರಗೋಡು ನಗರ ಸಭೆಯ 9ನೇ ವಾರ್ಡ್ ಸಮಾವೇಶ ಜೆಪಿ ನಗರದ ಕನ್ನಡ ಗ್ರಾಮ ಸಭಾ ಮಂಟಪದಲ್ಲಿ ನಡೆಯಿತು. ಜಿಲ್ಲಾಧ್ಯಕೆ್ಷ ಎಂ.ಎಲ್ ಅಶ್ವಿನಿ ಉದ್ಘಾಟಿಸಿ, ಮಾತನಾಡಿ, ನಿಷ್ಠಾವಂತ ಕಾರ್ಯಕರ್ತರ ನಿಸ್ವಾರ್ಥ ಸೇವೆ ಯಿಂದ ಪಕ್ಷ ಸಂಘಟಿತವಾಗುತ್ತಿದೆ ಮುಂಬರುವ ನಗರಪಾಲಿಕೆ ಚುನಾವಣೆ ಹಾಗೂ ವಿಧಾನಸಭಾ ಚುನಾ ವಣೆಯಲ್ಲಿ ವಿಜಯ ಪತಾಕೆಯನ್ನು ಹಾರಿಸಲು ಎಲ್ಲ ಕಾರ್ಯಕರ್ತರು ಮುನ್ನುಗ್ಗಬೇಕೆಂದು ಅವರು ಕರೆ ನೀಡಿದರು. ನಗರ ಸಭಾ ಮಾಜಿ ಸದಸ್ಯ ಕೆ. ಶಂಕರ್ ಅಧ್ಯಕ್ಷತೆ ವಹಿಸಿದರು .ಪಕ್ಷದ ಜಿಲ್ಲಾ …

ಜಿಲ್ಲೆಯ ವಿದ್ಯುತ್ ವಿತರಣಾ ವಲಯದ ಅಭಿವೃದ್ಧಿಗಾಗಿ 395.15 ಕೋಟಿ ರೂ. ಮಂಜೂರು: ವಿಧಾನಸಭೆಯಲ್ಲಿ ವಿದ್ಯುತ್ ಸಚಿವರ ಹೇಳಿಕೆ

ಕಾಸರಗೋಡು: ಜಿಲ್ಲೆಯ ವಿದ್ಯುತ್ ವಿತರಣಾ ವಲಯದ ಅಭಿವೃದ್ಧಿಗಾಗಿ ಕಾಸರಗೋಡು ಸ್ಪೆಷಲ್ ಪ್ಯಾಕೇಜ್‌ನಿಂದ 395.15 ಕೋಟಿ ರೂ. ಮಂಜೂರು ಮಾಡಲಾಗಿದೆಯೆಂದು ವಿಧಾನಸಭೆಯಲ್ಲಿ ವಿದ್ಯುತ್ ಖಾತೆ ಸಚಿವ ಕೆ. ಕೃಷ್ಣನ್ ಕುಟ್ಟಿ ತಿಳಿಸಿದ್ದಾರೆ. ಜಿಲ್ಲೆ ಎದುರಿಸುತ್ತಿರುವ ವಿದ್ಯುತ್ ಸಮಸ್ಯೆಗಳ ಬಗ್ಗೆ ಕಾಸರಗೋಡು  ಶಾಸಕ ಎನ್.ಎ. ನೆಲ್ಲಿಕುನ್ನು ವಿಧಾನಸಭೆಯಲ್ಲಿ ಮಂಡಿಸಿದ ಪ್ರಶ್ನೆಗಳಿಗೆ ಉತ್ತರಿಸುತ್ತಾ ಸಚಿವರು ಈ ಪ್ರತಿಕ್ರಿಯೆ ನೀಡಿದ್ದಾರೆ. ಹೀಗೆ ಮಂಜೂರು ಮಾಡಲಾ ಗಿರುವ ಹಣನ್ನು ವಿನಿಯೋಗಿಸಿ ಜಿಲ್ಲೆಯಲ್ಲಿ ತಲೆದೋರಿರುವ ವಿದ್ಯುತ್ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಅಗತ್ಯದ ಕ್ರಮಗಳಿಗೆ ಈಗಾಗಲೇ ಚಾಲನೆ …

