ಕಾರು ಢಿಕ್ಕಿ ಹೊಡೆದು ಟ್ರಾನ್ಸ್‌ಫಾರ್ಮರ್ ಹಾನಿ: ತಪ್ಪಿದ ದುರಂತ

ಕಾಸರಗೋಡು: ಅಪರಿಮಿತ ವೇಗದಲ್ಲಿ ಸಂಚರಿಸಿದ ಕಾರು ಢಿಕ್ಕಿ ಹೊಡೆದು ಟ್ರಾನ್ಸ್ ಫಾರ್ಮರ್ ಹಾನಿಗೀಡಾದ ಘಟನೆ ತಚ್ಚಂಗಾಡ್‌ನಲ್ಲಿ ನಡೆದಿದೆ.

ನಿನ್ನೆ ರಾತ್ರಿ 11 ಗಂಟೆಗೆ ಅಪಘಾತವುಂಟಾಗಿದೆ. ತಚ್ಚಂಗಾಡ್ -ಪಾಲಕುನ್ನು ರಸ್ತೆಯಲ್ಲಿ ತಚ್ಚಂಗಾಡ್ ಜಂಕ್ಷನ್‌ನ ಟ್ರಾನ್ಸ್ ಫಾರ್ಮರ್‌ಗೆ ಕಾರು ಢಿಕ್ಕಿ ಹೊಡೆದಿದೆ. ಪಾಲಕುನ್ನು ಭಾಗದಿಂದ ಬಂದ ಕಾರು ರಸ್ತೆಯಿಂದ ೨ ಮೀಟರ್ ದೂರದಲ್ಲಿರುವ ಟ್ರಾನ್ಸ್ ಫಾರ್ಮರ್‌ನ ಕಬ್ಬಿಣದ ಬೇಲಿ ಹಾಗೂ ಕಗ್ಗಲ್ಲಿನ ಕಟ್ಟೆಗೆ ಢಿಕ್ಕಿ ಹೊಡೆದು ನಿಂತಿದೆ. ಚಟ್ಟಂಚಾಲ್ ಭಾಗದ ಇಬ್ಬರು ಯುವಕರು ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿದೆ. ಈ ಯುವಕರು ಸಣ್ಣಪುಟ್ಟ ಗಾಯಗೊಂಡಿದ್ದು, ಉದುಮದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು. ಅಪಘಾತ ತಕ್ಷಣ ವಿದ್ಯುತ್ ಸಂಚಾರ ಮೊಟಕುಗೊಂಡಿರುವುದರಿಂದ ಭಾರೀ ದುರಂತ ತಪ್ಪಿಹೋಗಿದೆ. ಅಪಘಾತದಿಂದಾಗಿ ತಚ್ಚಂಗಾಡ್ ಹಾಗೂ ಪರಿಸರ ಪ್ರದೇಶಗಳಲ್ಲಿ ವಿದ್ಯುತ್ ವಿತರಣೆ ಪೂರ್ಣವಾಗಿ ಮೊಟಕುಗೊಂಡಿದೆ.

You cannot copy contents of this page