ಸ್ಥಳೀಯರ ಸಹಾಯ ಫಲ ನೀಡಲಿಲ್ಲ: ಆದೂರಿನಲ್ಲಿ ಹಾವು ಕಚ್ಚಿದ್ದ ವ್ಯಕ್ತಿ ಮೃತ್ಯು

ಮುಳ್ಳೇರಿಯ:  ಹಾವು ಕಚ್ಚಿ ಚಿಕಿತ್ಸೆಯಲ್ಲಿದ್ದ ವ್ಯಕ್ತಿ ಮೃತಪಟ್ಟರು. ಆದೂರು ಆಲಂತಡ್ಕದ  ಚಂದ್ರನ್ (60) ಮಂಗಳೂರಿನ ಆಸ್ಪತ್ರೆಯಲ್ಲಿ ಮೃತಪಟ್ಟರು. ಅಗೋಸ್ತ್ ೨೧ರಂದು ಮನೆ ಪರಿಸರದಲ್ಲಿ ಚಂದ್ರನ್‌ರಿಗೆ ಹಾವು ಕಚ್ಚಿತ್ತು. ಕೂಡಲೇ ಜನರಲ್ ಆಸ್ಪತ್ರೆಗೆ ತಲುಪಿಸಿದರೂ  ಸ್ಥಿತಿ ಗಂಭೀರವಾದ ಹಿನ್ನೆಲೆಯಲ್ಲಿ ದೇರಳಕಟ್ಟೆ  ಆಸ್ಪತ್ರೆಗೆ ಕೊಂಡೊಯ್ಯಲಾಗಿತ್ತು.  ತುರ್ತು ವಿಭಾಗದಲ್ಲಿ ಚಿಕಿತ್ಸೆಯಲ್ಲಿದ್ದ ವೇಳೆ ನಿಧನ ಸಂಭವಿಸಿದೆ. ಚಿಕಿತ್ಸೆಗಾಗಿ ಪ್ರತಿದಿನ  ಭಾರೀ ಮೊತ್ತ ವ್ಯಯಿಸ ಬೇಕಾಗಿ ಬಂದಿತ್ತು. ಬಡ ಕುಟುಂಬವಾದ ಹಿನ್ನೆಲೆಯಲ್ಲಿ ಚಿಕಿತ್ಸೆಗಾಗಿರುವ ಹಣವನ್ನು ಕಂಡುಕೊಳ್ಳಲು ಸಾಧ್ಯವಾಗದೆ ಕುಟುಂಬ ಸಂಕಷ್ಟಕ್ಕೀಡಾದಾಗ ಸ್ಥಳೀಯರು ಚಿಕಿತ್ಸಾ ಸಹಾಯ …

ಪೊಲೀಸರು ಜಾಮೀನಿನಲ್ಲಿ ಬಿಡುಗಡೆಗೊಳಿಸಿದ ಯುವಕನನ್ನು ಕೊಲೆಗೈದ ಪ್ರಕರಣ: ತಲೆಮರೆಸಿಕೊಂಡ ಕುಂಜತ್ತೂರು ನಿವಾಸಿ ಸೆರೆ; ನಾಲ್ವರು ಆರೋಪಿಗಳು ಈಗಲೂ ಗಲ್ಫ್‌ನಲ್ಲಿ

ಮಂಜೇಶ್ವರ:  ಮನೆಯಲ್ಲಿ ಗಲಾಟೆ ಸೃಷ್ಟಿಸುತ್ತಿದ್ದಾನೆಂದು ನಾಗರಿಕರು ನೀಡಿದ ದೂರಿನಂತೆ  ಮಂಜೇಶ್ವರ ಪೊಲೀಸರು ಕಸ್ಟಡಿಗೆ ತೆಗೆದು ಬಳಿಕ ಸಂಬಂಧಿಕನೊಂದಿಗೆ ಜಾಮೀನಿನಲ್ಲಿ ಬಿಡುಗಡೆಗೊಳಿಸಿದ ಯುವಕನನ್ನು ಕೊಲೆಗೈದ ಪ್ರಕರ ಣದಲ್ಲಿ ಇನ್ನೋರ್ವನನ್ನು ಬಂಧಿಸ ಲಾಗಿದೆ. ಕುಂಜತ್ತೂರು ನಿವಾಸಿಯಾದ ನೌಫಲ್ ಎಂಬಾತನನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ. ಈತನನ್ನು ತನಿಖೆಗೊಳಪಡಿಸಲಾಗುತ್ತಿದೆ. ಮೀಂಜ ಮದಕ್ಕಳದ  ದಿ| ಅಬ್ದುಲ್ಲ ಎಂಬವರ ಪುತ್ರ ಮೊಯ್ದೀನ್ ಆರಿಫ್ (21) ಕೊಲೆಗೀಡಾದ ಪ್ರಕರಣದಲ್ಲಿ  ನೌಫಲ್ ನನ್ನು ಬಂಧಿಸಲಾಗಿದೆ. 8 ಮಂದಿ ಆರೋಪಿಗಳಿರುವ ಈ ಪ್ರಕರಣದಲ್ಲಿ ಮೂವರನ್ನು ಈ ಹಿಂದೆ ಬಂಧಿಸಲಾ ಗಿತ್ತು. …

