ಮಂಜೇಶ್ವರ ಮಂಡಲದಲ್ಲಿ ಬಿಜೆಪಿ ಚುನಾವಣಾ ಪ್ರಚಾರ ಬಿರುಸು ಕುಂಬಳೆ ಭಾಸ್ಕರನಗರದಲ್ಲಿ ಕೆ.ಸುರೇಂದ್ರನ್‌ರಿಗೆ ಅದ್ದೂರಿಯ ಸ್ವಾಗತ

ಕುಂಬಳೆ: ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ. ಸುರೇಂದ್ರನ್‌ರ  ಚುನಾವಣಾ ಪ್ರಚಾರ ಕಾರ್ಯ ಬಿರುಸುಗೊಂಡಿದೆ. ಕುಂಬಳೆ ಭಾಸ್ಕರ ನಗರದಲ್ಲಿ ನಿನ್ನೆ ನಡೆದ ಸ್ವಾಗತ ಕಾರ್ಯಕ್ರಮದಲ್ಲಿ ಮಾತನಾಡಿದ ಕೆ. ಸುರೇಂದ್ರನ್ ಕಾಸರಗೋಡು ಹಾಗೂ ಮಂಜೇಶ್ವರ ಮಂಡಲಗಳು ಎದುರಿಸುತ್ತಿರುವ ಅಭಿವೃದ್ಧಿ ಕುಂಠಿತವನ್ನು  ಮತದಾರರಿಗೆ ತಿಳಿಸಿದರು. ರಾಜ್ಯ ರೂಪೀಕರಿಸಿ 70 ವರ್ಷ ಕಳೆದರೂ  ಈ ಎರಡು ಮಂಡಲಗಳು ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿ ರುವುದಾಗಿ ಅವರು ಆರೋಪಿಸಿದರು. ರಸ್ತೆ, ರೈಲು ಸಾರಿಗೆ ವಲಯದಲ್ಲಿ ನಡೆದಿರುವ ಅಭಿವೃದ್ಧಿ ಕೇಂದ್ರದಲ್ಲಿ ಆಡಳಿತ ನಡೆಸುವ ನರೇಂದ್ರ ಮೋದಿಯವರಿಂದಾಗಿದೆಯೆಂದು ಅವರು ತಿಳಿಸಿದರು. ಶಿಕ್ಷಣ, ಆರೋಗ್ಯ ಸಂರಕ್ಷಣೆ ಮೊದಲಾದ ವಲಯದಲ್ಲಿ ಕುಂಬಳೆ ಹಾಗೂ ಮಂಜೇಶ್ವರದಲ್ಲಿ  ಸರಕಾರಿ ಆಸ್ಪತ್ರೆಗಳು, ಕಮ್ಯುನಿಟಿ ಹೆಲ್ತ್ ಸೆಂಟರ್‌ಗಳು, ತಾಲೂಕು ಆಸ್ಪತ್ರೆಗಳು ಎದುರಿಸುತ್ತಿರುವ ಅವಗಣನೆಯನ್ನು ಅವರು ಬೊಟ್ಟುಮಾಡಿ ತಿಳಿಸಿದರು. ರೂರಲ್ ಡಿಸ್ಪೆನ್ಸರಿಗಳ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸ್ಥಿತಿ ಹೇಗಿದೆಯೆಂದು ಅವರು  ಪ್ರಶ್ನಿಸಿದರು.   ಉದ್ಯೋಗಾಧಾರಿತ ಕೋರ್ಸ್‌ಗಳು ಹಾಗೂ  ಉನ್ನತ ಶಿಕ್ಷಣ ರಂಗಗಳಲ್ಲಿ  ಯಾವುದಾದರೂ ಅಭಿವೃದ್ಧಿ ನಡೆದಿದ್ದರೆ ಅದನ್ನು   ಎಡ-ಐಕ್ಯರಂಗಗಳ  ನೇತಾರರಿಗೆ ತಿಳಿಸಲು ಸಾಧ್ಯವಿದೆಯೇ ಎಂದು ಅವರು ಪ್ರಶ್ನಿಸಿದರು.

ಕೇಂದ್ರದಲ್ಲಿ ನರೇಂದ್ರಮೋದಿ ಆಡಳಿತ ನಡೆಸುವಾಗ  ಮಂಜೇಶ್ವರದಲ್ಲಿ ಅಭಿವೃದ್ಧಿ ಆಗ್ರಹಿಸುವವರು ಮೋದಿಯ ಪಕ್ಷಕ್ಕೆ ಮತನೀಡಿ ತನ್ನನ್ನು ಗೆಲ್ಲಿಸಬೇ ಕೆಂದು ಕೆ. ಸುರೇಂದ್ರನ್ ಮತದಾರ ರೊಂದಿಗೆ ವಿನಂತಿಸಿದರು. ಒಂದು ಅವಕಾಶ ಲಭಿಸಿದರೆ ಮಂಜೇಶ್ವರ ಮಂಡಲದ ಸಮಗ್ರ ಅಭಿವೃದ್ಧಿ ನಡೆಸು ವುದಾ ಗಿಯೂ ನಾಡಿನ ಅಭಿವೃದ್ಧಿಗಾಗಿ  ಜಾತಿ, ಮತ, ರಾಜಕೀಯ ಪರಿಗಣಿಸದೆ ಎಲ್ಲರೂ ಮತ ನೀಡಿ ತನ್ನನ್ನು ಗೆಲ್ಲಿಸಬೇ ಕೆಂದು ಅವರು ವಿನಂತಿಸಿದ್ದಾರೆ. ಬಿಜೆಪಿ ಪದಾಧಿ ಕಾರಿಗಳಾದ ವಿ. ರವೀಂದ್ರನ್, ಸುಜಿತ್ ರೈ ಮೊದಲಾದವರು ಮಾತನಾಡಿದರು. ನವೋದಯ ಕ್ಲಬ್ ಸದಸ್ಯ ನಿವೃತ್ತ ಎಸ್‌ಐ ಬಾಬು ಥೋಮಸ್ ಸುರೇಂದ್ರನ್‌ರಿಗೆ ಶಾಲು ಹೊದಿಸಿ ಸ್ವಾಗತಿಸಿದರು. 

RELATED NEWS

You cannot copy contents of this page