ಲಯನ್ಸ್‌ಕ್ಲಬ್‌ನಿಂದ ಸಹಾಯಧನ ಹಸ್ತಾಂತರ

ಉಪ್ಪಳ: ಮಣಿಮುಂಡದಲ್ಲಿ ಕಾರ್ಯಾಚರಿಸುವ ಶೇಖ್ ಜಾಹೇದ್ ಆಶ್ರಮಕ್ಕೆ ಲಯನ್ಸ್‌ಕ್ಲಬ್ ಮಂಜೇಶ್ವರ- ಉಪ್ಪಳ ಇದರ ವತಿಯಿಂದ  ವಸ್ತ್ರ ರೂಪದಲ್ಲಿ, ನಗದು ಸಹಾಯ ನೀಡಲಾಯಿತು. ಈ ಸಂದರ್ಭದಲ್ಲಿ ಕ್ಲಬ್‌ನ ಅಧ್ಯಕ್ಷ ಲ| ಕಮಲಾಕ್ಷ ಪಂಜ, ಲ| ಚರಣ್ ಬಂದ್ಯೋಡು, ಲ| ಮಾಧವ ಕೆ, ಲ| ಅಶೋಕ್ ಎಂಜೆಎಫ್, ಲ| ವಿಜಯನ್ ನಾಯರ್, ಲ| ಗಣೇಶ್ ಎಂ, ಲ| ಉದಯ ಕುಮಾರ್ ಶೆಟ್ಟಿ, ಲ| ತಿಮ್ಮಪ್ಪ ಭಂಡಾರಿ ಉಪಸ್ಥಿತರಿದ್ದರು.

ಮನೆಗೆ ಅತಿಕ್ರಮಿಸಿ ನುಗ್ಗಿ ವೃದ್ಧೆಯನ್ನು ಬಿಗಿದಪ್ಪಿಕೊಂಡ ಯುವಕನ ಬಂಧನ

ಮುಳ್ಳೇರಿಯ: ಹಾಡಹಗಲೇ ಮನೆಗೆ ಅತಿಕ್ರಮಿಸಿ ನುಗ್ಗಿದ ಯುವಕ 78ರ ಹರೆಯದ ವೃದ್ಧೆಯನ್ನು ಬಿಗಿದಪ್ಪಿಕೊಂಡ ಬಗ್ಗೆ ದೂರಲಾಗಿದೆ.  ವೃದ್ಧೆ ಬೊಬ್ಬೆ ಹಾಕಿದಾಗ ನೆರೆಮನೆ ನಿವಾಸಿಗಳು ಅಲ್ಲಿಗೆ ತಲುಪಿದ್ದು ಅಷ್ಟರಲ್ಲಿ ಯುವಕ ಓಡಿ ಪರಾರಿಯಾಗಿದ್ದಾನೆ.  ಬಳಿಕ ತಲುಪಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಮಿಂಚಿಪದವು ನಿವಾಸಿ ವಸಂತ (35) ಎಂಬಾತ ಬಂಧಿತ ಆರೋಪಿಯಾಗಿದ್ದಾನೆ.  ಆದೂರು ಎಸ್‌ಐ ವಿನೋದ್ ಕುಮಾರ್ ನೇತೃತ್ವದ ಪೊಲೀಸರು ಈತನನ್ನು ಬಂಧಿಸಿದ್ದಾರೆ. ಆರೋಪಿಯನ್ನು ಇಂದು ನ್ಯಾಯಾಲಯದಲ್ಲಿ ಹಾಜರುಪಡಿಸುವುದಾಗಿ ಪೊಲೀಸರು ತಿಳಿಸಿದ್ದಾರೆ. ನಿನ್ನೆ ಸಂಜೆ 3.30ರ ವೇಳೆ ಪ್ರಕರಣಕ್ಕೆ ಕಾರಣವಾದ …

