ಬಕೆಟ್‌ನ ನೀರಿಗೆ ಬಿದ್ದು ಬಾಲಕ ಸಾವು

ಆಲಪ್ಪುಳ: ಸ್ನಾನದ ಕೊಠಡಿಯಲ್ಲಿದ್ದ ಬಕೆಟ್‌ಗೆ ಬಿದ್ದು 2 ವರ್ಷ ಪ್ರಾಯದ ಬಾಲಕ ದಾರುಣವಾಗಿ ಮೃತಪಟ್ಟ ಘಟನೆ ನಡೆದಿದೆ. ಚೆಂಗನ್ನೂರಿನಲ್ಲಿ ನಿನ್ನೆ ಮಧ್ಯಾಹ್ನ ಘಟನೆ ನಡೆದಿದ್ದು, ಜಿನ್ಸಿ- ಟೋಮ್ ದಂಪತಿ ಪುತ್ರ ಆಕ್ಸ್‌ಟನ್ ಪಿ. ಥೋಮಸ್ ಮೃತಪಟ್ಟ ಬಾಲಕ. ಮನೆ ಮಂದಿಯ ಕಣ್ತಪ್ಪಿಸಿ ಸ್ನಾನದ ಕೊಠಡಿಗೆ ತೆರಳಿದ ಬಾಲಕ ಬಕೆಟ್‌ಗೆ ಬಿದ್ದಿರಬೇ ಕೆಂದು ಸಂಬಂಧಿಕರು ತಿಳಿಸಿದ್ದಾರೆ. ಮಗು ಕಂಡು ಬಾರದ ಹಿನ್ನೆಲೆಯಲ್ಲಿ ನಡೆಸಿದ ಹುಡುಕಾಟದಿಂದ ಸ್ನಾನದ ಕೊಠಡಿ ಯಲ್ಲಿ ಬಕೆಟ್‌ನಲ್ಲಿ ಬಿದ್ದಿರುವ ಸ್ಥಿತಿಯಲ್ಲಿ ಮಗು ಕಂಡು ಬಂದಿದೆ. ಕೂಡಲೇ ಆಸ್ಪತ್ರೆಗೆ ತಲುಪಿಸಿದರೂ ಸಾವು ಸಂಭವಿಸಿದೆ.

You cannot copy contents of this page