ಕಾಸರಗೋಡು: ವ್ಯಾಪಾರಿಯೊಬ್ಬರು ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಬಳಾಲ್ ಮಂಕಯ ಎಂಬಲ್ಲಿನ ಬೆನ್ನಿ ಜೇಮ್ಸ್ ಯಾನೆ ಚಾಕೋಚ್ಚನ್ (62) ಮೃತ ವ್ಯಕ್ತಿ. ನಿನ್ನೆ ರಾತ್ರಿ ಇವರು ಸಾವು ಸಂಭವಿಸಿದ ವ್ಯಕ್ತಿಯೊಬ್ಬರ ಮನೆಗೆ ತೆರಳಿದ್ದರು. ಅಲ್ಲಿಂದ ಸ್ನೇಹಿತರೊಂ ದಿಗೆ ಮರಳಿದ ಇವರು ಮನೆಗೆ ತಲುಪಿರಲಿ ಲ್ಲವೆನ್ನಲಾಗಿದೆ. ಇದರಿಂದ ಹುಡು ಕಾಡು ತ್ತಿದ್ದಾಗ ತನ್ನ ಅಂಗಡಿಯ ಮೇಲ್ಛಾವಣಿ ಯಲ್ಲಿರುವ ಕೊಠಡಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಕೂಡಲೇ ಜಿಲ್ಲಾಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ಬೆನ್ನಿ ಜೇಮ್ಸ್‌ರ ಪತ್ನಿ ಡೈಸಿ ೧೫ ದಿನಗಳ ಹಿಂದೆ ಅಸೌಖ್ಯ ಬಾಧಿಸಿ ಮೃತಪಟ್ಟಿದ್ದರು. ಇದರ ದುಃಖವೇ ಇವರು ಆತ್ಮಹತ್ಯೆಗೈಯ್ಯಲು ಕಾರಣವೇನೆಂದು ಸಂಶ ಯಿಸಲಾಗುತ್ತಿದೆ. ವೆಳ್ಳೇರಿಕುಂಡ್ ಪೊಲೀ ಸರು ಕೇಸು ದಾಖಲಿಸಿಕೊಂಡಿದ್ದಾರೆ.
