ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನ ಬ್ರಹ್ಮಕಲಶೋತ್ಸವಕ್ಕೆ ಎಡನೀರು ಶ್ರೀಗಳಿಂದ ಚಪ್ಪರ ಮುಹೂರ್ತ

ಬದಿಯಡ್ಕ: ದೇವಾಲಯಗಳ ರೀತಿ ರಿವಾಜುಗಳನ್ನು ಕಾಪಾಡಿಕೊಂಡು ಬರುವುದು ನಮ್ಮ ಆದ್ಯ ಕರ್ತವ್ಯ. ವ್ಯವಸ್ಥೆಗೆ ಧಕ್ಕೆಯಾಗದಂತೆ ನಡೆದುಕೊಳ್ಳಬೇಕು. ಉದನೇಶ್ವರನ ಅನುಗ್ರಹದಿಂದ ಪೆರಡಾಲ ಕ್ಷೇತ್ರವು ಜೀರ್ಣೋದ್ಧಾರಗೊಂಡು ಬ್ರಹ್ಮಕಲ ಶೋತ್ಸವಕ್ಕೆ ಅಣಿಯಾಗಿದೆ ಎಂದು ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ನುಡಿದರು. ಕ್ಷೇತ್ರದಲ್ಲಿ ನಡೆದ ಚಪ್ಪರ ಮುಹೂರ್ತ ನೆರವೇರಿಸಿ ಅವರು ಆಶೀರ್ವಚನ ನೀಡಿದರು. ನೂತನ ಪರಾಭವ ಸಂವತ್ಸರ ಆರಂಭವಾಗಿದ್ದು, ಈ ಹಿನ್ನೆಲೆಯಲ್ಲಿ ಧರ್ಮಕ್ಕೆ ವಿರುದ್ಧವಾಗಿರುವ ಶಕ್ತಿಗಳಿಗೆ ಪರಾಭವ ಉಂಟಾಗಲಿ ಎಂದು ಅವರು ನುಡಿದರು. ಪ್ರಧಾನ ಅರ್ಚಕ ವೇ| ಮೂ| ಶಿವರಾಮ ಭಟ್ ಪೆರಡಾಲ ಪೂಜೆ ನೆರವೇರಿಸಿದರು. ಆಡಳಿತ ಮೊಕ್ತೇಸರ ವೆಂಕಟ್ರಮಣ ಭಟ್ ಚಂಬಲ್ತಿಮಾರು, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಜಗನ್ನಾಥ ರೈ, ಕಾರ್ಯದರ್ಶಿ ನಿರಂಜನ ರೈ ಪೆರಡಾಲ, ಸೇವಾ ಸಮಿತಿ ಅಧ್ಯಕ್ಷ ಜಯದೇವ ಖಂಡಿಗೆ, ಬ್ರಹ್ಮಕಲಶೋತ್ಸವ ಸಮಿತಿ ಕೋಶಾಧಿಕಾರಿ ಸೂರ್ಯನಾರಾಯಣ ಬಿ, ಆಡಳಿತ ಸಮಿತಿ ಸದಸ್ಯ ಸೀತಾರಾಮ ನವಕಾನ, ಉಪಾ ಧ್ಯಕ್ಷರಾದ ಪಿ.ಜಿ. ಚಂದ್ರಹಾಸ ರೈ, ತಿರುಪತಿ ಕುಮಾರ್ ಭಟ್, ಜೊತೆ ಕಾರ್ಯದರ್ಶಿಗಳಾದ ಉದಯಶಂಕರ ಪಿ.ಎಸ್, ಗಣೇಶ್ ಪ್ರಸಾದ ಕಡಪ್ಪು, ಸತೀಶ ಪುದ್ಯೋಡು, ಡಾ. ಶ್ರೀಶಕುಮಾರ ಪಂಜಿತ್ತಡ್ಕ, ಕುಂಞಣ್ಣ ಬದಿಯಡ್ಕ ಸಹಿತ ಹಲವಾರು ಮಂದಿ ಭಾಗವಹಿಸಿದರು.

ಚಪ್ಪರ ಸಮಿತಿಯ ಅಧ್ಯಕ್ಷ ಭಾಸ್ಕರ ಪಂಜಿತ್ತಡ್ಕ, ಸಂದೀಪ್ ಪೆರಡಾಲ, ವೆಂಕಟ್ರಮಣ ಭಟ್ ಪುದ್ಯೋಡು, ಸದಸ್ಯರು ನೇತೃತ್ವ ವಹಿಸಿದರು. ಚಪ್ಪರ ಕಾರ್ಯ ವಹಿಸಿಕೊಂಡ ಶಿವಪ್ರಸಾದ್ ಹೆಗ್ಡೆ ಮಂಗಳೂರು ಅವರನ್ನು ಶ್ರೀಗಳು ಹರಸಿದರು.

You cannot copy contents of this page