ಉಪ್ಪಳ: ಮಜೀರ್ಪಳ್ಳ ನಿವಾಸಿ ಹಿರಿಯವ್ಯಾಪಾರಿಯಾದ ಪ್ರಭಾಕರ ಕೆ. (62) ಹೃದಯಾಘಾತದಿಂದ ನಿಧನ ಹೊಂದಿದರು. ನಿನ್ನೆ ರಾತ್ರಿ 7.30 ರ ವೇಳೆ ಇವರಿಗೆ ಮನೆಯಲ್ಲಿ ಹೃದಯಾಘಾತವುಂಟಾಗಿದೆ. ಕೂಡಲೇ ಮಂಗಳೂರಿನ ಆಸ್ಪತ್ರೆಗೆ ತಲುಪಿಸುತ್ತಿದ್ದಂತೆ ನಿಧನ ಸಂಭವಿಸಿದೆ. ಮಜೀರ್ಪಳ್ಳದಲ್ಲಿ ವ್ಯಾಪಾರಿಯಾಗಿದ್ದ ಇವರು ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿ ವರ್ಕಾಡಿ ಘಟಕದ ಮಾಜಿ ಉಪಾಧ್ಯಕ್ಷರಾಗಿದ್ದಾರೆ.
ದಿವಂಗತರಾದ ಜಾಯಿರನ್- ಸೀತಮ್ಮ ದಂಪತಿಯ ಪುತ್ರನಾದ ಮೃತರು ಪತ್ನಿ ಶಕೀಲಾ, ಮಕ್ಕಳಾದ ಅಕ್ಷತಾ, ಅನುಷ, ಅಳಿಯಂದಿರಾದ ಅಭಿಲಾಶ್, ಮಂಜಿತ್, ಸಹೋದರ ದಿವಾಕರ ಎಸ್.ಜೆ (ಕಾಂಗ್ರೆಸ್ ಮಂಜೇಶ್ವರ ಬ್ಲಾಕ್ ಕಾರ್ಯದರ್ಶಿ), ಸಹೋದರಿಯರಾದ ಚಂದ್ರಕಲಾ, ಶಶಿಕಲ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.







