ಬಿಎಂಎಸ್ ಕುಂಬಳೆ ಮೋಟಾರು ಯೂನಿಟ್ ಸಮ್ಮೇಳನ

ಕುಂಬಳೆ: ಬಿಎಂಎಸ್ ಕುಂಬಳೆ ಮೋಟಾರು ಯೂನಿಟ್ ಸಮ್ಮೇಳನ ಕುಂಬಳೆ ಜಯಮಾರುತಿ ವ್ಯಾಯಾಮ ಶಾಲೆಯಲ್ಲಿ ಜರಗಿತು. ಮೋಟಾರು ಯೂನಿಟ್ ಜಿಲ್ಲಾಧ್ಯಕ್ಷ ಶಿವರಾಮ ಪೆರ್ಲ, ಜಿಲ್ಲಾ ಜೊತೆ ಕಾರ್ಯದರ್ಶಿ ಹರೀಶ್ ಕುದ್ರೆಪ್ಪಾಡಿ ಭಾಗವಹಿಸಿದರು. ಕುಂಬಳೆ ಘಟಕ ಅಧ್ಯಕ್ಷ ಕೃಷ್ಣ ಪಿ.ಕೆ. ಅಧ್ಯಕ್ಷತೆ ವಹಿಸಿದರು. ಸದಸ್ಯ  ಕಮಲಾಕ್ಷ ಕಡಪ್ಪುರ ಸ್ವಾಗತಿಸಿ, ಕಾರ್ಯದರ್ಶಿ ದಿವಾಕರ ರೈ ಉಜಾರು ವಂದಿಸಿದರು. ಹಳೆಯ ಸಮಿತಿಯನ್ನು ಇನ್ನೊಂದು ವರ್ಷಕ್ಕೆ ವಿಸ್ತರಿಸಲು ತೀರ್ಮಾನಿಸಲಾಯಿತು.

RELATED NEWS

You cannot copy contents of this page