ಭೀತಿ ಸೃಷ್ಟಿಸುವ ರೀತಿಯಲ್ಲಿ ಚಲಾಯಿಸಿದ ಜೀಪು ಪೊಲೀಸರ ವಶ

ಕಾಸರಗೋಡು: ಬೇಕಲ ಬೀಚ್ ನಲ್ಲಿ ಭೀತಿ ಸೃಷ್ಟಿಸುವ ರೀತಿಯಲ್ಲಿ ಚಲಾಯಿಸಿದ ಜೀಪನ್ನು ಬೇಕಲ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್  ಎಂ.ವಿ. ಶ್ರೀದಾಸ್ ನೇತೃತ್ವದ ಪೊಲೀಸರು ವಶಕ್ಕೆ ತೆಗೆದುಕೊಂ ಡಿದ್ದಾರೆ. ಬೇಕಲ ಕೋಟೆಯಲ್ಲಿ  ಭಾರೀ ಸಂಖ್ಯೆಯಲ್ಲಿ  ಪ್ರವಾಸಿಗರು ಬಂದು ಸೇರಿದ ವೇಳೆ ಅಲ್ಲಿ ಭೀತಿ ಸೃಷ್ಟಿಸುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದ ಹಿನ್ನೆಲೆಯಲ್ಲಿ ಈ ಜೀಪನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.  ವಶಕ್ಕೆ ತೆಗೆದ ವಾಹನವನ್ನು ನ್ಯಾಯಾಲಯದಲ್ಲಿ ಹಾಜರುಪಡಿಸಲಾಗುವುದು. ಅದರ ಮಾಲಕನಿಗೆ ನೋಟೀಸು ಜ್ಯಾರಿಗೊ ಳಿಸಲಾಗುವುದೆಂದು ಪೊಲೀಸರು ತಿಳಿಸಿದ್ದಾರೆ.

ಕುಬಣೂರು ರಸ್ತೆಯಲ್ಲಿ ತ್ಯಾಜ್ಯ ರಾಶಿ: ದುರ್ವಾಸನೆ ಸಮಸ್ಯೆ

ಉಪ್ಪಳ: ರಸ್ತೆ ಬದಿಯಲ್ಲಿ ತ್ಯಾಜ್ಯ ಉಪೇಕ್ಷಿಸುತ್ತಿರುವುದು ವ್ಯಾಪಕಗೊಂಡಿದ್ದು, ಎಸೆಯುವವರ ವಿರುದ್ದ ಕಠಿಣ ಕ್ರಮಕ್ಕೆ ಊರವರು ಒತ್ತಾಯಿಸಿದ್ದಾರೆ. ಶಾಂತಿಗುರಿ-ಕುಬಣೂರು ರಸ್ತೆಯ ವಿವಿಧೆಡೆಗಳಲ್ಲಿ ತ್ಯಾಜ್ಯ ದುರ್ವಾಸನೆ ಬೀರುತ್ತಿದ್ದು, ಪಾದಚಾರಿಗಳು ಹಾಗೂ ವಾಹನ ಸವಾರರಿಗೆ ಸಮಸ್ಯೆಯಾಗುತ್ತಿದೆ. ರಾತ್ರಿ ಹೊತ್ತಲ್ಲಿ ವಾಹನಗಳಲ್ಲಿ ತಂದು ಪ್ಲಾಸ್ಟಿಕ್ ಸಹಿತ ವಿವಿಧ ರೀತಿಯ ತ್ಯಾಜ್ಯವನ್ನು ಎಸೆಯಲಾಗುತ್ತಿರುವುದಾಗಿ ದೂರಲಾಗಿದೆ.ಮಳೆಗೆ ತ್ಯಾಜ್ಯ ದುರ್ವಾಸನೆ ಯಿಂದ ಪರಿಸರ ನಿವಾಸಿಗಳಲ್ಲಿ ಆತಂಕ ಹೆಚ್ಚಿದೆ. ಹಲವು ವರ್ಷಗಳ ಹಿಂದೆ ಈ ಪರಿಸರದ ಸುವರ್ಣಗಿರಿ ಹೊಳೆಗೆ ಮದುವೆ ಸಮಾರಂಭದ ತ್ಯಾಜ್ಯವನ್ನು ಪ್ಲಾಸ್ಟಿಕ್ ಚೀಲದಲ್ಲಿ ತುಂಬಿಸಿ ಎಸೆಯಲಾಗಿದ್ದು, …

