ಪೆರ್ಮುದೆ: ಅಪೂರ್ವ ರೋಗ ತಗಲಿ ಚಿಕಿತ್ಸೆ ಪಡೆಯುತ್ತಿರುವ ಪೆರ್ಮುದೆ ಸಮೀಪದ ಕೆಣಿಮೂಲೆ ನಿವಾಸಿ ರೌಫ್ ಎಂಬವರ ಎರಡರ ಹರೆಯದ ಪುತ್ರ ಮುಹಮ್ಮದ್ ರಹೀಫ್ನ ಶಸ್ತ್ರ ಚಿಕಿತ್ಸೆಗೆ ಭಾರಿ ವೆಚ್ಚ ತಗಲಿದೆಯೆಂದು ಕುಟುಂಬ ತಿಳಿಸಿದೆ. ಈ ಹಿನ್ನೆಲೆಯಲ್ಲಿ ಚಿಕಿತ್ಸಾ ಸಹಾಯಕ್ಕಾಗಿ ಪೆರ್ಮುದೆ-ಬಂದ್ಯೋಡು-ಕುಂಬಳೆ-ಕಾಸರಗೋಡು ರೂಟ್ನಲ್ಲಿ ಸಂಚರಿಸುವ ಜಿಸ್ತಿಯ ಹಾಗೂ ಗಝಲ್ ಬಸ್ಗಳು ಕಾರುಣ್ಯ ಯಾತ್ರೆ ನಡೆಸಿವೆ.
ಪೆರ್ಮುದೆಯಲ್ಲಿ ಬಸ್ಗಳ ಕಾರುಣ್ಯ ಯಾತ್ರೆಗೆ ಚಾಲನೆ ನೀಡಲಾಗಿದೆ. ಈ ವೇಳೆ ಪೈವಳಿಕೆ ಪಂಚಾಯತ್ ಸ್ಥಾಯೀ ಸಮಿತಿ ಅಧ್ಯಕ್ಷ ಶ್ರೀನಿವಾಸ, ಮಾಜಿ ಸದಸ್ಯ ಅಮೀರ್ ಪೆರ್ಮುದೆ, ಚಾಲಕರಾದ ಸವಾದ್ ದೀನಾರ್, ಖಾಲಿದ್, ನಿರ್ವಾಹಕರಾದ ಹನೀಫ್ ಚೇರಾಲು, ಯೂಸಫ್, ಸ್ಥಳೀಯರು ಉಪಸ್ಥಿತರಿದ್ದರು. ಸುಮಾರು 50 ಸಾವಿರ ರೂ. ಸಂಗ್ರಹಿಸಲಾಗಿದೆ.