ಮೋಹನ ಕುಂಟಾರುರವರಿಗೆ ಅನುವಾದ ಪ್ರಶಸ್ತಿ ಪ್ರದಾನ 26ರಂದು

ಬೆಂಗಳೂರು: ದ್ರಾವಿಡ ಭಾಷಾ ಅನುವಾದಕರ ಸಂಘದ ವತಿಯಿಂದ ನೀಡುವ ಡಿಬಿಟಿಎ ಅನುವಾದ ಪ್ರಶಸ್ತಿಗೆ ಹಂಪಿ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಡಾ. ಎ. ಮೋಹನ ಕುಂಟಾರು ಆಯ್ಕೆಯಾಗಿದ್ದಾರೆ ಎಂದು ಡಿಬಿಟಿಎ ಅಧ್ಯಕ್ಷೆ ಡಾ. ಸುಷ್ಮಾಶಂಕರ್ ತಿಳಿಸಿದ್ದಾರೆ. ಮಲೆಯಾಳದ ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತಿ ತಗಳಿ ಶಿವಶಂಕರ ಪಿಳ್ಳೆಯವರ ಪ್ರಸಿದ್ಧ ಕಾದಂಬರಿ ‘ಚೆಮ್ಮೀನ್’ ಕೃತಿಯನ್ನು ಮೋಹನ್ ಕುಂಟಾರು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಈ ಪುಸ್ತಕಕ್ಕೆ ಪ್ರಶಸ್ತಿ ಘೋಷಿಸಲಾಗಿದೆ.  ನಗದು ಪ್ರಶಸ್ತಿ ಪತ್ರ, ಫಲಕ ಒಳಗೊಂಡ ಪ್ರಶಸ್ತಿಯನ್ನು ಈ ತಿಂಗಳ 26ರಂದು …

ಕುಲಾಲ ಸಂಘ ಕುಂಬಳೆ ಪಂ. ಶಾಖೆ ಮಹಾಸಭೆ

ಕುಂಬಳೆ: ಕುಲಾಲ ಸಂಘ ಕುಂಬಳೆ ಪಂಚಾಯತ್ ಶಾಖೆಯ ಮಹಾಸಭೆ ಹಾಗೂ ಪ್ರತಿಭಾ ಪುರಸ್ಕಾರ ವಿತರಣೆ ಕಳತ್ತೂರು ಶ್ರೀ ಮಹಾದೇವ ಸಭಾಭವನನಲ್ಲಿ ಜರಗಿತು. ಗಂಗಾಧರ ಕೆ.ಟಿ ಅಧ್ಯಕ್ಷತೆ ವಹಿಸಿದರು. ಈ ಸಂದರ್ಭದಲ್ಲಿ ಪ್ರಕಾಶ್ ಕುಲಾಲ್ ಶ್ರಾವಣಕರ, ಉಪನ್ಯಾಸಕ ಡಾ .ಆನಂದ ಎಂ ಕಿದೂರು ಅವರನ್ನು ಗೌರವಿಸಲಾಯಿತು.ಕುಲಾಲ ಬಂಜನ್ ಆದಿ ಮೂಲ ದೈವಸ್ಥಾನ ಅಮೆತ್ತೋಡು ಇದರ ಅಧ್ಯಕ್ಷ ನಾರಾಯಣ ಮೀಂಜ, ಮೀನಾಕ್ಷಿ ವಸಂತ್ ಪುಣಿಯೂರು ಉಪಸ್ಥಿತರಿದ್ದರು. ಎಸ್‌ಎಸ್‌ಎಲ್‌ಸಿ, +2 ಪರೀಕ್ಷೆಗಳಲ್ಲಿ ಅತ್ಯಧಿಕ ಅಂಕ ಗಳಿಸಿದ ಪಂಚಾಯತು ವ್ಯಾಪ್ತಿಯ ಕುಲಾಲ್ ವಿಧ್ಯಾರ್ಥಿಗಳನ್ನು …

