ಕುಂಬಳೆ: ನಕಲಿ ನಂಬ್ರ ಪ್ಲೇಟ್ ಲಗತ್ತಿಸಿದ ಕಾರು ಸಹಿತ ಇಬ್ಬರನ್ನು ಕುಂಬಳೆ ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಯ್ಯಾರು ಮೇರ್ಕಳ ಕಯ್ಯಾರು ಹೌಸ್ನ ಮೂಸಾ ಅಫ್ಸಲ್ (26) ಮತ್ತು ಇಚ್ಲಂಪಾಡಿ ಗ್ರಾಮದ ಪಚ್ಚಂಬಳ ಪಳ್ಳತ್ತೊಟ್ಟಿ ನಿಜಾಮ್ ಮಂಜಿಲ್ನ ನಿಜಾಮುದ್ದೀನ್ (19) ಬಂಧಿತ ಆರೋಪಿಗಳು.
ಕುಂಬಳೆ ಪೊಲೀಸ್ ಠಾಣೆಯ ಎಸ್ಐ ಗಣೇಶನ್ ಕೆ.ಪಿ.ಯವರ ನೇತೃತ್ವದ ಪೊಲೀಸರ ತಂಡ ನಿನ್ನೆ ಸಂಜೆ ತಮ್ಮ ವಾಹನದಲ್ಲಿ ಗಸ್ತು ತಿರುಗುತ್ತಿದ್ದ ವೇಳೆ ಕಯ್ಯಾರು ಗ್ರಾಮದ ಚೇವಾರಿನ ರೆಸೋರ್ಟ್ನ ಬಳಿ ಶಂಕಾಸ್ಪದ ರೀತಿಯಲ್ಲಿ ಕಾರನ್ನು ಕಂಡು ಬಂದಿದ್ದು, ಅದರಂತೆ ಆ ಕಾರನ್ನು ತಪಾಸಣೆಗೊಳಪಡಿಸಿದಾಗ ಆ ಕಾರಿನ ಅಸಲಿ ನಂಬ್ರ ಪ್ಲೇಟನ್ನು ಬದಲಾಯಿಸಿ ಅದನ್ನು ಕಾರಿನೊಳಗಿರಿಸಿ, ನಕಲಿ ನಂಬ್ರಪ್ಲೇಟನ್ನು ಕಾರಿಗೆ ಅಳವಡಿಸಿ ರುವುದು ಪತ್ತೆಯಾಗಿದೆಯೆಂದೂ, ಅದಕ್ಕೆ ಸಂಬಂಧಿಸಿ ಆ ಕಾರು ಸಹಿತ ಇಬ್ಬರು ಆರೋಪಿಗಳನ್ನು ವಶಕ್ಕೆ ತೆಗೆದು ಪ್ರಕರಣ ದಾಖಲಿಸಲಾಯಿತ್ತೆಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳು ಯಾವುದೋ ಅಪರಾಧ ಕೃತ್ಯವೆಸಗುವ ಉದ್ದೇಶ ಹೊಂದಿದ್ದರೇ ಎಂಬ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ. ಮಾತ್ರವಲ್ಲ ತಿಂಗಳ ಹಿಂದೆ ಶಾಂತಿಪಳ್ಳದ ಪೆಟ್ರೋಲ್ ಬಂಕ್ನಿಂದ ಕಾರಿಗೆ ಪೆಟ್ರೋಲ್ ತುಂಬಿಸಿದ ಬಳಿಕ ಹಣ ನೀಡದೆ ಪರಾರಿಯಾದ ಘಟನೆಗೂ ಇವರಿಗೂ ಯಾವು ದಾದರೂ ಸಂಬಂಧವಿದೆಯೇ ಎಂಬ ಬಗ್ಗೆಯೂ ತನಿಖೆ ನಡೆಸಲಾಗುವುದೆಂದು ಪೊಲೀಸರು ತಿಳಿಸಿದ್ದಾರೆ.






