ಕಾಸರಗೋಡು: ಸ್ಥಳೀಯಾಡಳಿತ ಚುನಾವಣೆಗೆ ಸಂಬAಧಿಸಿ ಜಿಲ್ಲೆಯ ಬ್ಲೋಕ್ಗಳ ಮೀಸಲಾತಿ ಕ್ರಮ ಪೂರ್ಣ ಗೊಳಿಸಲಾಗಿದೆ. ಇದರಂತೆ ಕಾರಡ್ಕ ಬ್ಲೋಕ್ ಪಂಚಾಯತ್ನ 10ನೇ ವಾರ್ಡ್ ಕುಂಡAಗಳಿಯನ್ನು ಪರಿಶಿಷ್ಟ ಜಾತಿ ಮೀಸಲು ವಾರ್ಡ್ನ್ನಾಗಿ ಆರಿಸಲಾಗಿದೆ. ದೇಲಂಪಾಡಿ (ವಾರ್ಡ್ 5)ನ್ನು ಪರಿಶಿಷ್ಟ ಪಂಗಡ ವಿಭಾಗಕ್ಕಾಗಿ ಮೀಸಲಿರಿಸಲಾ ಗಿದೆ. ಉಳಿದಂತೆ ಬೆಳ್ಳೂರು (3), ಆದೂರು (4), ಅಡೂರು (6), ಕೊಳತ್ತೂರು (11), ಪೊವ್ವಲ್ (12), ಮುಳಿಯಾರು (13) ಮತ್ತು ಕಾರಡ್ಕ (14)ನ್ನು ಮಹಿಳಾ ಮೀಸಲಾತಿ ವಾರ್ಡ್ಗಳನಾನಾಗಿ ಆರಿಸಲಾಗಿದೆ.
ಮಂಜೇಶ್ವರ ಬ್ಲೋಕ್ ಪಂಚಾ ಯತ್ನ 16ನೇ ವಾರ್ಡ್ ಆದ ಮಂಜೇಶ್ವರವನ್ನು ಪರಿಶಿಷ್ಟ ಜಾತಿ ಮೀಸಲು ವಾರ್ಡ್ ಆಗಿ ಆರಿಸಲಾಗಿದೆ. ಉಳಿದಂತೆ ಪಾತೂರು (2), ಚೇವಾರು (4), ಎಣ್ಮಕಜೆ (6), ಪೆರ್ಲ (7), ನಯಾಬಜಾರ್ (10), ಉಪ್ಪಳ (11), ಕಡಂಬಾರ್ (12) ಮತ್ತು ಧರ್ಮನಗರ (14) ಎಂಬೀ ವಾರ್ಡ್ಗಳನ್ನು ಮಹಿಳಾ ಮೀಸಲಾತಿ ವಾರ್ಡ್ಗಳನ್ನಾಗಿ ಘೋಷಿಸಲಾಗಿದೆ.
ಕಾಸರಗೋಡು ಬ್ಲೋಕ್ ಪಂಚಾ ಯತ್ನ 7ನೇ ವಾರ್ಡ್ ಆದ ಉಳಿಯತ್ತಡ್ಕವನ್ನು ಪರಿಶಿಷ್ಟ ಜಾತಿ ಮೀಸಲು ವಾರ್ಡ್ ಆಗಿ ಆರಿಸಲಾಗಿದೆ. ಆರಿಕ್ಕಾಡಿ (1), ಎರಿಯಾಲ್ (4), ಸೂರ್ಲು (5), ರಾಮ್ದಾಸ್ನಗರ (6), ಪಾಡಿ (12), ಚೆಂಗಳ (14), ಕಳನಾಡ್ (16), ಮೇಲ್ಪರಂಬ (17), ಚೆಮ್ನಾಡ್ (18) ಎಂಬೀ ವಾರ್ಡ್ ಗಳನ್ನು ಮಹಿಳಾ ಮೀಸಲಾತಿ ವಾರ್ಡ್ ಆಗಿ ಘೋಷಿಸಲಾಗಿದೆ. ಇದರ ಹೊರತಾಗಿ ಪರಪ್ಪ, ನೀಲೇಶ್ವರ ಮತ್ತು ಹೊಸದುರ್ಗ ಬ್ಲೋಕ್ಗಳ ಮೀಸಲಾತಿ ಕ್ರಮಗಳನ್ನು ಪೂರ್ಣಗೊಳಿಸಲಾಗಿದೆ.
