ಕೇಂದ್ರ ಸರಕಾರಿ ನೌಕರರಿಂದ ಕ್ರಿಸ್ಮಸ್ ಆಚರಣೆ

ಕಾಸರಗೋಡು: ಕೇಂದ್ರ ಸರಕಾರಿ ನೌಕರರ ಕಾನ್ಫೆಡರೇಶನ್  ಕಾಸರಗೋಡು ಜಿಲ್ಲಾ ಸಮಿತಿ ಹಾಗೂ ನೇಶನಲ್ ಫೆಡರೇ ಶನ್ ಆಫ್ ಪೋಸ್ಟಲ್ ಎಂಪ್ಲೋಯೀಸ್ ಕಾಸರಗೋಡು ಡಿವಿಶನ್‌ನ ಸಂಯು ಕ್ತಾಶ್ರಯದಲ್ಲಿ  ಕೋಮುವಾದ ರಾಜಕೀಯ ವಿರುದ್ಧ ಕ್ರಿಸ್ಮಸ್ ಹಾಡಿನೊಂದಿಗೆ  ಕ್ರಿಸ್ಮಸ್ ಆಚರಿಸಲಾಯಿತು.  ಕಾಸರಗೋಡು  ಪ್ರಧಾನ ಅಂಚೆ ಕಚೇರಿ ಮುಂದೆ ನಿನ್ನೆ ಸಂಜೆ ನಡೆದ ಕಾರ್ಯಕ್ರಮವನ್ನು ಪ್ರಜಾಪ್ರಭುತ್ವ ಮಹಿಳಾ ಅಸೋಸಿಯೇಶನ್ ರಾಜ್ಯ ಕೋಶಾಧಿಕಾರಿ ಇ. ಪದ್ಮಾವತಿ ಉದ್ಘಾಟಿಸಿದರು. ಕೇಂದ್ರ ನೌಕರರ ಕೌನ್ಫೆಡರೇಶನ್ ಜಿಲ್ಲಾ ಕಾರ್ಯದರ್ಶಿ ಪಿ.ವಿ. ಶರತ್ ಅಧ್ಯಕ್ಷತೆ ವಹಿಸಿದರು. ಸಿ. ರಾಘವನ್, ಕೆ. ಉಣ್ಣಿಕೃಷ್ಣನ್, ಕೆ.ಆರ್. ಬಾಬುರಾಜನ್, ಕೆ.ವಿ. ವಿನ್ಸೆಂಟ್, ಲಲಿತಾಬಾಯ್, ರಾಜೀವನ್ ಮಾತನಾಡಿದರು. ಎಂ. ವಿಪಿನ್ ಸ್ವಾಗತಿಸಿ, ವಿ.ವಿ. ರಾಜನ್ ವಂದಿಸಿದರು.

You cannot copy contents of this page