ಜತೆಗೆ ವಾಸಿಸುತ್ತಿದ್ದ ಯುವತಿಗೆ ಲೈಂಗಿಕ ದೌರ್ಜನ್ಯ: ಯುವಕನ ವಿರುದ್ಧ ಕೇಸು

ಕಾಸರಗೋಡು: ಜತೆಗೆ ವಾಸಿಸುತ್ತಿದ್ದ ಯುವತಿ ಮೇಲೆ ಯುವಕನೋರ್ವ ಲೈಂಗಿಕ ದೌರ್ಜನ್ಯವೆಸಗಿದ ಬಗ್ಗೆ ದೂರಲಾಗಿದೆ. 39ರ ಹರೆಯದ, ವಿವಾಹ ವಿಚ್ಛೇದನಗೊಂಡ ಯುವತಿ ನೀಡಿದ ದೂರಿನಂತೆ ತೃಕರಿಪುರದ ಮುಹಮ್ಮದ್ ಅಲಿ ಎಂಬಾತನ ವಿರುದ್ಧ ಚಂದೇರ ಪೊಲೀಸರು ಕೇಸು ದಾಖಲಿಸಿದ್ದಾರೆ.

2019ರಿಂದ ಯುವತಿ ಹಾಗೂ ಮುಹಮ್ಮದ್ ಅಲಿ ಜತೆಗೆ ವಾಸಿಸುತ್ತಿದ್ದರು. ಈ ವೇಳೆ ಆರೋಪಿ ತನಗೆ ಹಲವು ಬಾರಿ ಲೈಂಗಿಕ ದೌರ್ಜನ್ಯವೆಸಗಿದ್ದಾನೆಂದೂ ಭಾರೀ ಮೊತ್ತವನ್ನೂ ಪಡೆದು ವಂಚಿಸಿದ್ದಾನೆಂದು ಯುವತಿ ಪೊಲೀಸರಿಗೆ ನೀಡಿದ ದೂರಿ ನಲ್ಲಿ ತಿಳಿಸಿದ್ದಾಳೆ. ಮುಹಮ್ಮದ್ ಅಲಿ ಯನ್ನು ಪತ್ತೆಹಚ್ಚಲು ತನಿಖೆ ತೀವ್ರಗೊಳಿಸಿ ರುವುದಾಗಿ ಪೊಲೀಸರು ತಿಳಿಸಿದ್ದಾರೆ.

You cannot copy contents of this page