ಶಾರದನಗರ ಸಮುದ್ರ ತೀರ ಪ್ರದೇಶದಲ್ಲಿ ಬಿಜೆಪಿ ಸಭೆ: ಉಡುಪಿ ಶಾಸಕರಿಂದ ಮಾರ್ಗದರ್ಶನ

ಉಪ್ಪಳ: ಮಂಜೇಶ್ವರ ವಿಧಾನಸಭಾ ಕ್ಷೇತ್ರ ಬಿಜೆಪಿ ಅಭ್ಯರ್ಥಿ ಕೆ. ಸುರೇಂದ್ರನ್‌ರ ಚುನಾವಣಾ ಪ್ರಚಾರದ ಅಂಗವಾಗಿ ಮಂಗಲ್ಪಾಡಿ ಪಂಚಾಯತ್ ವ್ಯಾಪ್ತಿಯ ಹನುಮಾನ್ ನಗರ ಹಾಗೂ ಶಾರದಾ ನಗರ ಸಮುದ್ರ ತೀರ ಪ್ರದೇಶದ ಬಿಜೆಪಿ ಸಭೆ ಶಾರದಾನಗರದ ಶ್ರೀ ಶಾರದಾ ಭಜನಾ ಮಂದಿರದಲ್ಲಿ ನಿನ್ನೆ ಸಭೆ ನಡೆಯಿತು. ಉಡುಪಿ ಶಾಸಕ ಯಶಪಾಲ್ ಸುವರ್ಣ ಮಾತನಾಡಿ, ನಾಡಿನ ಅಭಿವೃದ್ಧಿಗಾಗಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುವಂತೆ ಕರೆ ನೀಡಿದರು.

ಬಿಜೆಪಿ ಮುಖಂಡರಾದ ಕೆ.ಪಿ. ವಲ್ಸರಾಜ್, ವಿಜಯ ಕುಮಾರ್, ದಿನೇಶ್ ಚೆರುಗೋಳಿ, ಜಯಪ್ರಕಾಶ ಸುಳ್ಯ ಮೊದಲಾದವರು ಮಾತನಾಡಿದರು. ಭಾರೀ ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸಿದರು.

You cannot copy contents of this page