ಹಿರಿಯ ಕೃಷಿಕ ನಿಧನ

ಬದಿಯಡ್ಕ: ಬದಿಯಡ್ಕ ಸಮೀಪದ ಮಡಿಪ್ಪು ನಿವಾಸಿ ಕೃಷ್ಣ ಭಟ್ (76) ಇಂದು ಮುಂಜಾನೆ ಹೃದಯಾಘಾತದಿಂದ ನಿಧನ ಹೊಂದಿದರು. ಹಿರಿಯ ಕೃಷಿಕನಾಗಿದ್ದ ಇವರಿಗೆ ಅಲ್ಪ ಕಾಲದಿಂದ ಅಸೌಖ್ಯ ಬಾಧಿಸಿದ್ದು, ಕಾಸರಗೋಡಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದರು. ಕೃಷಿಯ ಜತೆಗೆ ದ್ವಿಚಕ್ರ ವಾಹನಗಳ ದುರಸ್ತಿಯಲ್ಲಿ ನಿಪುಣರಾಗಿದ್ದರು. ಇವರ ಪತ್ನಿ ರುಕ್ಮಿಣಿ ಈ ಹಿಂದೆ ನಿಧನರಾಗಿದ್ದಾರೆ. ಮೃತರು ಮಕ್ಕಳಾದ  ವೆಂಕಟ್ರಾಜ, ವಿಜಯರಾಜ, ಗಣೇಶ್, ಸೊಸೆಯಂದಿರಾದ ವಿನಯಶ್ರೀ, ವಸುದಾ, ಸಹೋದರ ಗಣಫತಿ ಭಟ್, ಸಹೋದರಿ ಸವಿತ (ಉಪ್ಪಿನಂಗಡಿ) ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಮಜ್ಲೀಸ್ ಸಂಸ್ಥೆಗಳ ಸನದುದಾನ ಸಮ್ಮೇಳನ

ಕಾಸರಗೋಡು: ಅಡ್ಕತ್ತಬೈಲು ಮಜ್ಲೀಸ್ ಎಜುಕೇಶನ್ ಟ್ರಸ್ಟ್‌ನ ಅಧೀನದಲ್ಲಿ ಕಾರ್ಯಾಚರಿಸುವ ಮಜ್ಲೀಸ್, ಅಲ್ ಬಯಾನ್ ಸಂಸ್ಥೆಗಳ ವಾರ್ಷಿಕ ಹಾಗೂ ಸನದುದಾನ ಸಮ್ಮೇಳನ ಜರಗಿತು. ಇದೇ ವೇಳೆ ಖುರ್‌ಆನ್‌ನಕೈ ಬರಹದ ಪ್ರತಿ ಸಿದ್ಧಪಡಿಸಿದ ವಿದ್ಯಾರ್ಥಿನಿ, ಒಂದೇ ರಾತ್ರಿ ರಕ್ಅತ್ ಸುನ್ನತ್ ನಮಸ್ಕಾರದಲ್ಲಿ ಖುರ್‌ಆನ್ ಕಂಠಪಾಠ ಪಾರಾಯಣ ಮಾಡಿದ 34 ಮಂದಿಯನ್ನು ಅಭಿನಂದಿಸಲಾಯಿತು. ಟ್ರಸ್ಟ್ ಅಧ್ಯಕ್ಷ ಅಬ್ದುಲ್ ಕರೀಂ ಸಿಟಿಗೋಲ್ಡ್ ಅಧ್ಯಕ್ಷತೆ ವಹಿಸಿದ್ದು, ಕರ್ನಾಟಕ ಸ್ಪೀಕರ್ ಯು.ಟಿ. ಖಾದರ್ ಉದ್ಘಾಟಿಸಿದರು. ವಿ.ಎಚ್. ಅಲಿಯಾರ್ ಖಾಸಿಮಿ ಮರ್‌ಹು ರಸುಲ್, ಹಾಫೀಸ್ ಹಾಶಿಂ ಹಾಸನಿ …

ಕ್ಷೇತ್ರ ಪಾವಿತ್ರ್ಯ ರಕ್ಷಣೆಗೆ ಒಗ್ಗಟ್ಟಿನ ಸಂಕಲ್ಪ: ಎಡನೀರುಶ್ರೀ ನೇತೃತ್ವದಲ್ಲಿ 8ರಂದು ಧರ್ಮಸ್ಥಳಕ್ಕೆ ವಾಹನ ಜಾಥಾ

