ಉದ್ಯೋಗ ನೀಡುವುದಾಗಿ ನಂಬಿಸಿ 3,50,000 ರೂ. ಪಡೆದು ವಂಚನೆ ಆರೋಪ: ಇಬ್ಬರ ವಿರುದ್ಧ ಕೇಸು

ಬದಿಯಡ್ಕ: ಉದ್ಯೋಗ ಕೊಡಿಸು ವುದಾಗಿ ನಂಬಿಸಿ 3,5೦,೦೦೦ ರೂ.ವನ್ನು ಮುಂಗಡವಾಗಿ ಪಡೆದು ನಂತರ ಆ ಉದ್ಯೋಗವನ್ನಾಗಲೀ, ನೀಡಿದ ಹಣವನ್ನಾಗಲೀ ಹಿಂತಿರುಗಿಸದೆ ವಂಚನೆ ಗೈದಿರುವುದಾಗಿ ಆರೋಪಿಸಿ ಯುವಕ ನೀಡಿದ ದೂರಿನಂತೆ ಇಬ್ಬರ ವಿರುದ್ಧ ಬದಿಯಡ್ಕ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮುಗು ಪಳ್ಳ ಹೌಸಿನ ಜೋಯಲ್ ಡಿಸೋಜಾ (22) ಎಂಬ ಯುವಕ ನೀಡಿದ ದೂರಿನಂತೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ಪ್ರತೀಶ್ ಸಿ. ಸೋಮನ್ ಮತ್ತು  ನೋರ್ತ್ ದೆಹಲಿಯ ಸೋಮ್ ಪ್ರಕಾಶ್ ಎಂಬಿಬ್ಬರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿ ಕೊಂಡಿದ್ದಾರೆ. ಮೋಂಡಿನ್‌ಗ್ರೋ ಯಿಲ್ ಇಲೆಕ್ಟ್ರಿಕಲ್ ಕನ್‌ಸ್ಟ್ರಕ್ಷನ್ ಎಂಬ ಸಂಸ್ಥೆಯಲ್ಲಿ ಉದ್ಯೋಗ ಕೊಡಿ ಸುವುದಾಗಿ ನಂಬಿಸಿ ಆರೋಪಿಗಳು 2024 ಮಾರ್ಚ್ 1ರಿಂದ 2025 ಜೂನ್ 12ರ ನಡುವಿನ ಅವಧಿ ಯಲ್ಲಿ ಬ್ಯಾಂಕ್ ಟ್ರಾನ್ಸಾಕ್ಷನ್ ಮೂಲಕ ಹಾಗೂ ನೇರವಾಗಿ ತನ್ನಿಂದ 3,5೦,೦೦೦ ರೂ. ಪಡೆದು ಬಳಿಕ ಉದ್ಯೋಗವನ್ನಾಗಲೀ ನೀಡಿದ ಹಣವನ್ನಾಗಲೀ ಹಿಂತಿರುಗಿ ಸಲು ತಯಾರಾಗದೆ ತನಗೆ ವಂಚನೆ ಗೈದಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಜೋಯಲ್ ಡಿಸೋಜ ಆರೋಪಿಸಿದ್ದಾರೆ.

You cannot copy contents of this page