ಕಾಸರಗೋಡು: ಮದುವೆಗೆ ಇನ್ನು ಮೂರು ತಿಂಗಳು ಮಾತ್ರವೇ ಬಾಕಿಯಿರುವಂತೆ ಬ್ಯಾಂಕ್ ಉದ್ಯೋಗಿಗಳಾದ ಯುವತಿ ಹಾಗೂ ಯುವಕ ಎರಡು ಕಡೆಗಳಲ್ಲಿ ನೇಣುಬಿಗಿದು ಸಾವಿಗೀಡಾದ ಘಟನೆ ಸಂಭವಿಸಿದೆ.
ಪೂಚಕ್ಕಾಡ್ ಕಿಳಕ್ಕೇಕರದ ಕೆ. ಚಂದ್ರನ್ ಎಂಬವರ ಪುತ್ರಿ ಅನುಶ್ರೀ (25) ಹಾಗೂ ಕಣ್ಣೂರು ಅಂಬಲತ್ತಟ್ಟ್ ನಿವಾಸಿ ಸುಧಾಕರನ್ ಎಂಬವರ ಪುತ್ರ ವಿ. ಅಮಲ್ (26) ಎಂಬಿವರು ಸಾವಿಗೀಡಾದವರಾ ಗಿದ್ದಾರೆ. ಅನುಶ್ರೀ ಕರ್ನಾಟಕದ ಹುಣಸೂರಿನಲ್ಲಿರುವ ಎಸ್‌ಬಿಐ ಶಾಖೆಯ ಉದ್ಯೋಗಿಯಾಗಿದ್ದಳು. ಅಮಲ್ ಎಸ್‌ಬಿಐ ಎರ್ನಾಕುಳಂ ಎಂ.ಜಿ ರೋಡ್ ಶಾಖೆಯ ಮೆನೇಜರ್ ಆಗಿದ್ದರು. ಅನುಶ್ರೀ ನಿನ್ನೆ ಬೆಳಿಗ್ಗೆ ಹುಣಸೂರಿನ ವಾಸಸ್ಥಳದಲ್ಲಿ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾ ಗಿದ್ದಳು. ಅದರ ಬೆನ್ನಲ್ಲೇ ಅಮಲ್ ಎರ್ನಾಕುಳಂ ನ ವಾಸಸ್ಥಳದಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿ ದ್ದಾರೆ. ಆತ್ಮಹತ್ಯೆಗೈಯ್ಯುವ ಮೊದಲು ಅನುಶ್ರೀ ಅಮಲ್‌ಗೆ ವೀಡಿಯೋ ಕರೆ ಮಾಡಿರುವುದಾಗಿ ಹೇಳಲಾಗುತ್ತಿದೆ. ಆದರೆ ಈ ಇಬ್ಬರ ಸಾವಿಗೆ ಕಾರಣವೇನೆಂದು ತಿಳಿದುಬಂದಿಲ್ಲ. ಇವರಿಬ್ಬರ ಮದುವೆ ಡಿಸೆಂಬರ್ ೨೬ರಂದು ನಡೆಸಲು ತೀರ್ಮಾನಿಸಲಾಗಿತ್ತು.
ಮೃತ ಅನುಶ್ರೀ ತಂದೆ, ತಾಯಿ ರೀನ, ಸಹೋದರಿ ಶ್ರೀಲಕ್ಷ್ಮಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾಳೆ.






