ತಾಯಿಯೊಂದಿಗೆ ನಡೆದು ಹೋಗುತ್ತಿದ್ದ ಮಗು ಬೈಕ್ ಢಿಕ್ಕಿ ಹೊಡೆದು ಮೃತ್ಯು

ಕೊಚ್ಚಿ: ತಾಯಿಯೊಂದಿಗೆ ನಡೆದು ಹೋಗುತ್ತಿದ್ದ ೪ರ ಹರೆಯದ ಮಗು ಇಲೆಕ್ಟ್ರಿಕ್ ಬೈಕ್ ಢಿಕ್ಕಿ ಹೊಡೆದು ಮೃತಪಟ್ಟ ದಾರುಣ ಘಟನೆ ಸಂಭವಿಸಿದೆ. ಮುಳಂಕಾಡ್-  ಪೊನ್ನಾರಿಮಂಗಲ ಪಡನ್ನ ಎಂಬಲ್ಲಿನ ಧನೀಶ್ ಎಂಬವರ ಪುತ್ರಿ ಮೇಧ ಧನೀಶ್ ಮೃತಪಟ್ಟ ಮಗುವಾಗಿದೆ. ತಾಯಿ ಮಿಥುನ ಹಾಗೂ ನೆರೆಮನೆಯ ನಿವಾಸಿಯಾದ ರೇಖಾ ಎಂಬಿವರೊಂದಿಗೆ  ಮಗು ನಡೆದು ಹೋಗುತ್ತಿದ್ದಾಗ ನಿಯಂತ್ರಣ ತಪ್ಪಿ ಬಂದ ಇಲೆಕ್ಟ್ರಿಕ್ ಬೈಕ್ ಅವರಿಗೆ ಢಿಕ್ಕಿ ಹೊಡೆದಿದೆ. ಇದರಿಂದ ಗಾಯಗೊಂಡ ಮೇಧ,  ಮಿಥುನ ಹಾಗೂ  ರೇಖಾರನ್ನು ಆಸ್ಪತ್ರೆಗೆ ತಲುಪಿಸಲಾಯಿತು. ತಲೆಗೆ ಗಂಭೀರ ಗಾಯಗೊಂಡ ಮೇಧಳನ್ನು ಶಸ್ತ್ರಚಿಕಿತ್ಸೆಗೊಳಪಡಿಸಿದರೂ ಜೀವ ರಕ್ಷಿಸಲಾಗಲಿಲ್ಲ. ಮಿಥುನ ಹಾಗೂ ರೇಖಾ ಚಿಕಿತ್ಸೆಯಲ್ಲಿದ್ದಾರೆ.

RELATED NEWS

You cannot copy contents of this page