ಕುಂಬಳೆಯಲ್ಲಿ ಸಾರಿಗೆ ಅಡಚಣೆ ಇನ್ನಷ್ಟು ತೀವ್ರ

ಕುಂಬಳೆ:  ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ನಡೆದ ಬಳಿಕ ಕುಂಬಳೆಯಲ್ಲಿ ಸಾರಿಗೆ ಸಮಸ್ಯೆಗೆ ಯಾವುದೇ ಪರಿಹಾರ ಉಂಟಾಗಿಲ್ಲ. ದಿನದಿಂದ ದಿನಕ್ಕೆ ಸಾರಿಗೆ ಅಡಚಣೆ ತೀವ್ರಗೊಳ್ಳುತ್ತಿದ್ದು, ಇದರಿಂದ  ಸಾರ್ವಜನಿಕರು ಭಾರೀ ಸಮಸ್ಯೆಯನ್ನು ಎದುರಿಸಬೇಕಾಗಿ ಬರುತ್ತಿದೆ.  ಕುಂಬಳೆ ಬಸ್ ನಿಲ್ದಾಣದಿಂದ ರೈಲು ನಿಲ್ದಾಣದ ಅಂಡರ್ ಪಾಸ್‌ವರೆಗೆ ಸಾರಿಗೆ ಅಡಚಣೆ ನಿತ್ಯ ಘಟನೆಯಾಗಿದೆ. ಈ ಭಾಗದಲ್ಲಿ ಒಂದೇ ಸರ್ವೀಸ್ ರಸ್ತೆಯಿದ್ದು, ಅಗಲ ಕಿರಿದಾದ ಅದರಲ್ಲೇ ವಾಹನಗಳು ಆಚೀಚೆ ಸಂಚರಿಸಬೇಕಾಗಿ ಬರುತ್ತಿದೆ. ಅಲ್ಲದೆ ಕಾಲುದಾರಿಯಲ್ಲಿ ವಾಹನಗಳನ್ನು ನಿಲುಗಡೆಗೊಳಿಸುತ್ತಿರುವುದರಿಂದ ಇನ್ನಷ್ಟು  ಸಮಸ್ಯೆ ಎದುರಾಗುತ್ತಿದೆ.  ಸಾರಿಗೆ ಅಡಚಣೆ …

ಒಂದೇ ಕುಟುಂಬದ ಸಾಮೂಹಿಕ ಆತ್ಮಹತ್ಯೆ: ಚಿಕಿತ್ಸೆಯಲ್ಲಿದ್ದ ಯುವಕನೂ ಮೃತ್ಯು

ಕಾಸರಗೋಡು: ಆಸಿಡ್ ಸೇವಿಸಿ ಒಂದೇ ಕುಟುಂಬದ ಮೂವರು ಆತ್ಮಹತ್ಯೆಗೈದ ಘಟನೆಗೆ ಸಂಬಂಧಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ನಾಲ್ಕನೇ ವ್ಯಕ್ತಿಯೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಅಂಬಲತ್ತರ ಪರಕ್ಕಳಾಯಿ ಒಂಡಂಪುಳಕ್ಕಾಲ್ ನಿವಾಸಿ ಗೋಪಿ ಎಂಬವರ ಪುತ್ರ ರಾಖೇಶ್ (27) ಸಾವನ್ನಪ್ಪಿದ ಯುವಕ. ಆಸಿಡ್ ಸೇವಿಸಿ ಗಂಭೀರಾವಸ್ಥೆಯಲ್ಲಿದ್ದ ಇವರನ್ನು ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಅದು ಫಲಕಾರಿಯಾಗದೆ ಅವರು ಸಾವಿಗೀಡಾಗಿದ್ದಾರೆ. ರಾಖೇಶ್‌ರ ತಂದೆ ಕೃಷಿಕರಾಗಿರುವ ಗೋಪಿ (60), ಇವರ ಪತ್ನಿ ಇಂದಿರಾ (57), ಇನ್ನೋರ್ವ ಪುತ್ರ ರಾಜೇಶ್ (34) …

