ಸಹೋದರರ ಜೊತೆ ಸ್ನಾನಕ್ಕಿಳಿದ ವಿದ್ಯಾರ್ಥಿ ಕೆರೆಯಲ್ಲಿ ಮುಳುಗಿ ಸಾವು

ಕಾಸರಗೋಡು: ಸಹೋದರರ ಜತೆಗೆ ಕೆರೆಯಲ್ಲಿ ಸ್ನಾನಕ್ಕಿಳಿದ ವಿದ್ಯಾರ್ಥಿ ನೀರಲ್ಲಿ ಮುಳುಗಿ ದಾರುಣವಾಗಿ ಸಾವನ್ನಪ್ಪಿದ ಘಟನೆ ಉದಯಗಿರಿ ಕೈಲಾಸನಗರದಲ್ಲಿ ಇಂದು ಬೆಳಿಗ್ಗೆ ನಡೆದಿದೆ. ಮೂಲತಃ ವಿದ್ಯಾನಗರ ಚಾಲ ಬಿಯೆಡ್ ಸೆಂಟರ್‌ನ ಬಳಿ ನಿವಾಸಿ ಅಬೂಬಕ್ಕರ್ ಎಂಬವರ ಪುತ್ರ ಮೊಹಮ್ಮದ್ ಝೈದ್ (16) ಸಾವನ್ನಪ್ಪಿದ ವಿದ್ಯಾರ್ಥಿ.

ಈತನ ಕುಟುಂಬ ಈಗ ಉದಯಗಿರಿ ಕೈಲಾಕನಗರದಲ್ಲಿನ ಬಾಡಿಗೆ ಕ್ವಾರ್ಟರ್ಸ್‌ನಲ್ಲಿ ವಾಸಿಸುತ್ತಿದೆ. ಮೊಹಮ್ಮದ್ ಝೈದ್ ಮತ್ತು ಆತನ ಇಬ್ಬರು ಸಹೋದರರು ಇಂದು ಬೆಳಿಗ್ಗೆ ಉದಯಗಿರಿ ಬಳಿ ಕೆರೆಯೊಂದಕ್ಕೆ ಸ್ನಾನಕ್ಕಿಳಿದಾಗ ಮೊಹಮ್ಮದ್ ಝೈದ್ ನೀರಿನಲ್ಲಿ ಮುಳುಗಿ ನಾಪತ್ತೆಯಾದನು. ಆ ಬಗ್ಗೆ ನೀಡಲಾದ ಮಾಹಿತಿಯಂತೆ ಕಾಸರಗೋಡು ಫಯರ್ ಆಂಡ್ ರೆಸ್ಯೂ ಆಫೀಸರ್ ಸುಕುರ ನೇತೃತ್ವದಲ್ಲಿ ಕಾಸರಗೋಡು ಅಗ್ನಿಶಾಮಕದಳ ಮತ್ತು ಪೊಲೀಸರು ಸ್ಥಳಕ್ಕೆ ಆಗಮಿಸಿ ಮೊಹಮ್ಮದ್ ಝೈದ್‌ನನ್ನು ಕೆರೆಯಿಂದ ಮೇಲಕ್ಕೆತ್ತಿದರೂ ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ. ಮೃತ ಬಾಲಕ ನಾಯಮ್ಮಾರ್‌ಮೂಲೆ  ಟಿಐಎಚ್‌ಎಸ್‌ಎಸ್‌ನ ೧೦ನೇ ತರಗತಿ ವಿದ್ಯಾರ್ಥಿಯಾಗಿದ್ದಾನೆ. ಕಾಸರಗೋಡು ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ ಸಾಗಿಸಲಾಗಿದೆ.

You cannot copy contents of this page