ಹಾಲು ಗಂಟಲಲ್ಲಿ ಸಿಲುಕಿ ನಾಲ್ಕು ತಿಂಗಳು ಪ್ರಾಯದ ಮಗು ಮೃತ್ಯು

ಕಾಸರಗೋಡು:  ನಾಲ್ಕು ತಿಂಗಳು ಪ್ರಾಯದ ಗಂಡುಮಗು  ಗಂಟಲಲ್ಲಿ ಹಾಲು ಸಿಲುಕಿ ಮೃತಪಟ್ಟ ಘಟನೆ ಸಂಭವಿಸಿದೆ. ಬೇಕಲ  ಹದ್ದಾದ್‌ನಗರ ರಸೀನ ಮಂಜಿಲ್‌ನ ಕೆ. ಮುಹಮ್ಮದ್ ಹನೀಫರ ಪುತ್ರ ಲಿದಾನ್ ಫಾರ್ಮಿ ಮೃತಪಟ್ಟ  ಮಗುವಾಗಿದೆ. ನಿನ್ನೆ ರಾತ್ರಿ ಘಟನೆ ಸಂಭವಿಸಿದೆ. ಮಗುವಿಗೆ ತಾಯಿ ಎದೆಹಾಲು ನೀಡಿ ಮಲಗಿಸಿದ್ದರು. ರಾತ್ರಿ 11 ಗಂಟೆಗೆ  ಅಲುಗಾಟವಿಲ್ಲದ ಸ್ಥಿತಿಯಲ್ಲಿ ಮಗು ಕಂಡುಬಂದಿದೆ. ಕೂಡಲೇ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ಘಟನೆ ಬಗ್ಗೆ ಬೇಕಲ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ.

RELATED NEWS

You cannot copy contents of this page