ಕೆಎಸ್‌ಆರ್‌ಟಿಸಿ ಬಸ್-ಜೀಪು ಢಿಕ್ಕಿ: ಮೂವರ ದಾರುಣ ಮೃತ್ಯು

ಕೊಲ್ಲಂ: ಕೆಎಸ್‌ಆರ್‌ಟಿಸಿ ಫಾಸ್ಟ್ ಪ್ಯಾಸೆಂಜರ್ ಬಸ್ ಢಿಕ್ಕಿ ಹೊಡೆದು ಜೀಪಿನಲ್ಲಿ ಪ್ರಯಾಣಿಸುತ್ತಿದ್ದ ಮೂವರು ದಾರುಣವಾಗಿ ಸಾವನ್ನಪ್ಪಿದ ಘಟನೆ ಕೊಲ್ಲಂ ಓಚಿರ ವಲಿಯಕುಳಂಗರೆಯಲ್ಲಿ ಇಂದು ಬೆಳಿಗ್ಗೆ ಸಂಭವಿಸಿದೆ. ತೇವಲಕರ ನಿವಾಸಿಗಳಾದ ಪ್ರಿನ್ಸ್ ತೋಮಸ್ (44), ಮಕ್ಕಳಾದ ಅಥುಲ್ (14), ಅಲ್ಕಾ (5) ಎಂಬವರು ಸಾವನ್ನಪ್ಪಿದ ದುರ್ದೈವಿಗಳು. ಮೃತ ಪ್ರಿನ್ಸ್‌ರ ಪತ್ನಿ ಬಿಂದಿಯಾ ಸೂಸನ್ ವರ್ಗೀಸ್, ಇನ್ನೋರ್ವ ಪುತ್ರಿ ಐಶ್ವರ್ಯ ಈ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಢಿಕ್ಕಿ ಹೊಡೆದ ಕೆಎಸ್‌ಆರ್‌ಟಿಸಿ ಬಸ್ ಪ್ರಯಾಣಿಕರ ಪೈಕಿ 20ರಷ್ಟು …

ಕಾಸರಗೋಡು ನಿವಾಸಿಯನ್ನು ಹನಿಟ್ರ್ಯಾಪ್‌ನಲ್ಲಿ ಸಿಲುಕಿಸಿ 75 ಲಕ್ಷ ರೂ. ಅಪಹರಣ: ಯುವತಿ ಸಹಿತ 6 ಮಂದಿ ಸೆರೆ

ಮಂಗಳೂರು: ಕಾಸರಗೋಡು ನಿವಾಸಿಯೂ, ಮಂಗಳೂರಿನಲ್ಲಿ ವಾಸಿಸುವ ಯುವಕನನ್ನು ತಂಡವೊಂದು  ಹನಿಟ್ರ್ಯಾಪ್‌ನಲ್ಲಿ  ಸಿಲುಕಿಸಿ 75 ಸಾವಿರ ರೂಪಾಯಿ ಅಪಹರಿಸಿದ ಬಳಿಕ ಆತನ ಕೈಕಾಲುಗಳನ್ನು ಕಟ್ಟಿಹಾಕಿ   ಹಲ್ಲೆಗೈದು  ಗಂಭೀರ ಗಾಯಗೊಳಿಸಿದ ಬಗ್ಗೆ ದೂರಲಾಗಿದೆ. ಘಟನೆಗೆ ಸಂಬಂಧಿಸಿ ಯುವತಿ ಸಹಿತ 6 ಮಂದಿಯನ್ನು  ಕುಂದಾಪುರ ಪೊಲೀಸರು ಬಂಧಿಸಿದ್ದಾರೆ.  ನಾವುಂದ ಬಡಾಕೆರೆಯ ಅಬ್ದುಲ್ ಸವಾದ್ ಯಾನೆ ಅಚ್ಚು (28), ಗುಲ್ವಾಡಿ ಬೋಳ್ಕಟ್ಟೆಯ ಸೈಫುಲ್ಲ (38), ಹಂಗಳೂರಿನ ಮೊಹಮ್ಮದ್ ನಾಸಿರ್ ಶರೀಫ್ (38), ಮೂಡುಗೋಪಾಡಿಯ ಅಬ್ದುಲ್ ಸತ್ತಾರ್ (23), ನಾಗೋಡಿಯ ಅಬ್ದುಲ್‌ಅಜೀಜ್ (26) ಹಾಗೂ …

