ಪನಯಾಲ್ ಬ್ಯಾಂಕ್ ನೌಕರ ಮನೆ ಸಮೀಪ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡು:  ಪನಯಾಲ ಸಹಕಾರಿ ಬ್ಯಾಂಕ್‌ನ ನೌಕರನನ್ನು ಮನೆ ಸಮೀಪದ ಮರದಲ್ಲಿ ನೇಣು ಬಿಗಿದು ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಮೃತದೇಹ ಪತ್ತೆಹಚ್ಚಲಾಗಿದೆ.  ಪನಯಾಲ್ ನಿವಾಸಿ ಟಿ. ರಾಜೇಂದ್ರನ್ (56) ಮೃತಪಟ್ಟವರು. ಸಿಪಿಎಂ ಬ್ರಾಂಚ್ ಸದಸ್ಯರಾಗಿದ್ದಾರೆ. ೫ ತಿಂಗಳು ಕಳೆದರೆ ಸೇವೆಯಿಂದ ನಿವೃತ್ತರಾಗಲಿರುವಂತೆಯೇ ರಾಜೇಂದ್ರನ್ ಇಂದು ಮುಂಜಾನೆ ಮನೆ ಹಿತ್ತಿಲಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ  ಕಂಡುಬಂದಿದ್ದಾರೆ. ಕೂಡಲೇ ಹಗ್ಗ ತುಂಡುಮಾಡಿ ಕಾಸರಗೋಡಿನ ಖಾಸಗಿ ಆಸ್ಪತ್ರೆಗೆ ತಲುಪಿಸಲಾಯಿತಾ ದರೂ ಜೀವ ಉಳಿಸಲು ಸಾಧ್ಯವಾಗಲಿಲ್ಲ. ಮೃತದೇಹದ ಮಹಜರಿಗಾಗಿ ಜನರಲ್ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.

ನಿನ್ನೆ ರಾತ್ರಿವರೆಗೆ ಪಂಚಾಯತ್ ಚುನಾವಣೆಗೆ ಸಂಬಂಧಿಸಿದ ವಿಷಯ ಗಳಲ್ಲಿ ಪಕ್ಷದ ಕಾರ್ಯಕರ್ತರೊಂದಿಗೆ  ಚರ್ಚಿಸಿದ್ದರು. ಇಂದು ನೇಣು ಬಿಗಿದ ಸ್ಥಿತಿಯಲ್ಲಿ ಕಂಡುಬಂದಿದ್ದು, ಸ್ಥಳೀಯರು ಹಾಗೂ ಸಂಬಂಧಿಕರು ಶೋಕತಪ್ತರಾಗಿದ್ದಾರೆ.

ಮೃತರು ಪತ್ನಿ ಶೋಭಾ, ಮಕ್ಕಳಾದ ಅಭಿರಾಜ್, ಸುರಭಿ, ಅನುಶ್ರೀ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

You cannot copy contents of this page