ಬ್ಯಾಂಕ್‌ಗಳಲ್ಲಿ ಚಿನ್ನಾಭರಣ ಆಧಾರದಲ್ಲಿ ಸಾಲ ವ್ಯವಸ್ಥೆಯಲ್ಲಿ ಬದಲಾವಣೆ

ಮುಂಬೈ: ಚಿನ್ನ, ಬೆಳ್ಳಿ ಅಡವಿರಿಸಿ ಪಡೆಯುವ ಸಾಲದ ವ್ಯವಸ್ಥೆಗಳನ್ನು ರಿಸರ್ವ್ ಬ್ಯಾಂಕ್ ನವೀಕರಿಸಿದೆ. ಚಿನ್ನಾಭರಣ ಸಾಲದಲ್ಲಿ ನಿಯಂತ್ರಣ ಏರ್ಪಡಿಸುವುದೇ ಹೊಸ ವ್ಯವಸ್ಥೆಯಾಗಿದೆ. ಗ್ರಾಹಕರಿಗೆ ಸಂರಕ್ಷಣೆ, ಸಾಲ ಮರುಪಾವತಿಸುವಲ್ಲಿ ಶಿಸ್ತು ಪಾಲನೆ ಎಂಬೀ ಗುರಿಯೊಂದಿಗೆ ಇದನ್ನು ಜ್ಯಾರಿ ಗೊಳಿಸಲಾಗುವುದು. ಪರಿಷ್ಕರಣೆಯ ಮೊದಲ ಹಂತ ಅಕ್ಟೋಬರ್ 1ರಂದು ಜ್ಯಾರಿಗೆ ಬಂದಿದೆ. ದ್ವಿತೀಯ ಹಂತ ಎಪ್ರಿಲ್ 1ರಿಂದ ಜ್ಯಾರಿಗೆ ಬರಲಿದೆ.

ಚಿನ್ನಾಭರಣ ಸಾಲ ಪಡೆದು ಬಳಿಕ ಬಡ್ಡಿ ಪಾವತಿಸಿ ನವೀಕರಿಸುವುದು ಹೊಸ ವ್ಯವಸ್ಥೆಯ ಭಾಗವಾಗಿದೆ. ಇದೇ ವೇಳೆ ಸಾಲದ ಮೊತ್ತವನ್ನು ಅದರ ಬಡ್ಡಿ ಸಹಿತ 12 ತಿಂಗಳೊಳಗೆ ಮರು ಪಾವತಿಸಬೇಕಾಗಿದೆ. ಸಾಲ ಮರು ಪಾವತಿಸಿದ ತಕ್ಷಣ ಅಡವಿರಿಸಿ ಚಿನ್ನಾಭರಣ ಮರಳಿ ನೀಡಲು ಹಾಗೂ ಅದಕ್ಕೆ ವಿಳಂಬವಾದಲ್ಲಿ ದಂಡ ವಸೂಲು ಮಾಡಲಾಗುವುದು. ಸಾಲದ ಒಪ್ಪಂದ, ಹರಾಜು ಕ್ರಮಗಳು ಮೊದ ಲಾದವುಗಳನ್ನು ಸರಳಗೊಳಿಸಲು ಗ್ರಾಹಕರಿಗೆ ಸ್ಥಳೀಯ ಭಾಷೆಯಲ್ಲಿ ಎಲ್ಲಾ ಮಾಹಿತಿಗಳನ್ನೂ ನೀಡಬೇಕೆಂದು ರಿಸರ್ವ್ ಬ್ಯಾಂಕ್ ತಿಳಿಸಿದೆ.

ಹೊಸ ಮಾನದಂಡಗಳ ಪ್ರಕಾರ ಚಿನ್ನದ ಮೌಲ್ಯದಲ್ಲಿ 85 ಶೇ.ದಂತೆ 2.5 ಲಕ್ಷ ರೂಪಾಯಿವರೆಗೆ ಸಾಲ ನೀಡಬಹುದು. 2.5 ಲಕ್ಷ ರೂ.ನಿಂದ 5 ಲಕ್ಷ ರೂ.ವರೆಗಿನ ಸಾಲಗಳಿಗೆ ಇದು 80 ಶೇ. ಆಗಿರುವುದು.

You cannot copy contents of this page