ಆನ್ ಲೈನ್ ಟ್ರೇಡಿಂಗ್: 42 ಲಕ್ಷ ರೂ. ಲಪಟಾಯಿಸಿದ ವ್ಯಕ್ತಿ ಸೆರೆ

ಕಾಸರಗೋಡು: ಅಂಗಡಿಮೊಗರು ನಿವಾಸಿಯೋರ್ವರಿಗೆ ಆನ್‌ಲೈನ್ ಟ್ರೇಡಿಂಗ್ ಹೆಸರಲ್ಲಿ 42 ಲಕ್ಷ ರೂ. ಲಪಟಾಯಿಸಿದ ಪ್ರಕರಣದ ಆರೋಪಿಯನ್ನು ಆಂಧ್ರ ಪ್ರದೇಶದಿಂದ ಕಾಸರಗೋಡು  ಸೈಬರ್ ಪೊಲೀಸರ ತಂಡ  ಬಂಧಿಸಿದೆ.  ಆಂಧ್ರಪ್ರದೇಶ ವಿಜಯವಾಡ ಕೃಷ್ಣಚಂದ್ರಪಾಡಲು ನಿವಾಸಿ ವಡಲಮುಡಿ ಫನಿ ಕುಮಾರ್ (40) ಬಂಧಿತ ಆರೋಪಿ.  ಆತನನ್ನು ಬಳಿಕ ನ್ಯಾಯಾಲಯದ ನಿರ್ದೇಶ ಪ್ರಕಾರ ನ್ಯಾಯಾಂಗ ಬಂಧನದಲ್ಲಿರಿ ಸಲಾಗಿದೆ. ಅಂಗಡಿಮೊಗರು ನಿವಾಸಿಯನ್ನು  ವಾಟ್ಸಪ್ ಮೂಲಕ ಸಂಪರ್ಕಿಸಿ ವಾಟ್ಸಪ್‌ನ ಧನಿ ಟಿಆರ್‌ಡಿ ಎಂಬ ನಕಲಿ ಅಪ್ಲಿಕೇಶನ್ ಮೂಲಕ ಸಂಪರ್ಕಿಸಿ  ಆನ್‌ಲೈನ್ ಟ್ರೇಡಿಂಗ್‌ನ ಹೆಸರಲ್ಲಿ 42,41,000 ರೂ. …

ಕೋಳಿ ಅಂಕಕ್ಕೆ ಮಫ್ತಿವೇಷದಲ್ಲಿ ಪೊಲೀಸ್ ದಾಳಿ: 7 ಮಂದಿ ಸೆರೆ; ಒಂಭತ್ತು ಕೋಳಿ, ಹಣ ವಶ

ಕುಂಬಳೆ: ಇಚ್ಲಂಗೋಡು ಅಣೆಕಟ್ಟಿನ ಸಮೀಪ ಕಾಡಿನೊಳಗೆ ಕೋಳಿ ಅಂಕ ನಡೆಸುತ್ತಿದ್ದ ಏಳು ಮಂದಿಯನ್ನು ಬಂಧಿಸಲಾಗಿದೆ. ಸ್ಥಳದಿಂದ ೯ ಕೋಳಿಗಳು ಹಾಗೂ 2750 ರೂ.ಗಳನ್ನು ವಶಪಡಿಸಲಾಗಿದೆ. ಕಾಸರಗೋಡು ಕೂಡ್ಲುವಿನ ಸಂತೋಷ್ (32), ಬಾಯಾರು ಕನ್ಯಾನದ ದಿಲೀಪ್ (35), ಉಪ್ಪಳ ಮಜಿಬೈಲ್‌ನ ಸೀತಾರಾಮ ಶೆಟ್ಟಿ (45), ಬೇಕೂರಿನ ಸಂತೋಷ್ ಶೆಟ್ಟಿ (45), ಪೈವಳಿಕೆಯ ಐತ್ತಪ್ಪ (30), ಬಾಯಾರ್‌ನ ಕಿಶೋರ್ (30), ಇಚ್ಲಂಗೋಡ್‌ನ ಸುಂದರ ಶೆಟ್ಟಿ (60) ಎಂಬಿವರನ್ನು ಕುಂಬಳೆ ಪೊಲೀಸ್ ಇನ್ಸ್‌ಪೆಕ್ಟರ್ ಪಿ.ಕೆ. ಜಿಜೀಶ್ ನೇತೃತ್ವದ ಪೊಲೀಸರು ಬಂಧಿಸಿದ್ದಾರೆ. ಕೋಳಿ …

