ಕೇಂದ್ರ ಬಜೆಟ್: ಕೇರಳವನ್ನು ಆರ್ಥಿಕವಾಗಿ ಸಬಲೀಕರಣಗೊಳಿಸಲಿದೆ- ಕೆ. ಸುರೇಂದ್ರನ್

ಕಾಸರಗೋಡು: ಕೇಂದ್ರ ಮುಂಗಡಪತ್ರದಲ್ಲಿ ಒಳಪಡಿಸಿರುವ ಧಾತು ಕಾರಿಡಾರ್, ತೆಂಗಿನಕಾಯಿ ಉತ್ಪಾದನೆ ಹೆಚ್ಚಳಕ್ಕಿರುವ ಯೋಜನೆ ಎಂಬಿವು ಕೇರಳವನ್ನು ಆರ್ಥಿಕವಾಗಿ ಸಬಲೀಕರಣಗೊಳಿಸಲಿದೆ ಎಂದು ಬಿಜೆಪಿ ಮುಖಂಡ ಕೆ. ಸುರೇಂದ್ರನ್ ನುಡಿದರು. ಬಿಜೆಪಿ ಕಾಸರಗೋಡು ಜಿಲ್ಲಾ ಸಮಿತಿ ಕಚೇರಿಯಲ್ಲಿ ಕೇಂದ್ರ ಬಜೆಟ್ ಸಂಬಂಧ ಜನಪ್ರತಿನಿಧಿಗಳ  ಹಾಗೂ ಜಿಲ್ಲಾ ಪದಾಧಿಕಾರಿಗಳ ಸಭೆ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ಅಧ್ಯಕ್ಷತೆ ವಹಿಸಿದರು. ಕೆ. ಶ್ರೀಕಾಂತ್, ವಿ. ರವೀಂದ್ರನ್, ಸವಿತ, ಸತೀಶ್ಚಂದ್ರ ಭಂಡಾರಿ, ಪಿ.ಆರ್. ಸುನಿಲ್, ಎನ್. ಬಾಬುರಾಜ್, ಡಿ. ಶಂಕರ, ಸುಜ್ಞಾನಿ ಶ್ಯಾನುಭೋಗ್ ಮಾತನಾಡಿದರು.

RELATED NEWS

You cannot copy contents of this page