ಸಂಜೀವ ಪುಳ್ಕೂರುರಿಗೆ ‘ಬಿರ್ಸಾಮುಂಡಾ’ ಪ್ರಶಸ್ತಿ ಪ್ರದಾನ

ಕಾಸರಗೋಡು: ಹಲವಾರು ವರ್ಷಗಳಿಂದ ಆದಿವಾಸಿ ಗೋತ್ರವರ್ಗದ ಹಾಗೂ ಕೊರಗ ಜನಾಂಗದ ಅಭಿವೃದ್ಧಿಗಾಗಿ ಸಮಾಜಮುಖಿ ಸೇವೆಗಳನ್ನು ಮಾಡುತ್ತಿರುವ ಮಧೂರು ಪುಳ್ಕೂರು ನಿವಾಸಿ ಸಂಜೀವ ಪುಳ್ಕೂರು ಅವರಿಗೆ ಬಿರ್ಸಾಮುಂಡಾ ಪ್ರಶಸ್ತಿ ನೀಡಿ ಗೌರವಿಸಲಾಯಿತು. ರಾಜ್ಯ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಕೀರ್ತಾಡ್ ಕಲ್ಲಿಕೋಟೆ ಇದರ ಜಂಟಿ ಆಶ್ರಯದಲ್ಲಿ ಕೇಂದ್ರ ಸರಕಾರದ ಜನ್‌ಜಾತಿಯ ಗರೀಮಾ ಉತ್ಸವದಂಗವಾಗಿ ತಿರುವನಂತಪುರದ ಅಯ್ಯಂಗಾಳಿ ಸಭಾ ಭವನದಲ್ಲಿ ನಡೆದ ಸಮಾರಂಭದಲ್ಲಿ ಇವರಿಗೆ ಪ್ರಶಸ್ತಿ ನೀಡಿ ಅಭಿನಂದಿಸಲಾಯಿತು. ಇವರ ಸೇವೆಯನ್ನು  ಪರಿಗಣಿಸಿ ಲಭಿಸಿದ ಈ ಪ್ರಶಸ್ತಿಯಿಂದ ಇವರು ಇನ್ನಷ್ಟು ಸೇವೆ ಕೊರಗ ಜನಾಂಗದ ಕಲ್ಯಾಣಕ್ಕಾಗಿ ನಡೆಸಲಿ ಎಂದು ಕನ್ನಡ ಹೋರಾಟಗಾರ ಗಣೇಶ್ ಪ್ರಸಾದ್ ಪಾಣೂರು ಅಭಿನಂದಿಸಿದ್ದಾರೆ.

You cannot copy contents of this page