ಬಿಎಂಎಸ್ ಮಂಜೇಶ್ವರ ಪಂಚಾಯತ್ ಕಾಲ್ನಡೆ ಜಾಥಾ

ಮಂಜೇಶ್ವರ: ಕೇರಳ ಸರಕಾರದ ಜನವಿರೋಧಿ ಕಾರ್ಮಿಕ ವಿರೋಧಿ ನೀತಿಗೆದುರಾಗಿ ಕೇರಳ ರಾಜ್ಯದಾದ್ಯಂತ ನಡೆಯುವ ಕಾಲ್ನಡೆ ಜಾಥಾದ ಅಂಗವಾಗಿ ಮಂಜೇಶ್ವರ ಪಂಚಾಯತ್ ವತಿಯಿಂದ ತಲಪಾಡಿಯಿಂದ ಆರಂಭಗೊಂಡ ಕಾಲ್ನಡೆ ಜಾಥಾವನ್ನು ಬಿಎಂಎಸ್ ಜಿಲ್ಲಾ ಅಧ್ಯಕ್ಷ ಉಪೇಂದ್ರನ್ ಕೋಟೆಕಣಿ ಉದ್ಘಾಟಿಸಿದರು.  ಜಾಥಾ ಕ್ಯಾಪ್ಟನ್ ಪ್ರಕಾಶ್ ಕೆ.ಪಿ.ರ ನೇತೃತ್ವದಲ್ಲಿ ನಡೆದ ಕಾಲ್ನಡೆ ಜಾಥಾದಲ್ಲಿ ಜಿಲ್ಲಾ ಜೊತೆ ಕಾರ್ಯದರ್ಶಿ ದಿನೇಶ್ ಬಂಬ್ರಾಣ, ಯಶವಂತಿ ಬೆಜ್ಜ, ವಲಯ ಅಧ್ಯಕ್ಷ ರವಿ ಎಂ.ಕೆ, ರವಿ ಮಜಲ್, ಕಿಶೋರ್ ಶೆಟ್ಟಿ ಕುಂಜತ್ತೂರು, ಶ್ರೀಧರ ಬಿ.ಎಂ, ಚಂದ್ರಶೇಖರ ವರ್ಕಾಡಿ, ರಾಮಚಂದ್ರ ಮೀಂಜ, ರವಿಚಂದ್ರ ಶೆಟ್ಟಿ ಪದೆಂಜಿಬೈಲ್ ಭಾಗವಹಿಸಿದರು. ಸಮಾರೋಪ ಸಮಾರಂಭವನ್ನು ಜಿಲ್ಲಾ ಸಮಿತಿ ಸದಸ್ಯ ಎ. ಕೇಶವ ಉದ್ಘಾಟಿಸಿದರು.

You cannot copy contents of this page