ಕುಂಬಳೆ: ಅವ್ಯವಸ್ಥೆಯ ಚರಂಡಿ ನಿರ್ಮಾಣದಿಂದಾಗಿ ವಾಹನ ಅಪ ಘಾತಗಳು ಪದೇ ಪದೇ ಸಂಭವಿ ಸುತ್ತಿದೆ. ಕುಂಬಳೆ ಪೇಟೆಯಿಂದ ಕಣಿಪುರ ಶ್ರೀ ಗೋಪಾಲಕೃಷ್ಣ ಕ್ಷೇತ್ರಕ್ಕೆ ತೆರಳುವ ರಸ್ತೆಯಲ್ಲಿ ಈ ಸಮಸ್ಯೆ ಎದುರಾಗಿದೆ. ರಸ್ತೆ ಬದಿ ಚರಂಡಿ ನಿರ್ಮಿಸಲಾಗಿದ್ದು, ಇನ್ನು ಕೆಲವೆಡೆ ಹಾಗೆಯೇ ಉಳಿದಿದೆ. ಅಲ್ಲದೆ ರಸ್ತೆ ಬದಿ ಹೊಂಡವಾಗಿ ಉಳಿದಿದ್ದು, ಇದರಲ್ಲಿ ವಾಹನಗಳು ಪದೇ ಪದೇ ಸಿಲುಕಿಕೊಳ್ಳುತ್ತಿರುವುದು ಸಮಸ್ಯೆಯಾಗಿ ಪರಿಣಮಿಸಿದೆ. ಈ ಸಮಸ್ಯೆಗೆ ಶೀಘ್ರ ಪರಿಹಾರ ಕಾಣಬೇಕೆಂದು ನಾಗರಿಕರು ಒತ್ತಾಯಿಸುತ್ತಿದ್ದಾರೆ.