ಸೆಂಟ್ರಿಂಗ್ ಕಾರ್ಮಿಕ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಬದಿಯಡ್ಕ: ಯುವಕನೋ ರ್ವ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಚೇಡಿಕಾನ ನಿವಾಸಿ ದಿ| ಮುರಳಿ ಎಂಬವರ ಪುತ್ರ ಸುಮಂತ್ ಕುಮಾರ್ (25 ಸಾವಿಗೀಡಾದ ಯುವಕ. ಮನೆ ಸಮೀಪದ ಹಿತ್ತಿಲಲ್ಲಿ ನಿನ್ನೆ ಸಂಜೆ ವೇಳೆ ಇವರು ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ವಿಷಯ ತಿಳಿದು ಬದಿಯಡ್ಕ ಪೊಲೀಸರು ಸ್ಥಳಕ್ಕೆ ತೆರಳಿ ಮೃತದೇಹವನ್ನು ಮಹಜರು ನಡೆಸಿದ ಬಳಿಕ ಮರಣೋತ್ತರ ಪರೀಕ್ಷೆಗಾಗಿ ಕಾಸರಗೋಡು ಜನರಲ್ ಆಸ್ಪತ್ರೆಗೆ ತಲುಪಿಸಲಾಗಿದೆ.  ಸುಮಂತ್ ಕುಮಾರ್ ಸೆಂಟ್ರಿಂಗ್ ಕಾರ್ಮಿಕನಾಗಿದ್ದರು. ಕಳೆದ ಮೂರು ದಿನಗಳಿಂದ ಕೆಲಸಕ್ಕೆ …

ಗಲ್ಫ್‌ನಿಂದ ಊರಿಗೆ ಬಂದಿದ್ದ ಯುವಕ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡು: ಯುವಕ ನೋರ್ವ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಕೀಯೂರು ಕಡಪ್ಪುರದ  ದಿ| ರಾಜನ್ ಎಂಬವರ ಪುತ್ರ ರಾಹುಲ್ (21) ಮೃತಪಟ್ಟ ಯುವಕ. ನಿನ್ನೆ ಮಧ್ಯಾಹ್ನ ವೇಳೆ ರಾಹುಲ್ ಬೆಡ್‌ರೂಮ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಅದನ್ನು ಕಂಡ ಮನೆಯವರು ಕೂಡಲೇ ಕೆಳಗಿಳಿಸಿ ದೇಳಿಯ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ಗಲ್ಫ್‌ನಲ್ಲಿದ್ದ ರಾಹುಲ್ ೫ ತಿಂಗಳ ಹಿಂದೆ ಊರಿಗೆ ಬಂದಿದ್ದರು. ಆತ್ಮಹತ್ಯೆಗೆ ಕಾರಣವೇನೆಂದು ತಿಳಿದು ಬಂದಿಲ್ಲ. ಮೇಲ್ಪರಂಬ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತರು ತಾಯಿ ಸೌಮಿನಿ, …

ಸ್ಕೂಟರ್‌ನೊಂದಿಗೆ ತೆರಳಿದ ಯುವಕ ನಾಪತ್ತೆ

ಉಪ್ಪಳ: ಸ್ಕೂಟರ್‌ನಲ್ಲಿ ಮನೆಯಿಂದ ಹೊರಗೆ ತೆರಳಿದ ಯುವಕ ಬಳಿಕ ನಾಪತ್ತೆಯಾದ ಬಗ್ಗೆ ದೂರಲಾಗಿದೆ. ಉಪ್ಪಳ ಮಣ್ಣಂಗುಳಿ ಕೋಡಿಬೈಲು ನಿವಾಸಿ ಮುಹಮ್ಮದ್ ಶಾಹಿಲ್ (28) ನಾಪತ್ತೆಯಾದ ಯುವಕ. ಈ ಬಗ್ಗೆ ಸಹೋದರ ಶೇಕ್ ಮೊಹಮ್ಮದ್ ಸುಹೈಲ್ ನೀಡಿದ ದೂರಿನಂತೆ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಮಂಗಳವಾರ ರಾತ್ರಿ 9.30ರ ವೇಳೆ ಮುಹಮ್ಮದ್ ಶಾಹಿಲ್ ಈಗ ಬರುತ್ತೇನೆಂದು ತಿಳಿಸಿ ಮನೆಯಿಂದ ಹೊರಗೆ ತೆರಳಿದ್ದರು. ಆದರೆ ಇದುವ ರೆಗೆ ಮರಳಿ ಬಂದಿಲ್ಲವೆಂದು ದೂರಿನಲ್ಲಿ ತಿಳಿಸಲಾಗಿದೆ.