ಎಡನೀರು: ಎಡನೀರು ಮಠದಲ್ಲಿ ಧರ್ಮಸ್ಥಳ ಕ್ಷೇತ್ರದ ಭಕ್ತರು ಮತ್ತು ಅಭಿಮಾನಿಗಳ ಸಭೆ ಜರಗಿತು. ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಉದ್ಘಾಟಿಸಿ ಆಶೀರ್ವಚನ ನೀಡಿ ಮಾತನಾಡಿದರು. ಧರ್ಮಸ್ಥಳವು ನಮ್ಮ ನಂಬಿಕೆಯ ಪ್ರಕಾಶ ಕೇಂದ್ರವಾಗಿದ್ದು, ಅದರ ಪಾವಿತ್ರ್ಯತೆಯನ್ನು ಕಾಪಾಡುವುದು ಪ್ರತಿಯೊಬ್ಬ ಭಕ್ತನ ಕರ್ತವ್ಯ ಎಂದರು. ರಾಜಕೀಯ ಜಾತಿ ಮತ ಭೇದ ಭಾವ ಮರೆತು ಒಟ್ಟಾಗಿ ಸಹಕರಿಸಬೇಕೆಂದು ಅವರು ಕರೆ ನೀಡಿದರು. ಸೆ. 8ರಂದು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರ ನೇತೃತ್ವದಲ್ಲಿ ಎಡನೀರು ಮಠದಿಂದ ಧರ್ಮಸ್ಥಳಕ್ಕೆ ಬೃಹತ್ ವಾಹನ …

ಬಾಗಿಲುಗಳನ್ನು ತೆರೆದಿರಿಸಿ ಸಂಚರಿಸಿದ ಬಸ್‌ಗಳಿಂದ ಜುಲ್ಮಾನೆ ವಸೂಲಿ

ತಿರುವನಂತಪುರ: ಸಾರಿಗೆ ಕಾನೂನನ್ನು ಉಲ್ಲಂಘಿಸಿಬಾಗಿಲು ಗಳನ್ನು ತೆರೆದು ಸೇವೆ ನಡೆಸಿದ 4099 ಬಸ್‌ಗಳಿಂದಾಗಿ ಒಟ್ಟು 12,69,750 ರೂ.ವನ್ನು ಜುಲ್ಮಾನೆ ರೂಪದಲ್ಲಿ ವಸೂಲಿ ಮಾಡಲಾಗಿದೆ. ಬಾಗಿಲುಗಳನ್ನು ತೆರೆದಿರಿಸಿ ಸೇವೆ ನಡೆಸುತ್ತಿರುವ ಬಸ್‌ಗಳ ವಿರುದ್ಧ ಕ್ರಮ ಕೈಗೊಳ್ಳುವ ತಡೆಗಟ್ಟುವ ಸಲುವಾಗಿ ರಾಜ್ಯ ಸರಕಾರ ರಸ್ತೆ ಸುರಕ್ಷತಾ ಮ್ಯಾನೇಜ್‌ಮೆಂಟ್ ಐಜಿಯವರ ನೇತೃತ್ವದಲ್ಲಿ ರಾಜ್ಯದಾದ್ಯಂತವಾಗಿ ಒಂದು ವಾರ ನಡೆಸಲಾದ ಸ್ಪೆಷಲ್ ಡ್ರೈವ್ ಕಾರ್ಯಾಚರಣೆಯಲ್ಲಿ ಈ ಜುಲ್ಮಾನೆ ವಸೂಲಿ ಮಾಡಲಾಗಿದೆ. ಬಸ್‌ಗಳು ಬಾಗಿಲುಗಳನ್ನು ತೆರೆದಿರಿಸಿ ಸೇವೆ ನಡೆಸಿದಲ್ಲಿ ಕೆಲವೊಮ್ಮೆ ಪ್ರಯಾಣಿಕರು ನಿಯಂತ್ರಣ ತಪ್ಪಿ ರಸ್ತೆಗೆ …