ವಿಷ ಸೇವಿಸಿ ಚಿಕಿತ್ಸೆಯಲ್ಲಿದ್ದ ತಲೆಹೊರೆ ಕಾರ್ಮಿಕ ಮೃತ್ಯು

ಕಾಸರಗೋಡು: ವಿಷ ಸೇವಿಸಿ ಗಂಭೀರ ಅಸ್ವಸ್ಥಗೊಂಡು ಆಸ್ಪತ್ರೆ ಯಲ್ಲಿ ಚಿಕಿತ್ಸೆಯಲ್ಲಿದ್ದ ತಲೆಹೊರೆ ಕಾರ್ಮಿಕ ಮೃತಪಟ್ಟನು. ಕೇಳುಗುಡ್ಡೆ ನಿವಾಸಿ ಉಮೇಶ್ ಎಂಬವರ ಪುತ್ರ ಯೋಗೀಶ್ (32) ಮೃತಪಟ್ಟ ಯುವಕ. ಬಟ್ಟಂಪಾರೆಯಲ್ಲಿ ತಲೆಹೊರೆ ಕಾರ್ಮಿಕನಾಗಿದ್ದ ಇವರು ಬಿಎಂಎಸ್ ಕಾರ್ಯಕರ್ತ ನಾಗಿದ್ದರು. ಎರಡು ದಿನಗಳ ಹಿಂದೆ ವಿಷ ಸೇವಿಸಿದ ಸ್ಥಿತಿಯಲ್ಲಿ ಯೋಗೀಶ್ ಪತ್ತೆಯಾಗಿದ್ದರು. ಕೂಡಲೇ ಕಾಸರಗೋಡು ಜನರಲ್ ಆಸ್ಪತ್ರೆಗೂ ಬಳಿಕ ಪರಿಯಾರಂನ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ರಾತ್ರಿ ನಿಧನ ಸಂಭವಿಸಿದೆ. ಮೃತರು ತಂದೆ, …

ರಾಷ್ಟ್ರೀಯ ವೈದ್ಯಕೀಯ ಆಯೋಗದ ಅನುಮತಿ: ಉಕ್ಕಿನಡ್ಕ ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ಪ್ರವೇಶಕ್ಕೆ ಕ್ರಮ ಆರಂಭ

ಕಾಸರಗೋಡು: ಕಾಸರಗೋಡು ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ರಾಷ್ಟ್ರೀಯ ವೈದ್ಯಕೀಯ ಆಯೋಗ ಅಂಗೀಕಾರ ನೀಡಿದೆ. ಇದರಂತೆ  ಪ್ರಥಮ ವರ್ಷದ ಎಂಬಿಬಿಎಸ್ ಕೋರ್ಸ್ ಈ ತಿಂಗಳ ೨೨ರಂದು  ಆರಂಭಗೊಳ್ಳಲಿದೆ.  ಮೊದಲ ಹಂತದಲ್ಲಿ ೫೦ ಸೀಟುಗಳಿಗೆ ಪ್ರವೇಶ ನೀಡಲಾಗುವುದು. ಈ ಹಿಂದೆ ಕೈಗೊಳ್ಳಲಾದ ತೀರ್ಮಾನದಂತೆ ಕಾಸರಗೋಡು ಜನರಲ್ ಆಸ್ಪತ್ರೆ  ಟೀಚಿಂಗ್ ಆಸ್ಪತ್ರೆಯಾಗಿ ಕಾರ್ಯವೆಸಗಲಿದೆ.    ಉಕ್ಕಿನಡ್ಕದಲ್ಲಿ ನಿರ್ಮಾಣ ಹಂತದಲ್ಲಿರುವ ಅಡ್ಮಿನಿಸ್ಟ್ರೇಟೀವ್ ಬ್ಲೋಕ್‌ನಲ್ಲಿ ಥಿಯರಿ ತರಗತಿಗಳು ಹಾಗೂ ಜನರಲ್ ಆಸ್ಪತ್ರೆಯಲ್ಲಿ ಪ್ರಾಕ್ಟಿಕಲ್ ತರಗತಿಗಳು ನಡೆಯಲಿದೆ. ಮೊದಲ ವರ್ಷದ ಪಠ್ಯಕ್ರಮದ ಪ್ರಕಾರ ಮೊದಲು ಥಿಯರಿ ತರಗತಿ …

