ಪೈವಳಿಕೆ: ಇಲ್ಲಿಗೆ ಸಮೀಪದ ಮಾಸಿಕುಮೇರಿ ನಿವಾಸಿ ಬೀಡಿ ಕಾರ್ಮಿಕೆ, ಸಿಪಿಎಂ ಹಿತೈಷಿ ಗುಲಾಬಿ (59) ನಿಧನಹೊಂದಿದರು. ಇವರ ಪತಿ ಕೃಷ್ಣ, ಓರ್ವ ಪುತ್ರ ಚಂದ್ರ ಈ ಹಿಂದೆ ನಿಧನಹೊಂದಿದ್ದಾರೆ.
ಮೃತರು ಪುತ್ರ ಹರೀಶ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಮೃತರ ಮನೆಗೆ ಸಿಪಿಎಂ ಮಂಜೇಶ್ವರ ಏರಿಯಾ ಸಮಿತಿ ಸದಸ್ಯ ಅಬ್ದುಲ್ ರಜಾಕ್ ಚಿಪ್ಪಾರು, ಪೈವಳಿಕೆ ಲೋಕಲ್ ಕಾರ್ಯದರ್ಶಿ ಚಂದ್ರ ನಾಯ್ಕ್ ಮಾನಿಪ್ಪಾಡಿ, ಮುಖಂಡರಾದ ಹಾರಿಸ್ ಪೈವಳಿಕೆ, ಖಲೀಲ್ ಚಿಪ್ಪಾರು, ರಫೀಕ್, ಜಗದೀಶ್ ಶೆಟ್ಟಿ, ನಾರಾಯಣ ಶೆಟ್ಟಿ, ಸೀತಾರಾಮ ನಾಯ್ಕ್, ಸಿಮಾವ್ ಡಿ’ಸೋಜಾ, ಅನಿಲ್ ಶೆಟ್ಟಿ ಭೆಟಿ ನೀಡಿ ಸಂತಾಪ ಸೂಚಿಸಿದರು.






