ಕುಂಬಳೆ: ಕುಂಬಳೆ-ಮುಳ್ಳೇರಿಯ ಕೆಎಸ್‌ಟಿಪಿ ರಸ್ತೆಯಲ್ಲಿ ಇಂದು ಬೆಳಿಗ್ಗೆ ವಾಹನ ಅಪಘಾತ ಸಂಭವಿದ್ದು ಹಲವರು ಗಾಯಗೊಂಡಿದ್ದಾರೆ. ಕಾರು ಹಾಗೂ ಖಾಸಗಿ ಬಸ್ ಢಿಕ್ಕಿ ಹೊಡೆದು ಉಂಟಾದ ಅಪಘಾತದಲ್ಲಿ ಕಾರು ಪ್ರಯಾಣಿಕರಾದ ನಾಲ್ಕು ಮಂದಿ ಗಂಭೀರ ಗಾಯಗೊಂಡಿದ್ದಾರೆ. ಅಲ್ಲದೆ ಮಹಿಳೆ ಯರ ಸಹಿತ ಬಸ್ ಪ್ರಯಾಣಿಕರಾದ ಹಲವರಿಗೆ ಗಾಯಗಳಾಗಿವೆ.
ಇಂದು ಬೆಳಿಗ್ಗೆ 8.30ರ ವೇಳೆ ಶಾಂತಿಪಳ್ಳ ಅಬಕಾರಿ ಕಚೇರಿ ಸಮೀಪ ಅಪಘಾತವುಂಟಾಗಿದೆ. ಬದಿಯಡ್ಕ ಭಾಗಕ್ಕೆ ತೆರಳುತ್ತಿದ್ದ ಕಾರು ಹಾಗೂ ಕುಂಬಳೆಗೆ ಬರುತ್ತಿದ್ದ ಖಾಸಗಿ ಬಸ್ ಢಿಕ್ಕಿ ಹೊಡೆದು ಅಪಘಾತವುಂ ಟಾಗಿದೆ. ಅಪಘಾತದಲ್ಲಿ ಕಾಸರಗೋಡು ನೋಂದಾವಣೆಯ ಕಾರು ಪೂರ್ಣವಾಗಿ ಹಾನಿಗೀಡಾ ಗಿದೆ. ಕಾರಿನಲ್ಲಿದ್ದ ಕಾಸರಗೋಡು ನಿವಾಸಿಗಳೆನ್ನಲಾದ ಶಾಜಿದ್ (20), ಮಾಲಿಕ್ (20), ಕಬೀರ್ (26), ಸಿದಾನ್ ಎಂಬಿವರನ್ನು ಚೆಂಗಳದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾ ಗಿದೆ. ಬಸ್ ಪ್ರಯಾಣಿಕರಾದ ಕನ್ಯಪ್ಪಾಡಿಯ ಮುಶ್ಕಾನ್ (23), ನೀರ್ಚಾಲಿನ ದೀಪಿಕ (22), ಭಾಸ್ಕರನಗರದ ಸುಜಾತ (40) ಎಂಬಿವರನ್ನು ಕುಂಬಳೆ ಖಾಸಗಿ ಆಸ್ಪತ್ರೆಯಲ್ಲೂ ಇನ್ನು ಕೆಲವರನ್ನು ವಿವಿಧ ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಿಸಲಾಗಿದೆ.






