ಉಪ್ಪಳ ಫ್ಲೈ ಓವರ್ ಅಡಿಯಲ್ಲಿ ತಡೆಗೋಡೆ ನಿರ್ಮಾಣಕ್ಕೆ ನಾಗರಿಕರಿಂದ ವಿರೋಧ: ಕಾಮಗಾರಿ ಸ್ಥಗಿತ

ಉಪ್ಪಳ: ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಹಿನ್ನೆಲೆಯಲ್ಲಿ ಉಪ್ಪಳ  ಪೇಟೆಯಲ್ಲಿ ನಿರ್ಮಾಣಗೊಂಡಿರವ ಫ್ಲೈ ಓವರ್‌ನ ಅಡಿಭಾಗದಲ್ಲಿ ತಡೆಗೋಡೆ ನಿರ್ಮಾಣವನ್ನು ಸ್ಥಳೀಯರು ವಿರೋಧಿಸಿದ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಕಾಮಗಾರಿ ನಿಲ್ಲಿಸಲಾಗಿದೆ. ಫ್ಲೈ ಓವರ್‌ನ ಎರಡು ಭಾಗದಲ್ಲಿ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಿ ಉಳಿದ ಭಾಗದಲ್ಲಿ ತಡೆಗೋಡೆ ನಿರ್ಮಾಣ ಕಾಮಗಾರಿ ಆರಂಭಿಸಿದ್ದರು. ಮೊನ್ನೆ ಸಂಜೆ ನಾಗರಿಕರು ತಡೆದು ವಿರೋಧ ವ್ಯಕ್ತಪಡಿಸಿದ್ದರು. ಅದರಿಂದಾಗಿ ಅಂದು ಕಾಮಗಾರಿಯನ್ನು ಸ್ಥಗಿತಗೊಳಿಸಲಾಗಿತ್ತು. ಬಳಿಕ ನಿನ್ನೆ ಬೆಳಿಗ್ಗೆ ನಡೆದುಹೋಗಲು ದಾರಿಯನ್ನು ಇರಿಸಿ ಮತ್ತೆ ತಡೆಗೋಡೆ ನಿರ್ಮಾಣ ಕೆಲಸವನ್ನು ಆರಂಭಿಸಲಾಗಿತ್ತು. ಆದರೆ ನಾಗರಿಕರು …

ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿಗೆ ಸಲಿಂಗರತಿ ಕಿರುಕುಳ: ವಾರ್ಡನ್ ಸೆರೆ

ಕಾಸರಗೋಡು: ಪ್ರಿಮೆಟ್ರಿಕ್ ಹಾಸ್ಟೆಲ್‌ನ ವಿದ್ಯಾರ್ಥಿಗೆ ಸಲಿಂಗರತಿ ಲೈಂಗಿಕ ಕಿರುಕುಳ ನೀಡಿದ ಪ್ರಕರಣದ ಆರೋಪಿಯಾಗಿರುವ ಹಾಸ್ಟೆಲ್‌ನ ವಾರ್ಡನ್‌ನನ್ನು ಪೊಲೀಸರು ಬಂಧಿಸಿ ದ್ದಾರೆ. ಮಾಲೋಂ ಕಾರ‍್ಯೋಟ್‌ಚ್ಚಾಲ್‌ನ ರಾಜೇಶ್ ಬಂಧಿತನಾದ ಆರೋಪಿ. ವೆಳ್ಳರಿಕುಂಡ್ ಪೊಲೀಸ್ ಇನ್ಸ್‌ಪೆಕ್ಟರ್ ಪಿ.ಕೆ. ಸತೀಶ್‌ರ ನೇತೃತ್ವದ ಪೊಲೀಸರ ತಂಡ ಈತನನ್ನು ಬಂಧಿಸಿದೆ.  ಪ್ರಿ ಮೆಟ್ರಿಕ್ ಶಾಲೆ ಹಾಸ್ಟೆಲ್ ಒಂದರಲ್ಲಿ  ವಾಸಿಸುತ್ತಿರುವ ವಿದ್ಯಾರ್ಥಿಯೋರ್ವ ನಿಗೆ ಓಣಂ ಹಬ್ಬದ ಮೊದಲು ಸಲಿಂಗ ರತಿ ಕಿರುಕುಳ ನೀಡಲಾಗಿದೆ ಎಂದೂ, ಓಣಂ ರಜೆ ಕಳೆದು ಆ ವಿದ್ಯಾರ್ಥಿ ಹಿಂ ತಿರುಗಿದ ನಂತರ ನಡೆದ …

ಪ್ರಧಾನಮಂತ್ರಿ ಎಸ್‌ಪಿಜಿ ತಂಡದ ಮಾಜಿ ಜವಾನ ಬೈಕ್ ಅಪಘಾತದಲ್ಲಿ ಸಾವು

ಕಾಸರಗೋಡು: ಪ್ರಧಾನಮಂತ್ರಿ ನರೇಂದ್ರಮೋದಿಯವರ ವಿಶೇಷ ಅಂಗರಕ್ಷಕ ಪಡೆ (ಎಸ್‌ಪಿಜಿ)ಯ ಮಾಜಿ ಜವಾನ ಕಾಸರಗೋಡು ನಿವಾಸಿ ಬೈಕ್ ಅಪಘಾತದಲ್ಲಿ ಸಾವನ್ನಪ್ಪಿದ ಘಟನೆ ನಡೆದಿದೆ. ಚಿತ್ತಾರಿಕಲ್ ಮಂಟಪತಲಚ್ಚಿ ರದ ಮಾಣಿಕುಟ್ಟಿ-ಗ್ರೇಸಿ ಕುಟ್ಟಿ ದಂಪತಿ ಪುತ್ರ ಶಿನ್ಸ್ ತಲಚ್ಚಿರ (45) ಸಾವನ್ನಪ್ಪಿದ ದುರ್ದೈವಿ. ರಾಜಸ್ಥಾನ ದಲ್ಲಿ ನಿನ್ನೆ ನಡೆದ ಬೈಕ್ ಅಪಘಾತ ದಲ್ಲಿ ಇವರು ಪ್ರಾಣ ಕಳೆದುಕೊಂ ಡಿದ್ದಾರೆ. ಗಡಿಭದ್ರತಾ ಪಡೆ (ಬಿಎಸ್‌ಎಫ್) ಜವಾನರಾಗಿರುವ ಶಿನ್ಸ್ ಈ ಹಿಂದೆ ಡೆಪ್ಯುಟೇಶನ್‌ನಲ್ಲಿ ಪ್ರಧಾನಮಂತ್ರಿಯವರ ಎಸ್‌ಪಿಜಿ ಪಡೆಗೆ ಸೇರ್ಪಡೆಗೊಂಡಿದ್ದರು. ಅವರು ಒಂಭತ್ತು ವರ್ಷಗಳ ಕಾಲ …

ರಾಷ್ಟ್ರೀಯ ಹೆದ್ದಾರಿ ಕಾರ್ಮಿಕರಿಗೆ ಇರಿದು ಪರಾರಿಯಾದ ತಂದೆ, ಪುತ್ರ ಮಹಾರಾಷ್ಟ್ರದಲ್ಲಿ ಸೆರೆ

ಕಾಸರಗೋಡು: ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಗುತ್ತಿಗೆದಾರರಾದ ಮೇಘ ಕನ್‌ಸ್ಟ್ರಕ್ಷನ್ ಕಂಪೆನಿಯ ಲೇಬರ್ ಕ್ಯಾಂಪ್‌ನಲ್ಲಿ ಇಬ್ಬರು ಕಾರ್ಮಿಕರಿಗೆ ಇರಿದು ಗಾಯಗೊಳಿಸಿ ಪರಾರಿಯಾದ ತಂದೆ ಹಾಗೂ ಪುತ್ರನನ್ನು ಮಹಾರಾಷ್ಟ್ರದಿಂದ ಸೆರೆ ಹಿಡಿಯಲಾಗಿದೆ. ಪಂಜಾಬ್ ನಿವಾಸಿಗಳಾದ ರಂಜಿತ್ ಸಿಂಗ್, ಪುತ್ರ ಹರ್ಸಿಂ ರಂಜಿತ್ ಸಿಂಗ್ ಎಂಬಿವರನ್ನು ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಜಿಪ್ಲೂನ್ ರೈಲ್ವೇ ನಿಲ್ದಾಣದಿಂದ ಬಂಧಿಸಲಾಗಿದೆ. ಮೊನ್ನೆ ಸಂಜೆ ಈ ಇಬ್ಬರು ಮೈಲಾಟಿಯ ಲೇಬರ್ ಕ್ಯಾಂಪ್‌ನಲ್ಲಿ   ಇಬ್ಬರು ಕಾರ್ಮಿಕರಿಗೆ ಇರಿದು ಗಾಯಗೊಳಿಸಿದ್ದರು. ಉತ್ತರ ಭಾರತ ನಿವಾಸಿಗಳಾದ ಯತಿವೀಂದರ್ ಸಿಂಗ್, ಗುರ್ಬಾ ಸಿಂಗ್ …

