ಕಾಸರಗೋಡು: ಶಬರಿಮಲೆ ದರ್ಶನಕ್ಕೆ ತೆರಳಿದ ಅಯ್ಯಪ್ಪ ಭಕ್ತ ಹೃದಯಾಘಾತದಿಂದ ಮೃತಪಟ್ಟರು. ಪೆರಿಯಾಟಡ್ಕ ದೇವನ್ ಪೊಡಿಚ್ಚಪ್ಪಾರ ಕರಿಂಬಾಲಕ್ಕಾಲ್ ಹೌಸ್‌ನ ಎಂ. ಬಾಲಕೃಷ್ಣನ್ (63) ಮೃತಪಟ್ಟ ವ್ಯಕ್ತಿ. ನಿನ್ನೆ ಸಂಜೆ 4 ಗಂಟೆಗೆ ಪಂಪಾದಿಂದ ಶಬರಿಮಲೆಗಿರುವ ದಾರಿಯಲ್ಲಿ ನೀಲಿ ಮಲೆ ಏರುತ್ತಿದ್ದಂತೆ ಕುಸಿದು ಇವರು ಬಿದ್ದಿದ್ದಾರೆ. ಕೂಡಲೇ ನೀಲಿಮಲೆ ಕಾರ್ಡಿಯೋಲಜಿ ಸೆಂಟರ್‌ಗೆ ತಲುಪಿ ಸಿದರೂ ಜೀವ ರಕ್ಷಿಸಲಾಗಲಿಲ್ಲ. ಬಾಲ ಕೃಷ್ಣನ್ ಪತ್ನಿ ಕೆ.ವಿ. ಪ್ರತಿಭಾ, ಕಿರಿಯ ಪುತ್ರ ಗೋಪ ಕುಮಾರ್ ಎಂಬಿವ ರೊಂದಿಗೆ ಶನಿವಾರ ಶಬರಿಮಲೆಗೆ ತೆರಳಿದ್ದರು. ಸೌದಿಯಲ್ಲಿ ಹಲವು ವರ್ಷಗಳಿಂದ ವ್ಯಾಪಾರಿಯಾಗಿದ್ದರು. ಊರಿನಲ್ಲಿ ವಯನಾಟುಕುಲವನ್ ದೈವಮಹೋತ್ಸವಗಳ ಪ್ರಧಾನ ಪದಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ಅಲ್ಲದೆ ದೇವನ್ ಪೊಡಿಚ್ಚಾವರ ಕ್ಷೇತ್ರದ ಉಪಾಧ್ಯಕ್ಷರೂ ಆಗಿದ್ದಾರೆ. ದಿ| ಕುಂಞಿರಾಮನ್- ಎಂ. ನಾರಾಯಣಿ ದಂಪತಿಯ ಪುತ್ರನಾದ ಮೃತರು ಪತ್ನಿ, ಇತರ ಮಕ್ಕಳಾದ ಎಂ. ಪ್ರಬೀಶ್, ಪ್ರಣವ್, ಕೃಷ್ಣಪ್ರಸಾದ್, ಸೊಸೆಯಂದಿರಾದ ಅಮೃತ, ಜಿಲ್ಶಾ, ಕವಿತ, ಸಹೋದರ ಸಹೋದರಿಯರಾದ ಎಂ. ಕಾರ್ತ್ಯಾಯಿನಿ, ಎಂ. ನಾರಾಯಣನ್, ಎಂ. ರಾಜನ್, ಎಂ. ಶಶಿಕುಮಾರ್, ಎಂ. ಜಯನ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.







