ಕೇಂದ್ರ ಸರಕಾರದ ಯೋಜನೆಗಳನ್ನು ಕಮ್ಯೂನಿಸ್ಟ್ ಸರಕಾರದ್ದೆಂದು ಬಿಂಬಿಸಲಾಗುತ್ತಿದೆ- ನಳಿನ್ ಕುಮಾರ್ ಕಟೀಲ್

ಬದಿಯಡ್ಕ: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಎಲ್ಲಾ ವಿಭಾಗದವರಿಗೆ ಸಮಾನವಾದ ರೀತಿಯಲ್ಲಿ ಯೋಜನೆಗಳನ್ನು ತಲುಪಿಸುವಾಗ ಕೇರಳದಲ್ಲಿ ಕಮ್ಯುನಿಸ್ಟ್ ಸರಕಾರ ಕೇಂದ್ರ ಯೋಜನೆಗಳನ್ನು ಅನುಷ್ಠಾನಗೊಳಿಸದೆ, ಯೋಜನೆಗಳು ತಮ್ಮದೆಂದು ಬಿಂಬಿಸುವ ದುಷ್ಠ ಆಡಳಿತ ನಡೆಸುತ್ತಿರುವುದಾಗಿ ಕರ್ನಾಟಕ ರಾಜ್ಯ ಬಿಜೆಪಿ ಮಾಜಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆರೋಪಿಸಿದರು. ಕುಂಬ್ಡಾಜೆ ಪಂಚಾಯತ್ ಮೈಲ್ತೊಟ್ಟಿ ಎಸ್‌ಸಿ ಕಾಲನಿಯಲ್ಲಿ ನಿನ್ನೆ ನಡೆದ ಕುಟುಂಬ ಸಂಗಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಬಿಜೆಪಿಯು ಎಲ್ಲರ ಕ್ಷೇಮಕ್ಕಾಗಿ ಎಲ್ಲಾ ಪಂಗಡದವರಿಗೆ ಆದ್ಯತೆ ನೀಡುವ ಮೂಲಕ ಆಡಳಿತ ನಡೆಸುತ್ತಿದ್ದು, ಕಾಸರಗೋಡು ಅಭಿವೃದ್ಧಿ ಹೊಂದಬೇಕಾದರೆ ಕಾಸರಗೋಡಿನಲ್ಲೂ ಬಿಜೆಪಿ ಶಾಸಕರು ಬರಬೇಕು ಎಂದು ನುಡಿದರು. ಕಾಲನಿಯ ಆನಂದ ಅಧ್ಯಕ್ಷತೆ ವಹಿಸಿದರು. ಕಲ್ಲಿಕೋಟೆ ವಲಯ ಅಧ್ಯಕ್ಷ ಕೆ. ಶ್ರೀಕಾಂತ್, ಪ್ರಧಾನ ಕಾರ್ಯದರ್ಶಿ ಸುಧಾಮ ಗೋಸಾಡ, ರಾಜ್ಯ ಸಮಿತಿ ಸದಸ್ಯ ಹರೀಶ್ ನಾರಂಪಾಡಿ, ಮಂಡಲ ಅಧ್ಯಕ್ಷ ಗೋಪಾಲಕೃಷ್ಣ, ಪ್ರಧಾನ ಕಾರ್ಯದರ್ಶಿ ರವೀಂದ್ರ ರೈ ಗೋಸಾಡ, ಕುಂಬ್ಡಾಜೆ ಬಿಜೆಪಿ ಅಧ್ಯಕ್ಷ ಶಶಿಧರ ತೆಕ್ಕೆಮೂಲೆ, ಶ್ರೀಧರ ಬೆಳ್ಳೂರು, ಪ್ರಿಯಾಂಕ ಎ.ಸಿ, ಕೊರಗಪ್ಪ ಬೆಳ್ಳಿಗೆ, ಹರೀಶ್ ಕುಣಿಕುಳ್ಳಾಯ, ಜಯಪ್ರಕಾಶ್, ರಘು ಮಾಚಾವು, ರಾಮ ಭಾಗವಹಿಸಿದರು. ರಾಜೇಶ್ ಶೆಟ್ಟಿ ಸ್ವಾಗತಿಸಿ, ಪಂಚಾಯತ್ ಸಮಿತಿ ಪ್ರಧಾನ ಕಾರ್ಯದರ್ಶಿ ಪ್ರಮೋದ್ ಭಂಡಾರಿ ವಂದಿಸಿದರು.

RELATED NEWS

You cannot copy contents of this page