ಕಣ್ಣೂರು: ಕೆಎಸ್‌ಆರ್‌ಟಿಸಿಯ ಉಲ್ಲಾಸ ಯಾತ್ರೆ ಹೊರಟ ಬಸ್ ನಿಯಂತ್ರಣ ತಪ್ಪಿ ಮಗುಚಿ ಅಪಘಾತ ಸಂಭವಿಸಿದೆ. ಪಯ್ಯನ್ನೂರಿ ನಿಂದ ಇಡುಕ್ಕಿಗೆ ತೆರಳುತ್ತಿದ್ದ ಬಸ್ ಪನಂಕುಟ್ಟಿ ಸಮೀಪ ಅಪಘಾತಕ್ಕೀ ಡಾಗಿದೆ. ಇದರಿಂದ 16 ಮಂದಿ ಗಾಯಗೊಂಡರು. ಮೂರು ಮಂದಿಯ ಸ್ಥಿತಿ ಗಂಭೀರವಾಗಿದೆ. ನಿನ್ನೆ ರಾತ್ರಿ 10 ಗಂಟೆ ವೇಳೆ ಘಟನೆ ನಡೆದಿದೆ. ಬಸ್ ನಿಯಂತ್ರಣ ಕಳೆದುಕೊಂಡ ಹಿನ್ನೆಲೆಯಲ್ಲಿ ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ. 26 ಮಂದಿ ಹಾಗೂ ಇಬ್ಬರು ಮಕ್ಕಳು ಅಡಕವಾದ ತಂಡ ಪಯ್ಯನ್ನೂರಿ ನಿಂದ ಗೋವಾಕ್ಕೆ ಪ್ರಯಾಣ ಹೊರಟಿದ್ದರು. ಆ ಬಳಿಕ ರಾಮಕ್ಕಲ್‌ಮೇಟ್‌ಗೆ ತೆರಳಿದ್ದು, ಅಲ್ಲಿಂದ ಹಿಂತಿರುಗುತ್ತಿದ್ದ ಮಧ್ಯೆ ಅಪಘಾತ ಸಂಭವಿಸಿದೆ. ಗಾಯ ಗೊಂಡವರನ್ನು ಅಡಿಮಾಲಿ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.