ಖಾಸಗಿ ಬಸ್‌ಗಳಲ್ಲಿ ಕೆಲಸಕ್ಕೆ ಪೊಲೀಸ್ ಸರ್ಟಿಫಿಕೇಟ್ ಬೇಕೆಂಬ ಕ್ರಮಕ್ಕೆ ಹೈಕೋರ್ಟ್ ಸಮರ್ಥನೆ

ಕೊಚ್ಚಿ: ಖಾಸಗಿ ಬಸ್‌ಗಳಲ್ಲಿ ದುಡಿಯುವ ಚಾಲಕರು ಮತ್ತು ನಿರ್ವಾಹಕರು ಪೊಲೀಸ್ ಸರ್ಟಿಫಿಕೇಟ್ ಪಡೆಯಬೇಕೆಂಬ ರಾಜ್ಯ ಸಾರಿಗೆ ಇಲಾಖೆ ನೀಡಿದ ಹೊಸ ನಿರ್ದೇಶಕ್ಕೆ ರಾಜ್ಯ ಹೈಕೋರ್ಟ್ ಸಮರ್ಥನೆ ನೀಡಿದೆ. ಬಸ್‌ಗಳ ಹಿಂದೆ ಮತ್ತು ಮುಂದುಗಡೆ ಕ್ಯಾಮರಾಗಳನ್ನು ಅಳವಡಿಸಬೇಕು, ವಾಹನ ಎಲ್ಲಿಗೆ ತಲುಪಿದೆ ಎಂಬುವುದನ್ನು ಅರಿತುಕೊಳ್ಳಲು ಜಿಯೋ ಫೆನ್ಸಿಂಗ್ ವ್ಯವಸ್ಥೆ ಏರ್ಪಡಿಸಬೇಕೆಂಬ ನಿರ್ದೇಶಗಳಿಗೂ ಹೈಕೋರ್ಟ್ ಅಸ್ತು ನೀಡಿದೆ. ಮಾತ್ರವಲ್ಲ ಖಾಸಗಿ ಬಸ್‌ಗಳ ಅಮಿತವೇಗ ಹಾಗೂ ಸ್ಪರ್ಧಾತ್ಮಕ ಓಟವನ್ನು ನಿಯಂತ್ರಿಸಲು ಸಾರಿಗೆ ಇಲಾಖೆ ಜ್ಯಾರಿಗೊಳಿಸಿದ ಹೊಸ ಕ್ರಮಗಳಿಗೂ ನ್ಯಾಯಾಲಯ ಸಮರ್ಥನೆ ನೀಡಿದೆ. …

ಜನರಲ್ ಆಸ್ಪತ್ರೆಯಲ್ಲಿ ಉಚಿತ ಊಟ ವಿತರಿಸುವ ವ್ಯಕ್ತಿ ವಿರುದ್ಧ ದೂರು: ತನಿಖೆಗೆ ಮಾನವಹಕ್ಕು ಆಯೋಗ ಆದೇಶ

ಕಾಸರಗೋಡು: ಜನರಲ್ ಆಸ್ಪತ್ರೆಯ ರೋಗಿಗಳಿಗೆ ದಿನಂಪ್ರತಿ ಉಚಿತವಾಗಿ ಮಧ್ಯಾಹ್ನದೂಟ ವಿತರಿಸುವ ವ್ಯಕ್ತಿ ವಿರುದ್ಧ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ಆ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇ ಕೆಂದು ಮಾನವ ಹಕ್ಕು ಆಯೋಗದ ಜ್ಯುಡೀಶಿಯಲ್ ಸದಸ್ಯ ಕೆ. ಬೈಜುನಾಥ್ ಟೌನ್ ಎಸ್‌ಎಲ್‌ಒಗೆ ನಿರ್ದೇಶಿಸಿದ್ದಾರೆ. ದೂರಿನಲ್ಲಿ ಮಾನವ ಹಕ್ಕು ಉಲ್ಲಂಘನೆ ಬಗ್ಗೆ ಆಯೋಗದ ಅರಿವಿಗೆ ಬಂದಿಲ್ಲವೆಂದೂ ಆದೇಶ ದಲ್ಲಿ ತಿಳಿಸಲಾಗಿದೆ. ಉಚಿತ ಆಹಾರದ ಹೆಸರಲ್ಲಿ ಜನರಿಂದ ಸಾವಿರಾರು ರೂಪಾಯಿ ಪಡೆಯು ತ್ತಿರು ವುದಾಗಿ ಆರೋಪಿಸಿ ಸಲ್ಲಿಸಿದ ದೂರಿನಂತೆ ಈ ನಿರ್ದೇಶ …