ಜ್ವರ ಬಾಧಿಸಿ ವ್ಯಕ್ತಿ ಮೃತ್ಯು

ಕಾಸರಗೋಡು: ಜ್ವರಬಾಧಿಸಿ ಆಸ್ಪತ್ರೆಯಲ್ಲಿ  ದಾಖಲಾಗಿದ್ದ ವ್ಯಕ್ತಿ ಮೃತಪಟ್ಟರು. ಕಾಸರಗೋಡು ಕಸಬ ಬೀಚ್‌ನ ಕೆ. ಶ್ರೀಧರನ್ (68) ಎಂಬವರು ಮೃತಪಟ್ಟ ವ್ಯಕ್ತಿ. ಇವರು ನೆಲ್ಲಿಕುಂಜೆಯ ಜೀನಸು ಅಂಗಡಿ ಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಜ್ವರ ಬಾಧಿಸಿದ್ದ ಇವರನ್ನು ಈ ತಿಂಗಳ ೧ರಂದು ನಗರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಬೆಳಿಗ್ಗೆ ನಿಧನ ಸಂಭವಿಸಿದೆ. ದಿವಂಗತರಾದ ಕೃಷ್ಣನ್-ಲಕ್ಷ್ಮಿ ದಂಪತಿಯ ಪುತ್ರನಾದ ಮೃತರು ಪತ್ನಿ ಸವಿತ, ಮಕ್ಕಳಾದ ಶ್ರಿತ್, ಚರಣ್‌ಜಿತ್, ಸಹೋದರ-ಸಹೋದರಿಯರಾದ ರಾಜನ್, ದಾಮು, ಪ್ರೇಮ, ಬೇಬಿ ಹಾಗೂ ಅಪಾರ …

ವ್ಯಾಪಾರಿ ನಿಧನ

ಮಾನ್ಯ:ಮಾನ್ಯದಲ್ಲಿ ವ್ಯಾಪಾರಿಯಾಗಿರುವ ಮಾನ್ಯ ನಿವಾಸಿ ನಾರಾಯಣ ಮಣಿಯಾಣಿ ಕಲ್ಲುಗುಂಡಿ (67) ಎಂಬವರು  ನಿಧನ ಹೊಂದಿ ದರು. ಅಲ್ಪ ಕಾಲದಿಂದ  ಅಸೌಖ್ಯ ಬಾಧಿಸಿದ್ದ ಇವರನ್ನು ಕುಂಬಳೆ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಮೃತರು ಪತ್ನಿ ಮೀನಾಕ್ಷಿ, ಮಕ್ಕಳಾದ ಕಿರಣ್‌ರಾಜ್, ಪವನ್ ರಾಜ್,  ಸೊಸೆ ಕವಿತಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಫಾಂಗೆ ನುಗ್ಗಿ 542 ಕೋಳಿಗಳನ್ನು ಕೊಂದು ಹಾಕಿದ ಬೀದಿ ನಾಯಿಗಳು