ಕರ್ನಾಟಕ ಮದ್ಯ ಸಹಿತ ಓರ್ವ ಸೆರೆ

ಕುಂಬಳೆ: ಕರ್ನಾಟಕ ಮದ್ಯ ಕೈವಶವಿರಿಸಿಕೊಂಡಿದ್ದ ವ್ಯಕ್ತಿಯನ್ನು ಕುಂಬಳೆ ಎಸ್‌ಐ ಕೆ. ಶ್ರೀಜೇಶ್ ನೇತೃತ್ವದ ಪೊಲೀಸರು ಬಂಧಿಸಿದ್ದಾರೆ.  ಕುಡಾಲುಮೇರ್ಕಳ ಪರಪ್ಪ ನಿವಾಸಿ  ಚಂದ್ರಹಾಸ (38) ಎಂಬಾತ ಬಂಧಿತ ವ್ಯಕ್ತಿ. ಈತನ ಕೈಯಿಂದ ಕರ್ನಾಟಕ ನಿರ್ಮಿತ 23 ಪ್ಯಾಕೆಟ್ ಮದ್ಯ ವಶಪಡಿಸಲಾಗಿದೆ. ನಿನ್ನೆ ರಾತ್ರಿ 8 ಗಂಟೆಗೆ ಕಯ್ಯಾರು ಚರ್ಚ್ ರಸ್ತೆಯಲ್ಲಿ ಪೊಲೀಸರು ಗಸ್ತು ನಡೆಸುತ್ತಿದ್ದಾಗ ಮದ್ಯ ಸಹಿತ ವ್ಯಕ್ತಿ ಸೆರೆಗೀಡಾಗಿದ್ದಾನೆ.

ಅಬಕಾರಿ ಕಚೇರಿಗಳಲ್ಲಿ ವಿಜಿಲೆನ್ಸ್ ತಪಾಸಣೆ

ಕಾಸರಗೋಡು: ಜಿಲ್ಲೆಯ ಅಬಕಾರಿ ಕಚೇರಿಗಳಲ್ಲಿ ವಿಜಿಲೆನ್ಸ್ ತಪಾಸಣೆ ನಡೆಸಿದೆ. ರಾಜ್ಯದ 68 ಸರ್ಕಲ್ ಕಚೇರಿಗಳಲ್ಲಿ ತಪಾಸಣೆ ನಡೆಸಲಾಗಿದೆ. ಆಪರೇಶನ್ ಸೇವ್ ಸಿಪ್ ಎಂಬ ಹೆಸರಿನಲ್ಲಿ ನಡೆಸಿದ ತಪಾಸಣೆಯಲ್ಲಿ ಅಬಕಾರಿ ಅಧಿಕಾರಿಗಳ ಕೈಯಿಂದ ಹಾಗೂ ಕಚೇರಿ ಸಮೀಪದಲ್ಲಿ ಉಪೇಕ್ಷಿತ ಸ್ಥಿತಿಯಲ್ಲಿ ಹಣ ಪತ್ತೆಯಾಗಿದೆ. ಕಾಸರಗೋಡು ಅಬಕಾರಿ ಸರ್ಕಲ್ ಕಚೇರಿಯಲ್ಲಿ ನಡೆಸಿದ ತಪಾಸಣೆ ವೇಳೆ ಲೆಕ್ಕದಲ್ಲಿ ತೋರಿಸದ 6 ಸಾವಿರ ರೂ. ವಿಜಿಲೆನ್ಸ್ ಪತ್ತೆಹಚ್ಚಿದೆ.

