ಕಾಸರಗೋಡು: ಜಿಲ್ಲೆಯ ವಿವಿಧ ಸಂಘಟನಾ ಮಂಡಲಗಳಲ್ಲಿ ಬಿಜೆಪಿ ಮಂಡಲ ಸಮಿತಿಗಳ ಆಶ್ರಯ ದಲ್ಲಿ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಪ್ರಶಿಕ್ಷಣ್ ಮಹಾ ಅಭಿಯಾನದ ಅಧ್ಯಯನ ಶಿಬಿರಗಳು ಇಂದು, ನಾಳೆ ಜರಗಲಿವೆ.
ಕುಂಬಳೆ ಸಂಘಟನಾ ಮಂ ಡಲದ ಅಧ್ಯಯನ ಶಿಬಿರ ಎಣ್ಮಕಜೆ ಪಂಚಾಯತ್‌ನ ಪೆರ್ಲ ಶಂಕರ ಸದನದಲ್ಲಿ ನಡೆಯಲಿದೆ. ಮಹಿಳಾ ಮೋರ್ಚಾ ರಾಜ್ಯ ಅಧ್ಯಕ್ಷೆ ನವ್ಯಾ ಹರಿದಾಸ್ ಉದ್ಘಾಟಿಸುವರು. ಸಮಾರೋಪ ಸಮಾರಂಭದಲ್ಲಿ ಬಿಜೆಪಿ ಕಲ್ಲಿಕೋಟೆ ವಲಯ ಪ್ರಧಾನ ಕಾರ್ಯದರ್ಶಿ ಸುಧಾಮ ಗೋಸಾಡ ಪಾಲ್ಗೊಳ್ಳುವರು. ತೃಕರಿಪುರ ಸಂಘಟನಾ ಮಂಡಲದ ಅಧ್ಯಯನ ಶಿಬಿರ ಶ್ರೀ ಚಕ್ರಪಾಣಿ ವಿದ್ಯಾಮಂದಿರ ದಲ್ಲಿ ನಡೆಯಲಿದೆ. ಬಿಜೆಪಿ ರಾಜ್ಯ ಸಮಿತಿ ಸದಸ್ಯ ಎ. ವೇಲಾಯುಧನ್ ಉದ್ಘಾಟಿಸುವರು. ಸಮಾರೋಪ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯ ಸೆಲ್ ಕೋ-ಆರ್ಡಿನೇಟರ್ ವಿ. ಕೆ. ಸಜೀವನ್ ಭಾಗವಹಿಸುವರು. ನೀಲೇಶ್ವರ ಸಂಘಟನಾ ಮಂಡಲದ ಅಧ್ಯಯನ ಶಿಬಿರ ಚೀಮೇನಿ ಮಂಡಲದಲ್ಲಿ ನಡೆಯಲಿದೆ. ಬಿಜೆಪಿ ರಾಜ್ಯ ಸಮಿತಿ ಸದಸ್ಯ ರವೀಶ ತಂತ್ರಿ ಕುಂಟಾರ್ ಉದ್ಘಾಟಿಸುವರು. ಸಮಾರೋಪ ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾ ಅಧ್ಯಕ್ಷೆ ಅಶ್ವಿನಿ ಎಂ. ಎಲ್. ಪಾಲ್ಗೊಳ್ಳುವರು.






