ಮನೆಯೊಳಗೆ ಪತ್ತೆಯಾದ ಪ್ರಾಚ್ಯವಸ್ತುಗಳಿಗೆ ಪೊಲೀಸ್ ಕಾವಲು; 24ರಂದು ಪರಿಶೀಲನೆ
ಕಾಸರಗೋಡು: ಬೇಕಲ ಪೊಲೀಸ್ ಠಾಣೆ ವ್ಯಾಪ್ತಿಯ ಕೋಟಿಕುಳಂನಲ್ಲಿ ಮುಚ್ಚುಗಡೆಗೊಳಿಸಿದ ಮನೆಯೊಳಗೆ ಪತ್ತೆಯಾದ ಪ್ರಾಚ್ಯ ವಸ್ತುಗಳಿಗೆ ಪೊಲೀಸ್ ಕಾವಲು ಏರ್ಪಡಿಸಲಾಗಿದೆ. ಆರ್ಕಿ ಯೋಲಜಿಕಲ್ ಸರ್ವೇಯ ತೃಶೂರು ವಲಯ ಅಧಿಕಾರಿಗಳ ನಿರ್ದೇಶದಂತೆ ಪೊಲೀಸರು ಬಿಗು ಕಾವಲು ಏರ್ಪಡಿಸಿದ್ದಾರೆ. ಆರ್ಕಿಯೋಲಜಿಕಲ್ ಇಲಾಖೆ ಅಧಿಕಾರಗಳು ಈ ತಿಂಗಳ 24ರಂದು ತಲುಪಿ ಪ್ರಾಚ್ಯ ವಸ್ತುಗಳನ್ನು ಪರಿಶೀಲಿಸಲಿದ್ದಾರೆ. ಅದುವರೆಗೆ ಇವುಗಳು ಪೊಲೀಸರ ಕಾವಲಿನಲ್ಲಿರಲಿದೆ. ಬೇಕಲ ಪೊಲೀಸ್ ಠಾಣೆಯಿಂದ ಕೂಗಳತೆ ದೂರದಲ್ಲೇ ಜನವಾಸವಿಲ್ಲದ ಮನೆಯಲ್ಲಿ ಪ್ರಾಚ್ಯವಸ್ತುಗಳು ಮೊನ್ನೆ ಸಂಜೆ ಪತ್ತೆಯಾಗಿದೆ. ಗುಪ್ತ ಮಾಹಿತಿ ಮೇರೆಗೆ ಬೇಕಲ ಪೊಲೀಸ್ …
Read more “ಮನೆಯೊಳಗೆ ಪತ್ತೆಯಾದ ಪ್ರಾಚ್ಯವಸ್ತುಗಳಿಗೆ ಪೊಲೀಸ್ ಕಾವಲು; 24ರಂದು ಪರಿಶೀಲನೆ”