ಕಾಸರಗೋಡು: ಪೆರುಂಬಳದಲ್ಲಿ ನಿನ್ನೆ ಮಧ್ಯಾಹ್ನ ಕಾರು ಮತ್ತು ರಿಕ್ಷಾ ಢಿಕ್ಕಿ ಹೊಡೆದು ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಒಂದೇ ಕುಟುಂಬದ ಐದು ಮಂದಿ ಸೇರಿದಂತೆ ಒಟ್ಟು ಆರು ಮಂದಿ ಗಾಯಗೊಂಡ ಘಟನೆ ನಡೆದಿದೆ.
ಆಲಂಪಾಡಿ ನಿವಾಸಿಗಳಾದ ಪ್ರಜಿನ (36), ಹಾಜಿರ 55), ಶಮೀರ (35), 2 ವರ್ಷದ ಮಗು ಹಾಗೂ ರಿಕ್ಷಾ ಚಾಲಕ ಆಲಂಪಾಡಿಯ ಅಬ್ದುಲ್ ಖಾದರ್ (55) ಎಂಬವರು ಈ ಅಪಘಾತದಲ್ಲಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಈ ಬಗ್ಗೆ ವಿದ್ಯಾನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.