ಅಂತಿಮ ಮತದಾರ ಯಾದಿ ಪ್ರಕಟ: ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ; 2.83 ಕೋಟಿ ಮತದಾರರು

ಕಾಸರಗೋಡು: ಸ್ಥಳೀಯಾಡಳಿತ ಸಂಸ್ಥೆಗಳಿಗೆ ನಡೆಯಲಿರುವ ಚುನಾ ವಣೆಯ ಅಂತಿಮ ಮತದಾರ ಯಾದಿಯನ್ನು ರಾಜ್ಯ ಚುನಾವಣಾ ಆಯೋಗ ಪ್ರಕಟಿಸಿದೆ. ಇದರಲ್ಲಿ 2,83,12,472 (2.83 ಕೋಟಿ) ಮತದಾರರು ಒಳಗೊಂಡಿದ್ದಾರೆ. ಜುಲೈ 23ರಂದು ಪ್ರಕಟಿಸಲಾದ ಕರಡು ಮತದಾರ ಯಾದಿಯಲ್ಲಿ ಇದ್ದ ಸಂಖ್ಯೆಗಿಂತ ಅಂತಿಮ ಮತದಾರ ಯಾದಿಯಲ್ಲಿ 16,34,216 ರಷ್ಟು ಹೆಚ್ಚಳ ಉಂಟಾಗಿದೆ. ಮತದಾರ ಯಾದಿ ರಾಜ್ಯ ಚುನಾವಣಾ ಆಯೋಗದ ವೆಬ್ ಸೈಟ್, ಆಯಾ ಸ್ಥಳೀಯಾಡಳಿತ ಸಂ ಸ್ಥೆಗಳು, ತಾಲೂಕು ಮತ್ತು ಗ್ರಾಮ ಕಚೇರಿಗಳಲ್ಲಿ ಪರಿಶೀಲನೆಗೆ ಲಭಿಸುವುದು.

ಎಂಡಿಎಂಎ ಸಹಿತ ಆಟೋ ಚಾಲಕ ಸೆರೆ

ಕುಂಬಳೆ: ಮಾದಕವಸ್ತುವಾದ ಎಂಡಿಎಂಎ ಮಾರಾಟಕ್ಕಾಗಿ ಕೊಂಡೊಯ್ಯುತ್ತಿದ್ದ ಆಟೋ ಚಾಲಕನನ್ನು ಕುಂಬಳೆ ಪೊಲೀಸರು ಸೆರೆಹಿಡಿದಿದ್ದಾರೆ. ಕೊಡ್ಯಮ್ಮೆ ಪೂಕಟ್ಟೆ ನಿವಾಸಿ ಅಬ್ದುಲ್ ಅಸೀಸ್ (42) ಬಂಧಿತ ವ್ಯಕ್ತಿ. ನಿನ್ನೆ ರಾತ್ರಿ 11 ಗಂಟೆಗೆ ಇನ್‌ಸ್ಪೆಕ್ಟರ್ ಕೆ.ಪಿ. ಜಿಜೀಶ್ ನೇತೃತ್ವದ ಪೊಲೀಸರು ಕೊಡ್ಯಮ್ಮೆ ಜಂಕ್ಷನ್‌ನಲ್ಲಿ ಗಸ್ತು ನಡೆಸುತ್ತಿದ್ದ ವೇಳೆ ಬಂದ ಆಟೋ ರಿಕ್ಷಾವನ್ನು ತಡೆದು ನಿಲ್ಲಿಸಿ ಪರಿಶೀಲಿಸಿದಾಗ ಅದರಲ್ಲಿ 18.20 ಗ್ರಾಂ ಎಂಡಿಎಂಎ ಪತ್ತೆಯಾ ಗಿದೆ. ಆಟೋ ರಿಕ್ಷಾವನ್ನು ಕಸ್ಟಡಿಗೆ ತೆಗೆಯಲಾಗಿದೆ. ಕಾರ್ಯಾ ಚರಣೆ ನಡೆಸಿದ ತಂಡದಲ್ಲಿ ಇನ್‌ಸ್ಪೆಕ್ಟರ್ ಜತೆಗೆ ಎಸ್‌ಐಕೆ. …

