ಕಾಸರಗೋಡು: ಕಾಸರಗೋಡು ಡಿನಲ್ಲಿ ಆಟೋ ಚಾಲಕನಾದ ಅಡೂರು ನಿವಾಸಿ ಬಿಎಂಎಸ್ ಕಾರ್ಯಕರ್ತ ಪಿ. ನಾಗೇಶ್ (50) ಹೃದಯಾಘಾತದಿಂದ ನಿಧನಹೊಂ ದಿದರು. ಶನಿವಾರ ಮುಂಜಾನೆ ಮಳೆ ಸುರಿದ ಹಿನ್ನೆಲೆಯಲ್ಲಿ ಮನೆಯ ಮೇಲೆ ಒಣಗಲು ಹಾಕಿದ್ದ ಅಡಿಕೆಯನ್ನು ತೆಗೆದ ಬಳಿಕ ಮನೆಯೊಳಗೆ ಕುಳಿತಿದ್ದ ನಾಗೇಶರಿಗೆ ಹೃದಯಾಘಾತ ವುಂಟಾಗಿತ್ತೆನ್ನಲಾಗಿದೆ. ಕೂಡಲೇ ಮನೆಯವರು ಅವರನ್ನು ಮುಳ್ಳೇರಿ ಯದ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಸ್ವ-ಗೃಹಕ್ಕೆ ಕೊಂಡೊಯ್ದು ಅಂತ್ಯಸಂಸ್ಕಾರ ನಡೆಸಲಾಯಿತು. ಕಾಸರಗೋಡು ಕೆಎಸ್‌ಆರ್‌ಟಿಸಿ ಡಿಪೋ ಸಮೀಪ ಆಟೋ ಚಾಲಕನಾಗಿ ಕಳೆದ ೨೫ ವರ್ಷಗಳಿಂದ ನಾಗೇಶ್ ಕೆಲಸ ನಿರ್ವಹಿಸುತ್ತಿದ್ದರು. ನಾಗೇಶ್‌ರ ಅಕಾಲಿಕ ನಿಧನಕ್ಕೆ ನಗರದ ಆಟೋ ಚಾಲಕರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಅಡೂರು ಪಿಲಮರ್ವದ ದಿ| ಅಪ್ಪೋಜಿರಾವ್-ಕಮಲ ದಂಪತಿಯ ಪುತ್ರನಾದ ಮೃತರು ಪತ್ನಿ ಮೋಹನಿ, ಮಕ್ಕಳಾದ ಆದ್ಯಶ್ರೀ, ಆರ್ಯಶ್ರೀ (ಶಾಲಾ ವಿದ್ಯಾರ್ಥಿನಿ ಯರು), ಸಹೋದರಿ ಈಶ್ವರಿ ಹಾಗೂ ಅಪಾರ ಬಂಧು-ಮಿತ್ರರನ್ನು