ಕಾರಡ್ಕ ಸಿಪಿಐ ಮಾಜಿ ಮುಖಂಡ ನಿಧನ

ಮುಳ್ಳೇರಿಯ: ಸಿಪಿಐ ಕಾರಡ್ಕ ಬ್ರಾಂಚ್ ಮಾಜಿ ಕಾರ್ಯದರ್ಶಿ ಅಡ್ಕಂ ಮಲಯರ್ ವಳಪ್ಪ್ ನಿವಾಸಿ  ಚೋಯಿ (74) ನಿಧನಹೊಂದಿ ದರು. ಬದಿಯಡ್ಕ ದಿನೇಶ್ ಬೀಡಿ ಸೊಸೈಟಿಯ ಸ್ಥಾಪಕ ನಿರ್ದೇಶಕರಾಗಿದ್ದರು. ಮೃತರು ಪತ್ನಿ ನಾರಾಯಣಿ, ಮಕ್ಕಳಾದ ಸುಮೇಶ್ ಎಂ (ಸಿಪಿಐ ಕಾರಡ್ಕ ಬ್ರಾಂಚ್ ಕಾರ್ಯದರ್ಶಿ), ನಿಶಾ ಎಂ, ಸೊಸೆ ಮಂಜುಷಾ, ಅಳಿಯ ರಾಜೇಶ್ ಅಟ್ಟೆಂಗಾನಂ, ಸಹೋದರರಾದ ಎಂ. ಅಚ್ಯುತನ್, ಎಂ. ಕೃಷ್ಣನ್ (ಸಿಪಿಐ ಜಿಲ್ಲಾ ಕೌನ್ಸಿಲ್  ಸದಸ್ಯ), ಸಹೋದರಿಯ ರಾದ ಜಾನಕಿ, ಸರೋಜಿನಿ, ಭವಾನಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. …

ಕಾಸರಗೋಡಿನ ಅಡಿಕೆ ಕೃಷಿಕರ ಸಮಸ್ಯೆಗಳನ್ನು ಸರಕಾರದ ಮುಂದಿಟ್ಟ ಶಾಸಕ ಎನ್.ಎ. ನೆಲ್ಲಿಕುನ್ನು; ಅಡಿಕೆ ಕೃಷಿಕರಿಗೆ ನಷ್ಟ ಪರಿಹಾರ ದೊರಕಿಸಲು ಸರಕಾರದಿಂದ ಕ್ರಮ- ಸಚಿವ

ತಿರುವನಂತಪುರ: ಕಾಸರಗೋಡು ಜಿಲ್ಲೆಯ ಅಡಿಕೆ ಕೃಷಿಕರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ಸರಕಾರ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ರಾಜ್ಯ ಕೃಷಿ ಸಚಿವ ಪಿ. ಪ್ರಸಾದ್ ವಿಧಾನಸಭೆಯಲ್ಲಿ ತಿಳಿಸಿದ್ದಾರೆ. ಕಾಸರಗೋಡು ಶಾಸಕ ಎನ್.ಎ. ನೆಲ್ಲಿಕುನ್ನು ವಿಧಾನಸಭೆಯಲ್ಲಿ ಮಾತನಾಡಿ, ಕಾಸರಗೋಡಿನ ಕೃಷಿಕರು ಎದುರಿಸುತ್ತಿರುವ ಸಮಸ್ಯೆಗಳನ್ನು ಸರಕಾರದ ಗಮನಕ್ಕೆ ತಂದಿದ್ದಾರೆ. ಇದಕ್ಕೆ ಉತ್ತರಿಸಿ ಸಚಿವ ಕೃಷಿಕರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಭರವಸೆ ನೀಡಿದ್ದಾರೆ. ಕಾಸರಗೋಡು ಜಿಲ್ಲೆಯಲ್ಲಿ ಅಡಿಕೆ ಕೃಷಿಯನ್ನು ಪ್ರೋತ್ಸಾಹಿಸಲು ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್‌ನಲ್ಲಿ ಯೋಜನೆ ರೂಪಿಸಲಾಗುವುದು, ಇನ್ನಷ್ಟು ಕೃಷಿಕರನ್ನು ಕೃಷಿ …

ಜಾಗತಿಕ ಅಯ್ಯಪ್ಪ ಸಂಗಮಕ್ಕೆ ಅಡ್ಡಿ ಇಲ್ಲ: ಕೇರಳ ಹೈಕೋರ್ಟ್‌ನ ಆದೇಶಕ್ಕೆ ಸುಪ್ರೀಂಕೋರ್ಟ್ ಹಸ್ತಕ್ಷೇಪ ನಿರಾಕರಣೆ