ಅಕ್ರಮ ಮರಳುಗಾರಿಕೆ: ಇಬ್ಬರ ಸೆರೆ

ಕುಂಬಳೆ: ಕೇರಳ ಮಾರಿಟೈಂ ಮಂಡಳಿಯ ವ್ಯಾಪ್ತಿಗೊಳಪಟ್ಟ ಶಿರಿಯಾ ಅಳಿವೆ ಬಾಗಿಲಿನಿಂದ ಅಕ್ರಮವಾಗಿ ತೆಗೆದು ವ್ಯಾನ್‌ನಲ್ಲಿ ಹೊಯ್ಗೆ ಸಾಗಿಸಿದುದಕ್ಕೆ ಸಂಬಂಧಿಸಿ ಇಬ್ಬರನ್ನು ಕುಂಬಳೆ ಪೊಲೀಸರು ಸೆರೆಹಿಡಿದಿದ್ದಾರೆ. ಆರಿಕ್ಕಾಡಿ ನಿವಾಸಿ ಮನ್ಸೂರ್ ಅಲಿ(40) ಮತ್ತು  ಪೆರುವಾಡು ಕಡಪ್ಪುರದ ಮೊಹಮ್ಮದ್ ಶಾಫಿ(25) ಎಂಬವರು ಬಂಧಿತ ರಾದವರು. ಬಿಎನ್‌ಎಸ್‌ನ ಸೆಕ್ಷನ್ 305 (ಇ) ಪ್ರಕಾರ ಇವರಿಬ್ಬರ ವಿರುದ್ಧ ಕೇಸು ದಾಖಲಿಸಲಾಗಿದ. ನಂತರ ಅವರನ್ನು ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ. ಶಿರಿಯ ಅಳಿವೆ ಬಾಗಿಲಿನಿಂದ ದೋಣಿ ಉಪಯೋಗಿಸಿ ಹೊಯ್ಗೆ ತೆಗೆದು ಅದನ್ನು ಗೋಣಿ ಚೀಲದಲ್ಲಿ ತುಂಬಿಸಿ ವ್ಯಾನ್‌ನಲ್ಲಿ …

ಓಣಂ ಬಂತು: ಕೈಯಲ್ಲಿ ದುಡ್ಡಿಲ್ಲ: ಎಂಡೋಸಲ್ಫಾನ್ ಸಂತ್ರಸ್ತರಿಗೆ 7 ತಿಂಗಳಿಂದ ಪಿಂಚಣಿ ಮೊಟಕು; ಎಲ್ಲೆಡೆ ನಿರಾಸೆ

ಕಾಸರಗೋಡು: ಓಣಂ ಹಬ್ಬವನ್ನು ಸಂಭ್ರಮದಿಂದ ಆಚರಿಸಬೇಕೆಂಬ ನಿರೀಕ್ಷೆಯನ್ನಿರಿಸಿದ್ದ ಜಿಲ್ಲೆಯ ಎಂಡೋ ಸಲ್ಫಾನ್ ಸಂತ್ರಸ್ತರಿಗೆ ನಿರಾಸೆಯುಂಟು ಮಾಡಿದೆ. ಎಂಡೋಸಲ್ಫಾನ್ ಸಂತ್ರಸ್ತರಿಗೆ ಸರಕಾರದಿಂದ ಲಭಿಸಬೇಕಾದ ಪಿಂಚಣಿ ಕಳೆದ 7 ತಿಂಗಳಿಂದ ಲಭಿಸಿಲ್ಲ ವೆನ್ನಲಾ ಗಿದೆ. ಓಣಂ ಹಬ್ಬಾಚರಣೆ ಸಂದರ್ಭದಲ್ಲಿ ಎಲ್ಲರಿಗೂ ಪಿಂಚಣಿ ಸಹಿತ ಸೌಲಭ್ಯಗಳು ಲಭಿಸುತ್ತಿದ್ದು, ತಮಗೂ ಅವರ ಜತೆ ಪಿಂಚಣಿ ಲಭಿಸಬಹುದೆಂದು ಇವರು ನಿರೀಕ್ಷೆಯಿರಿಸಿದ್ದರು. ಆದರೆ ಇದುವರೆಗೆ ಪಿಂಚಣಿ ಮೊತ್ತ ಕೈಗೆ ತಲುಪದಿರುವುದು ಇವರಿಗೆ ತೀವ್ರ ನಿರಾಸೆ ಮೂಡಿಸಿದೆ. ಮಾತ್ರವಲ್ಲ ಓಣಂ ಆಚರಮೆಗೆ ಕೈಯಲ್ಲಿ ನಯಾಪೈಸೆ ಇಲ್ಲದೆ ತೀವ್ರ …