ಕೆಎಸ್‌ಆರ್‌ಟಿಸಿ ಬಸ್ ಮುಂಭಾಗದಲ್ಲಿ ಅಪಾಯಕರ ರೀತಿಯಲ್ಲಿ ಕಾರು ಚಲಾಯಿಸಿದ ವ್ಯಕ್ತಿಯ ಲೈಸನ್ಸ್ ರದ್ದು ಶಿಫಾರಸು

ಹೊಸದುರ್ಗ: ಕೆಎಸ್‌ಆರ್‌ಟಿಸಿ ಬಸ್‌ನ ಮುಂಭಾಗದಲ್ಲಿ ಅಪಾಯಕರ ವಾದ ರೀತಿಯಲ್ಲಿ ಕಾರು ಚಲಾಯಿಸಿದ ಘಟನೆಯಲ್ಲಿ ಮೋಟಾರುವಾಹನ ಇಲಾಖೆ ಚಾಲಕನ ಲೈಸನ್ಸ್ ರದ್ದು ಗೊಳಿಸಲು ಶಿಫಾರಸು ಮಾಡಿದೆ. ಚೆರುವತ್ತೂರು ನಿವಾಸಿ ಶಾಹಿದ್ ಶಾಹುಲ್ ವಿರುದ್ಧ ಮೋಟಾರು ವಾಹನ ಇಲಾಖೆ ಈ ಕ್ರಮ ಕೈಗೊಂಡಿದೆ. ಮಲಪ್ಪುರಂ ಎಡಪ್ಪಾಲ್‌ನ ಚಾಲನಾ ತರಬೇತಿ ಕೇಂದ್ರದಲ್ಲಿ ಐದು ದಿನದ ಕಡ್ಡಾಯ ತರಬೇತಿಗೂ, ನ್ಯಾಯಾಲಯ ದಲ್ಲಿ ದಂಡ ಪಾವತಿಸಲು ಮೋಟಾರು ವಾಹನ ಇಲಾಖೆ ಶಿಫಾರಸು ಮಾಡಿದೆ.

ಕೆಎಸ್‌ಆರ್‌ಟಿಸಿ ನೀಡಿದ ದೂರಿನಂತೆ ಈ ಕ್ರಮ ಕೈಗೊಳ್ಳಲಾಗಿದೆ. ಕಾಞಂಗಾಡ್ ಅಸಿಸ್ಟೆಂಟ್ ಮೋಟಾರು ವೆಹಿಕಲ್ ಇನ್ಸ್‌ಪೆಕ್ಟರ್‌ಗಳಾದ ಪ್ರವೀಣ್ ಕುಮಾರ್, ಕೆ. ಅಭಿಲಾಷ್ ಎಂಬಿವರು ಚಾಲಕನನ್ನು ಪತ್ತೆಹಚ್ಚಿ ಕ್ರಮಕ್ಕೆ ಸೂಚಿಸಿದ್ದಾರೆ. ಕೆಎಸ್‌ಆರ್‌ಟಿಸಿ ಸೂಪರ್ ಫಾಸ್ ಬಸ್‌ನ ಮುಂಭಾಗದಲ್ಲಿ ಇತ್ತೀಚೆಗೆ ಅಪಾಯಕರವಾದ ರೀತಿಯಲ್ಲಿ ಕಾರು ಚಲಾಯಿಸಿದ ಬಗ್ಗೆ ದೂರಲಾಗಿತ್ತು.

You cannot copy contents of this page