ನವದೆಹಲಿ: ಪರಿಸರ ಸೂಕ್ಷ್ಮ ಪೆರಿಯಾರ್ ಹುಲಿ ಮೀಸಲು ಪ್ರದೇಶದಲ್ಲಿರುವ ಶಬರಿಮಲೆ ದೇವಾಲಯ ಬಳಿಯ ಪಂಪಾ ನದಿ ದಡದಲ್ಲಿ ಶನಿವಾರದಂದು ಜಾಗತಿಕ ಅಯ್ಯಪ್ಪ ಸಂಗಮ ನಡೆಸಲು ತಿರುವಿದಾಂಕೂರ್ ಮುಜುರಾಯಿ ಮಂಡಳಿಗೆ ಅನುಮತಿ ನೀಡಿದ ಕೇರಳ ಹೈಕೋರ್ಟ್‌ನ ಆದೇಶದ ಬಗ್ಗೆ ಹಸ್ತಕ್ಷೇಪ ಮಾಡಲು ಸುಪ್ರೀಂಕೋರ್ಟ್ ನಿರಾಕರಿಸಿದೆ. ಈ ತಿಂಗಳ ೨೦ರಂದು ನಿಗದಿಯಾಗಿರುವ ಕಾರ್ಯಕ್ರಮದ ವಿರುದ್ಧ ಸಲ್ಲಿಸಲಾದ ಅರ್ಜಿಗಳನ್ನು ತಿರಸ್ಕರಿಸಿದ ನ್ಯಾಯಮೂರ್ತಿಗಳಾದ ಪಿ.ಎಸ್. ನರಸಿಂಹ ಮತ್ತು ಎ.ಎಸ್. ಚಂದ್ರೂರ್‌ಕರ್‌ರನ್ನೊಳಗೊಂಡ ಸುಪ್ರಿಂಕೋರ್ಟ್‌ನ ನ್ಯಾಯಪೀಠವು ಹೈಕೋರ್ಟ್ ಸೂಚಿಸಿದ ಶರತ್ತುಗಳನ್ನು ಅನುಸರಿಸಬೇಕೆಂದೂ ಹೇಳಿದೆ. ಈ ಕಾರ್ಯಕ್ರಮವು …

ಅಮೀಬಿಕ್ ಮೆದುಳು ಜ್ವರ: ಜಿಲ್ಲೆಯಲ್ಲೂ ಗರಿಷ್ಠ ಜಾಗ್ರತಾ ನಿರ್ದೇಶ

ಕಾಸರಗೋಡು: ರಾಜ್ಯದಲ್ಲಿ ಮೆದುಳು ತಿನ್ನುವ ಅಮೀಬಿಕ್ ಮೆದುಳು ಜ್ವರ ವ್ಯಾಪಕವಾಗಿ ಪತ್ತೆಯಾಗುತ್ತಿರುವ ಹಿನ್ನೆಲೆಯಲ್ಲಿ ಕಾಸರಗೋಡು ಜಿಲ್ಲೆಯಲ್ಲೂ ಆರೋಗ್ಯ ಇಲಾಖೆ ಗರಿಷ್ಠ ಜಾಗ್ರತಾ ನಿರ್ದೇಶ ನೀಡಿದೆ. ಇದರಂತೆ ರೋಗ ಪ್ರತಿರೋಧಕ ಚಟುವಟಿಕೆಗಳನ್ನು ಇನ್ನಷ್ಟು ತೀವ್ರಗೊಳಿಸಲು ಜಿಲ್ಲಾ ಆರೋಗ್ಯ ಇಲಾಖೆ ತೀರ್ಮಾನಿಸಿದೆ. ರೋಗ ಹರಡುವುದನ್ನು ತಡೆಗಟ್ಟಲು ಜಿಲ್ಲೆಯ ಬಾವಿಗಳು ಮತ್ತಿತರ ಜಲಸಂಪನ್ಮೂಲಗಳನ್ನು ಕ್ಲೋರಿನೈಟ್ ಗೊಳಪಡಿಸುವ ತೀರ್ಮಾನವನ್ನು ಇಲಾಖೆ ಕೈಗೊಂಡಿದೆ. ಇದರಂತೆ ಈ ತಿಂಗಳ 30, 31ರಂದು ಜಿಲ್ಲೆಯಲ್ಲ್ಲಿ ವ್ಯಾಪಕವಾಗಿ ಕ್ಲೋರಿನೇಶನ್ ನಡೆಸಲಾಗುವುದು. ತೋಡುಗಳು, ಕಟ್ಟಿನಿಂತ ನೀರು, ಕೆರೆಗಳು ಮೊದಲಾದ ಕಡೆಗಳಲ್ಲಿ …

