ಯುವತಿಯನ್ನು ಅಪಹರಿಸಿ ಲೈಂಗಿಕ ಕಿರುಕುಳ: ಇಬ್ಬರು ಆಟೋ ಚಾಲಕರ ಸೆರೆ

ಕಾಸರಗೋಡು: 29ರ ಹರೆಯದ ಯುವತಿಯನ್ನು ಅಪಹರಿಸಿ ಲೈಂಗಿಕ ಕಿರುಕುಳ ನೀಡಿದ ಪ್ರಕರಣದ ಆರೋ ಪಿಗಳಾಗಿರುವ ಇಬ್ಬರು ಆಟೋ ಚಾಲಕರನ್ನು ಚಿತ್ತಾರಿ ಕಲ್ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಎ. ಅನಿಲ್ ಕುಮಾರ್ ಬಂಧಿಸಿದ್ದಾರೆ.

ಭೀಮನಡಿಯ ಪ್ರವೀಣ್ ಅಲಿಯಾಸ್ ಧನೇಶ್ (36) ಮತ್ತು ಮಾಂಙಾಡ್ ನಿವಾಸಿ ರಾಹುಲ್ (29) ಬಂಧಿತ ಆರೋಪಿಗಳು. ಇವರು ಪ್ರಯಾಣಿಸುತ್ತಿದ್ದ ಕಾರಿನಲ್ಲಿ ಯುವತಿಗೆ ಲಿಫ್ಟ್ ನೀಡಿ, ಆಕೆಯನ್ನು ಬೇರೊಂದು ಸ್ಥಳಕ್ಕೆ ಸಾಗಿಸಿ ಅಲ್ಲಿ ಆಕೆಗೆ ಬಲವಂತವಾಗಿ ಮದ್ಯ ಕುಡಿಸಿದ ಬಳಿಕ ಲೈಂಗಿಕ ಕಿರುಕುಳ ನೀಡಿರುವುದಾಗಿ ಆರೋಪಿಸಿ ಆಕೆ ನೀಡಿದ ದೂರಿನಂತೆ ಈ ಇಬ್ಬರು ಆರೋಪಿಗಳ ವಿರುದ್ಧ ಚಿತ್ತಾರಿಕಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಆ ಪ್ರಕರಣಕ್ಕೆ ಸಂಬಂಧಿಸಿ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ನಂತರ ನ್ಯಾಯಾಲಯದ ನಿರ್ದೇಶ ಪ್ರಕಾರ ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ.

RELATED NEWS

You cannot copy contents of this page