ಮುಸ್ಲಿಂ ಲೀಗ್ ಕಾರ್ಯಕರ್ತನ ಬೈಕ್, ಮನೆಗೆ ಕಿಚ್ಚಿಟ್ಟ ಪ್ರಕರಣ: ಓರ್ವ ಸೆರೆ

ಕಾಸರಗೋಡು: ಚೆರ್ಕಳ ಅಳಕ್ಕೆಯ ಮುಸ್ಲಿಂ ಲೀಗ್ ಕಾರ್ಯಕರ್ತ ಬಿ.ಎ. ಸೈಫುದ್ದೀನ್ ಎಂಬವರ ಮನೆ ಮುಂದೆ ನಿಲ್ಲಿಸಲಾಗಿದ್ದ ಬೈಕ್‌ಗೆ ಕಿಚ್ಚಿರಿಸಿ ಹಾನಿಗೊಳಿಸಿ ಅದರಿಂದ ಮನೆ ಕಿಟಿಕಿಗೂ ಹಾನಿ ಉಂಟಾದ ಪ್ರಕ ರಣದ ಆರೋಪಿಯನ್ನು ವಿದ್ಯಾ ನಗರ ಪೊಲೀಸರು ಬಂಧಿಸಿದ್ದಾರೆ.  ಚೆರ್ಕಳ ವಿ.ಕೆ.ಪಾರದ ಅಹಮ್ಮದ್ ಅಫ್ರೀದಿ (26) ಬಂಧಿತನಾದ ಆರೋಪಿಯಾಗಿದ್ದಾನ. ಎಪ್ರಿಲ್ 21ರಂದು ಮುಂಜಾನೆ ಸೈಫುದ್ದೀನ್‌ರ ಮನೆ ಮುಂದೆ ನಿಲ್ಲಿಸಿದ್ದ ಬೈಕ್‌ಗೆ ಕಿಚ್ಚಿಟ್ಟು  ನಾಶಗೊಳಿಸಲಾಗಿತ್ತು. ಬೈಕ್‌ನಿಂದ ಬೆಂಕಿ ಹರಡಿ  ಮನೆಯ ಕಿಟಿಕಿಗಳು ಉರಿದು ನಾಶನಷ್ಟ ಉಂಟಾಗಿತ್ತು. ಕಿಚ್ಚಿಟ್ಟ  ಕೃತ್ಯಾದಿಗಳಿಂದ 1,30,000  ರೂಪಾಯಿ ನಷ್ಟ ಉಂಟಾಗಿರುವುದಾಗಿ ದೂರಲಾಗಿದೆ. ಸೈಫುದ್ದೀನ್‌ನೊಂದಿಗೆ  ಹೊಂದಿದ್ದ ಪೂರ್ವದ್ವೇಷದಿಂದ ಆರೋಪಿ ಇಂತಹ ಕೃತ್ಯವೆಸಗಿದ್ದನೆಂದು ಪೊಲೀಸರು ತಿಳಿಸಿದ್ದಾರೆ.

RELATED NEWS

You cannot copy contents of this page