ಬಿಎಂಎಸ್ ಮಂಜೇಶ್ವರ ಪಂಚಾಯತ್ ಕಾಲ್ನಡೆ ಜಾಥಾ

ಮಂಜೇಶ್ವರ: ಕೇರಳ ಸರಕಾರದ ಜನವಿರೋಧಿ ಕಾರ್ಮಿಕ ವಿರೋಧಿ ನೀತಿಗೆದುರಾಗಿ ಕೇರಳ ರಾಜ್ಯದಾದ್ಯಂತ ನಡೆಯುವ ಕಾಲ್ನಡೆ ಜಾಥಾದ ಅಂಗವಾಗಿ ಮಂಜೇಶ್ವರ ಪಂಚಾಯತ್ ವತಿಯಿಂದ ತಲಪಾಡಿಯಿಂದ ಆರಂಭಗೊಂಡ ಕಾಲ್ನಡೆ ಜಾಥಾವನ್ನು ಬಿಎಂಎಸ್ ಜಿಲ್ಲಾ ಅಧ್ಯಕ್ಷ ಉಪೇಂದ್ರನ್ ಕೋಟೆಕಣಿ ಉದ್ಘಾಟಿಸಿದರು.  ಜಾಥಾ ಕ್ಯಾಪ್ಟನ್ ಪ್ರಕಾಶ್ ಕೆ.ಪಿ.ರ ನೇತೃತ್ವದಲ್ಲಿ ನಡೆದ ಕಾಲ್ನಡೆ ಜಾಥಾದಲ್ಲಿ ಜಿಲ್ಲಾ ಜೊತೆ ಕಾರ್ಯದರ್ಶಿ ದಿನೇಶ್ ಬಂಬ್ರಾಣ, ಯಶವಂತಿ ಬೆಜ್ಜ, ವಲಯ ಅಧ್ಯಕ್ಷ ರವಿ ಎಂ.ಕೆ, ರವಿ ಮಜಲ್, ಕಿಶೋರ್ ಶೆಟ್ಟಿ ಕುಂಜತ್ತೂರು, ಶ್ರೀಧರ ಬಿ.ಎಂ, ಚಂದ್ರಶೇಖರ ವರ್ಕಾಡಿ, ರಾಮಚಂದ್ರ …

ಕುಂಬಳೆ ಪಂ. ಕಟ್ಟಡದಲ್ಲಿ ಬೀಫ್ ಸ್ಟಾಲ್ ತೀವ್ರ ಚಳವಳಿಗೆ ಬಿಜೆಪಿ ನಿರ್ಧಾರ

ಕುಂಬಳೆ: ಕುಂಬಳೆ ಗ್ರಾಮ ಪಂಚಾ ಯತ್‌ನ ಮಾರುಕಟ್ಟೆ ಸಮೀಪವಿರುವ ಪಂಚಾಯತ್ ಕಟ್ಟಡದಲ್ಲಿರುವ ಬೀಫ್ ಸ್ಟಾಲ್ ಅನಧಿಕೃತವಾಗಿ ಕಾರ್ಯಾ ಚರಿಸುತ್ತಿದ್ದು, ಇದರ ವಿರುದ್ಧ ತೀವ್ರ ಪ್ರತಿಭಟನೆ ನಡೆಸುವುದಾಗಿ ಬಿಜೆಪಿ ತಿಳಿಸಿದೆ. ಪಂಚಾಯತ್‌ನ ನಿಯಮ ಪ್ರಕಾರ ಯಾವುದೇ ರೀತಿಯ ಮಾಂಸದ ಅಂಗಡಿಯನ್ನು ತರಕಾರಿ, ದೀನಸಿ, ಹಣ್ಣು ಹಂಪಲು ಅಂಗಡಿ ಸಮೀಪ ತೆರೆಯ ಕೂಡದ್ದಾಗಿದೆ. ಕಳೆದ 12 ವರ್ಷಗಳಿಂದ ಈ ಕಾನೂನು ಜ್ಯಾರಿಯಲ್ಲಿದೆ. ಆದರೆ ಇದೀಗ ಪಂಚಾಯತ್‌ನ ಅಧೀನದ ಕಟ್ಟಡದಲ್ಲಿ ಬೀಫ್ ಸ್ಟಾಲ್ ತೆರೆಯಲು ಪಂಚಾಯತ್ ಅಧಿಕಾರಿಗಳು ಅನುಮತಿ ನೀಡಿರುವುದಾಗಿ ಬಿಜೆಪಿ …