ಕಾಸರಗೋಡು: ಕೋಳಿ ಸಾಕಣಾ ಫಾಂಗೆ ರಾತ್ರಿ ವೇಳೆ ಬೀದಿ ನಾಯಿಗಳು ನುಗ್ಗಿ 542 ಕೋಳಿಗಳನ್ನು ಕೊಂದು ಹಾಕಿದ ಘಟನೆ ನಡೆದಿದೆ. ಭೀಮನಡಿ ಮಾಂಕೋಡು ವಿಲಂಗಿಲೆ ಮಟ್ಟತ್ತಿಲ್ ಜೋನಿ ಎಂಬವರ ಕೋಳಿಗಳನ್ನು ಬೀದಿನಾಯಿಗಳು ಈ ರೀತಿ ಕೊಂದುಹಾಕಿವೆ. ರಾತ್ರಿ ಧಾರಾಕಾರ ಮಳೆ ಸುರಿಯುತ್ತಿದ್ದ ವೇಳೆ ಬೀದಿ ನಾಯಿಗಳು ಫಾಂನೊಳಗೆ ನುಗ್ಗಿ ಕೋಳಿಗಳನ್ನು ಕೊಂದು ಹಾಕಿದ್ದು, ಅದು ಬೆಳಗ್ಗಿನ ವೇಳೆಯಷ್ಟೇ  ಮನೆಯವರ ಗಮನಕ್ಕೆ ಬಂದಿದೆ.

ರಾಷ್ಟ್ರೀಯ ಹೆದ್ದಾರಿ ಸರ್ವಿಸ್ ರಸ್ತೆ ಬದಿ ಮತ್ತೆ ಹೊಂಡ ತೋಡುತ್ತಿರುವ ಟೆಲಿಕಾಂ ಕಂಪೆನಿ: ಪಾದಚಾರಿಗಳಿಗೆ ಆತಂಕ

ಕಾಸರಗೋಡು: ಜಿಲ್ಲಾಧಿಕಾರಿಯ ನಿರ್ದೇಶವನ್ನು ಅವಗಣಿಸಿ ಟೆಲಿಕಾಂ ಕಂಪೆನಿ ಅಧಿಕಾರಿಗಳು ರಾಷ್ಟ್ರೀಯ ಹೆದ್ದಾರಿಯ ಸರ್ವಿಸ್ ರಸ್ತೆ ಬದಿ ಕಾಲುದಾರಿಯಲ್ಲಿ ಹೊಂಡ ತೋಡುತ್ತಿರುವುದಾಗಿ ದೂರಲಾಗಿದೆ. ತೋಡಿದ ಹೊಂಡವನ್ನು ಸರಿಯಾಗಿ ಮುಚ್ಚದೆ ಹಾಗೆಯೇ ಬಿಡುತ್ತಿರುವುದು ಪಾದಚಾರಿಗಳಿಗೆ ಅಪಾಯಭೀತಿ ಸೃಷ್ಟಿಸುತ್ತಿದೆ. ಮೊಗ್ರಾಲ್ ಟೌನ್ ಜಂಕ್ಷನ್ ಲೀಗ್ ಕಚೇರಿ ಸಮೀಪ ಕಾಲುದಾರಿಯಲ್ಲಿ ಅಳವಡಿಸಿದ ಇಂಟರ್‌ಲಾಕ್ ತೆಗೆದು ಹೊಂಡ ತೋಡಲಾಗಿದೆ. ಹೊಂಡ ತೋಡಿ ವಯರ್, ಪೈಪ್‌ಗಳನ್ನು ಸ್ಥಾಪಿಸುವುದಾದಲ್ಲಿ ಕೆಲಸ ಮುಗಿದೊಡನೆ ಅದನ್ನು ಮುಚ್ಚ ಬೇಕೆಂದು ಜಿಲ್ಲಾಧಿಕಾರಿ ಈ ಹಿಂದೆಯೇ ಟೆಲಿಕಾಂ ಕಂಪೆನಿಗೆ ನಿರ್ದೇಶಿಸಿದ್ದರು. ಆದರೆ ಅದನ್ನು …