ಕುಂಬಳೆ: ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯ ಉಪ್ಪಳ ಪತ್ವಾಡಿಯಲ್ಲಿರುವ ಮನೆಯಿಂದ ಮೂರೂವರೆ ಕಿಲೋ ಎಂಡಿಎಂಎ ಹಾಗೂ 642 ಗ್ರಾಂ ಗಾಂಜಾ ವಶಪಡಿಸಿಕೊಂಡ ಪ್ರಕರಣದಲ್ಲಿ ಇನ್ನೋರ್ವ ಆರೋಪಿ ಸೆರೆಗೀಡಾ ಗಿದ್ದಾನೆ.
ಉಪ್ಪಳ ಮೊಗರು ನಿವಾಸಿ ಸುಹೈಲ್ ಎಂಬಾತನನ್ನು ಹೊಸದಿ ಲ್ಲಿಯ ವಿಮಾನ ನಿಲ್ದಾಣದಿಂದ ಸೆರೆಹಿಡಿಯಲಾಗಿದೆ. ಮಾದಕವಸ್ತು ವಶ ಪ್ರಕರಣದಲ್ಲಿ ಆರೋಪಿಯಾದ ಸುಹೈಲ್ ಗಲ್ಫ್ಗೆ ಪರಾರಿಯಾಗಿದ್ದನು. ಈ ಹಿನ್ನೆಲೆಯಲ್ಲಿ ದೇಶದ ಎಲ್ಲಾ ವಿಮಾನ ನಿಲ್ದಾಣ ಗಳಿಗೂ ಪೊಲೀಸರು ಲುಕೌಟ್ ನೋಟೀಸು ಕಳುಹಿಸಿದ್ದರು. ಗಲ್ಫ್ನಲ್ಲಿ ಬೇರೊಂದು ಪ್ರಕರಣದಲ್ಲಿ ಸೆರೆಗೀ ಡಾದ ಸುಹೈಲ್ನನ್ನು ಅಧಿಕಾರಿಗಳು ಭಾರತಕ್ಕೆ ಕಳುಹಿಸಿದ್ದರು. ಹೊಸದಿಲ್ಲಿ ವಿಮಾನ ನಿಲ್ದಾಣದಲ್ಲಿಳಿದೊಡನೆ ಈತನನ್ನು ಅಧಿಕಾರಿಗಳು ತಡೆದು ನಿಲ್ಲಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಇದರಂತೆ ಮಂಜೇಶ್ವರ ಪೊಲೀಸರು ದೆಹಲಿಗೆ ತೆರಳಿ ಆರೋಪಿಯನ್ನು ವಶಕ್ಕೆ ತೆಗೆದುಕೊಂಡಿದ್ದರು. ಕಾಸರಗೋಡು ಎಎಸ್ಪಿ ಅಶೋಕ್ ಅಚ್ಯುತ್ರ ಮೇಲ್ನೋಟದಲ್ಲಿ ರಾಜ್ಯದ ಅತೀ ದೊಡ್ಡ ಎಂಡಿಎಂಎ ವಶ ಪ್ರಕರಣಗಳಲ್ಲೊಂದಾದ ಪತ್ವಾಡಿ ಪ್ರಕರಣವನ್ನು ತನಿಖೆ ನಡೆಸಲಾಗುತ್ತಿದೆ.
೨೦೨೪ ಸೆಪ್ಟಂಬರ್ ೨೦ರಂದು ಸಂಜೆ ೪ ಗಂಟೆಗೆ ಪತ್ವಾಡಿಯ ಅಸ್ಕರ್ ಅಲಿ (28) ಎಂಬಾತನ ಮನೆಯಿಂದ ಮಾದಕ ವಸ್ತುಗಳನ್ನು ವಶಪಡಿಸ ಲಾಗಿತ್ತು. ಈ ಮನೆಗೆ ಹಗಲು-ರಾತ್ರಿ ಅಪರಿಚಿತ ವ್ಯಕ್ತಿಗಳು ವಾಹನಗಳಲ್ಲಿ ಬಂದು ಹೋಗುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿತ್ತು. ಇದರಿಂದ ಹಲವು ದಿನಗಳ ಕಾಲ ನಿಗಾ ಇರಿಸಿ ಪೊಲೀಸರು ಅಸ್ಕರ್ ಅಲಿಯ ಮನೆಗೆ ದಾಳಿ ನಡೆಸಿ ಮಾದಕವಸ್ತು ವಶಪಡಿಸಿಕೊಂಡಿದ್ದರು. ಈ ಪ್ರಕರಣದಲ್ಲಿ ಮುಖ್ಯ ಆರೋ ಪಿಗಳಲ್ಲೋರ್ವನಾದ ತಳಂಗರೆ ಬಾಂ ಗೋಡ್ ಶಬೀಬ್ ಬಾಗ್ ಹೌಸ್ನ ಮುಹಮ್ಮದ್ ಲಿಸಾನ್ ಅಲಿ (32) ಎಂಬಾತನನ್ನು ಎರಡು ವಾರಗಳ ಹಿಂದೆ ಕರ್ನಾಟಕದ ಮಡಿಕೇರಿ ಕುಶಾಲ ನಗರದಿಂದ ಸೆರೆಹಿಡಿಯಲಾಗಿತ್ತು.






