ಮುಖ್ಯಮಂತ್ರಿಯ ವಿದೇಶ ಯಾತ್ರೆಗೆ ಎರಡು ವರ್ಷದಲ್ಲಿ ವಿಮಾನ ಖರ್ಚು 41.57 ಲಕ್ಷ ರೂ.

ತಿರುವನಂತಪುರ: ಮುಖ್ಯಮಂತ್ರಿ ಪಿಣರಾಯಿ ವಿಜಯನ್ 2022-23ರಲ್ಲಿ ನಡೆಸಿದ ವಿಮಾನ ಯಾತ್ರೆಗಳ ಖರ್ಚಿನ ವತಿಯಿಂದ 41.57 ಲಕ್ಷ ರೂ. ಪಡೆದಿದ್ದಾರೆ. 2022 ಜನವರಿ 15ರಿಂದ ಕಳೆದ ವರ್ಷ ಡಿಸೆಂಬರ್ ತನಕದ ಅವಧಿಯಲ್ಲಿ ಮುಖ್ಯಮಂತ್ರಿ ಗಲ್ಫ್ ರಾಷ್ಟ್ರಗಳಿಗೆ ಯಾತ್ರೆ ಮಾತ್ರವಲ್ಲ, ಅಮೇರಿಕ, ಬ್ರಿಟನ್, ಕ್ಯೂಬಾ ಸೇರಿದಂತೆ ಒಟ್ಟು 16 ರಾಷ್ಟ್ರಗಳಿಗೆ ಯಾತ್ರೆ ನಡೆಸಿದ್ದಾರೆ.  ಹೀಗೆ ನಡೆಸಲಾದ ವಿದೇಶಯಾತ್ರೆಯ ವಿಮಾನ ಶುಲ್ಕದ ವತಿಯಿಂದ ಅವರು 2022 ಮತ್ತು 2023ರಲ್ಲಿ ಒಟ್ಟು 41.57 ಲಕ್ಷ ರೂ. ಪಡೆದಿದ್ದಾರೆಂದು ಮಾಹಿತಿ ಹಕ್ಕು ಕಾನೂನುಪ್ರಕಾರ ರಾಜ್ಯ ಸಾರ್ವಜನಿಕ ಆಡಳಿತ ಇಲಾಖೆ ಹೊರಬಿಟ್ಟ ಮಾಹಿತಿ ಯಲ್ಲಿ ತಿಳಿಸಲಾಗಿದೆ.   ಔದ್ಯೋಗಿಕ ಹಾಗೂ ಖಾಸಗಿ ವಿದೇಶ ಯಾತ್ರೆ ಹಾಗೂ ಚಿಕಿತ್ಸೆಗಾಗಿ ಅಮೇರಿಕಾಕ್ಕೆ ಹೋದ ವಿಮಾನ ಯಾತ್ರೆಯ ವೆಚ್ಚವೂ ಇದರಲ್ಲಿ ಒಳಗೊಂಡಿದೆ. ಇದು ಕೇವಲ ವಿಮಾನ ಖರ್ಚು ಮಾತ್ರವೇ ಆಗಿದೆ.  ವಿದೇಶ ಯಾತ್ರೆ ವೇಳೆ ಅವರ ವಾಸ ಇತ್ಯಾದಿ ವೆಚ್ಚಗಳ ಕುರಿತಾದ ಮಾಹಿತಿಯನ್ನು ಸಾರ್ವಜನಿಕ ಆಡಳಿತ ಇಲಾಖೆ ಹೊರಬಿಟ್ಟಿಲ್ಲ. ಮುಖ್ಯಮಂತ್ರಿಯ ವಿದೇಶಗಳ ಕುರಿತಾದ ಪೂರ್ಣ ಮಾಹಿತಿಗಳನ್ನು ನೀಡುವಂತೆ ಕಳೆದ ವಿಧಾನಸಭಾ ಅಧಿವೇಶನದಲ್ಲಿ ಕೆಲವು ಶಾಸಕರು ಆಗ್ರಹಪಟ್ಟಿದ್ದರೂ ಆ ಕುರಿತಾದ ಮಾಹಿತಿಗಳನ್ನು ಅಂದು ಸದನದಲ್ಲಿ ಸರಕಾರ ಮಂಡಿಸಿರಲಿಲ್ಲ.

RELATED NEWS

You cannot copy contents of this page