ಶುಚಿತ್ವ, ಕುಡಿಯುವ ನೀರಿಗೆ ಪೈವಳಿಕೆ ಪಂ.ಬಜೆಟ್‌ನಲ್ಲಿ ಆದ್ಯತೆ

ಪೈವಳಿಕೆ: ಶುಚಿತ್ವ ಹಾಗೂ ಕುಡಿಯುವ ನೀರಿನ ಯೋಜನೆಗಳಿಗೆ  ಪ್ರಾಮುಖ್ಯತೆ ನೀಡಿ ಪೈವಳಿಕೆ ಪಂಚಾಯತ್ ಮುಂಗಡಪತ್ರ ಮಂಡಿಸಲಾಗಿದೆ. ಉಪಾಧ್ಯಕ್ಷ ರಾಘವೇಂದ್ರ ಭಟ್ ಬಜೆಟ್ ಮಂಡಿಸಿದರು. ಅಧ್ಯಕ್ಷೆ ಬದರುನ್ನೀಸ ಸಲೀಂ ಅಧ್ಯಕ್ಷತೆ ವಹಿಸಿದ್ದರು.

ತ್ಯಾಜ್ಯ ಸಂಸ್ಕರಣ ಪ್ಲಾಂಟ್ ಅಭಿವೃದ್ಧಿ ಪಡಿಸಿ ಪೂರ್ಣ ಪ್ರಮಾಣದಲ್ಲಿ ಸಂಸ್ಕರಿಸುವ ಮೂಲಕ ಪಂಚಾಯತ್‌ನ ಎಲ್ಲಾ ಪ್ರದೇಶಗಳಿಂದಲೂ ನಿಯಮಿತವಾಗಿ ತ್ಯಾಜ್ಯ ಸಂಗ್ರಹಿಸಲು ಯೋಜನೆ ರೂಪೀಕರಿಸಲಾಗಿದೆ. ಕೃಷಿ ಹಾಗೂ ಆರೋಗ್ಯರಂಗಕ್ಕೂ ಬಜೆಟ್‌ನಲ್ಲಿ ಅನುದಾನ ಮೀಸಲಿಡಲಾಗಿದೆ. ಮಹಿಳಾ ಶಿಶು ಅಭಿವೃದ್ಧಿ ವಿಭಾಗಕ್ಕೂ ಅಗತ್ಯದ ಪರಿಗಣನೆ ನೀಡಲಾಗಿದೆ. ಬಜೆಟ್ ಮಂಡನಾ ಸಭೆಯಲ್ಲಿ ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷೆ ಸುನೀನ, ಕ್ಷೇಮ ಸ್ಥಾಯಿ ಸಮಿತಿ ಅಧ್ಯಕ್ಷ ಶ್ರೀನಿವಾಸ, ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಸುಮನಾ ಭಟ್, ಪಂಚಾಯತ್ ಕಾರ್ಯದರ್ಶಿ ಜಿಜಿ, ಸಹ ಕಾರ್ಯದರ್ಶಿ ವೆಂಕಟೇಶ್ ಭಟ್, ಯೋಜನಾ ಸಮಿತಿ ಉಪಾಧ್ಯಕ್ಷ ಮುಹಮ್ಮದ್ ಮಾಸ್ತರ್ ಮಾತನಾಡಿದರು. ಪಂ.ಸದಸ್ಯರು ಉಪಸ್ಥಿತರಿದ್ದರು.

RELATED NEWS

You cannot copy contents of this page