ಪಿಟ್ ಎನ್‌ಡಿಪಿಎಸ್ ಕಾನೂನು ಪ್ರಕಾರ ಓರ್ವ ಸೆರೆ

ಕಾಸರಗೋಡು: ಮಾದಕ ದ್ರವ್ಯ ಪ್ರಕರಣದ ಆರೋಪಿಯನ್ನು ಪಿಟ್ ಎನ್‌ಡಿಪಿಎಸ್ ಕಾನೂನಿನ ಪ್ರಕಾರ ಪೊಲೀಸರು ಬಂಧಿಸಿದ್ದಾರೆ. ಮುಳಿಯಾರು ಮಾಸ್ತಿಕುಂಡ್ ನಿವಾಸಿ ಮುಹಮ್ಮದ್ ಸಹದ್ (26) ಬಂಧಿತ ಆರೋಪಿ. ಈತ ಆದೂರು, ವಿದ್ಯಾನಗರ ಪೊಲೀಸ್ ಠಾಣೆಗಳಲ್ಲಿ ಮತ್ತು ಎರ್ನಾಕುಳಂ ಎಕ್ಸೈಸ್ ರೇಂಜ್ ಕಚೇರಿಯಲ್ಲಿ ದಾಖಲಿಸಲಾದ ಮಾದಕ ದ್ರವ್ಯ ಪ್ರಕರಣಗಳಲ್ಲಿ ಆರೋಪಿಯಾಗಿ ದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ಬಂಧಿತನನ್ನು ನಂತರ ಪೂಜಾಪುರ ಸೆಂಟ್ರಲ್ ಜೈಲಿಗೆ ಸಾಗಿಸಲಾಗಿದೆ. ಮಾರಾಟ ಮಾಡಲೆಂದು ಮಾದಕ ದ್ರವ್ಯವಾದ 99.54 ಗ್ರಾಂ ಎಂಡಿಎಂಎ ಕೈವಶವಿರಿಸಿದುದಕ್ಕೆ ಸಂಬಂಧಿಸಿ ಆದೂರು ಪೊಲೀಸ್ ಠಾಣೆಯಲ್ಲಿ …

ಆನ್‌ಲೈನ್ ಟ್ರೇಡಿಂಗ್: ಚಳಿಯಂಗೋಡು ನಿವಾಸಿಯ 56 ಲಕ್ಷ ರೂ. ವಂಚನೆ; ಸೈಬರ್ ಪೊಲೀಸರಿಂದ ತನಿಖೆ

ಕಾಸರಗೋಡು: ವಿವಿಧ ಕಂಪೆನಿಗಳ ಶೇರ್‌ಗಳನ್ನು ಖರೀದಿಸಿ ಟ್ರೇಡಿಂಗ್ ನಡೆಸಲೆಂದು ತಿಳಿಸಿ 56,10,000 ರೂ. ವಂಚಿಸಿರುವುದಾಗಿ ದೂರಲಾಗಿದೆ. ಚೆಮ್ನಾಡ್, ಚಳಿಯಂಗೋಡು ವಾಲಿವ್ಯೂ ನಿವಾಸಿ ಅಬ್ದುಲ್ ಖಾದರ್ ಕಡವತ್ ನೀಡಿದ ದೂರಿನಂತೆ ಕಾಸರಗೋಡು ಸೈಬರ್ ಪೊಲೀಸರು ತನಿಖೆ ಆರಂಭಿಸಿದರು. ಗೂಗಲ್ ಪ್ಲೇಸ್ಟೋರ್‌ನಿಂದ ಐಐಎಫ್‌ಎಲ್ ಎಂಬ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಸಿ 2025 ಜುಲೈ 2ರಿಂದ ಆಗಸ್ಟ್ 5ರವರೆಗಿರುವ ದಿನಗಳಲ್ಲಿ ವಿವಿಧ ಖಾತೆಗಳಿಗೆ ಹಣ ಪಾವತಿಸುವಂತೆ ಮಾಡಿ ವಂಚನೆ ನಡೆಸಿರುವುದಾಗಿ ಸೈಬರ್ ಪೊಲೀಸರು ದಾಖಲಿಸಿದ ಪ್ರಕರಣದಲ್ಲಿ ಹೇಳಲಾಗಿದೆ. ಆರೋಪಿಗಳನ್ನು ಪತ್ತೆಹಚ್ಚಲಿರುವ ಯತ್ನ ಮುಂದುವರಿಯುತ್ತಿದೆ.